March 11, 2026
WhatsApp Image 2024-11-05 at 2.43.29 PM

ಕಾಸರಗೋಡು: ನೀಲೇಶ್ವರ ವಿರಾರ್‌ಕಾವು ದೈವಸ್ಥಾನದ ಕಳಿಯಾಟ ಮಹೋತ್ಸವದ ಸಂದರ್ಭ ಸಂಭವಿಸಿದ ಪಟಾಕಿ ಸ್ಫೋಟ ದುರಂತದಲ್ಲಿ ಗಾಯ ಗೊಂಡಿದ್ದವರ ಪೈಕಿ ಮತ್ತೋರ್ವ ಮೃತಪಟ್ಟಿದ್ದಾರೆ ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿಕೆಯಾಗಿದೆ.

ಚೆರ್ವತ್ತೂರು ತುರುತ್ತಿಯ ಶೋಬಿನ್ ರಾಜ್ (19) ಮೃತಪಟ್ಟವರು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ಕೊನೆಯುಸಿರೆಳೆದಿದ್ದಾರೆ. ಶೋಬಿನ್ ಚೆನ್ನೈಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದರು. ಈಗಾಗಲೇ ಸಂದೀಪ್, ರತೀಶ್, ಬಿಜು ಮೃತಪಟ್ಟಿದ್ದಾರೆ. ಅಸಿ.28ರಂದು ರಾತ್ರಿ ಈ ದುರಂತ ಸಂಭವಿಸಿತ್ತು. ಸ್ಫೋಟದಲ್ಲಿ 154 ಮಂದಿ ಗಾಯ ಗೊಂಡಿದ್ದರು. ಈ ಪೈಕಿ 8 ಮಂದಿ ಗಂಭೀರ ಸುಟ್ಟ ಗಾಯಗೊಂಡಿದ್ದರು. ಗಾಯಾಳುಗಳ ಪೈಕಿ 90ಕ್ಕೂ ಅಧಿಕ ಮಂದಿ ಈಗಲೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.