March 10, 2026
WhatsApp Image 2024-06-05 at 3.40.25 PM

ಪಡುಬಿದ್ರಿ: ಕಾಪು ಮಾರಿಗುಡಿ ಬಳಿ ಸ್ಕೂಟರ್ ಇಟ್ಟು ಹೋಗಿರುವ ಎರ್ಮಾಳು ಗ್ರಾಮದ ಯುವತಿಯೋರ್ವಳು ನಾಪತ್ತೆಯಾದ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ. ನಾಪತ್ತೆಯಾದ ಯುವತಿ ಎರ್ಮಾಳು ಗ್ರಾಮದ ನಿವಾಸಿ ವರ್ಷಾ (27) ಎಂದು ಗುರುತಿಸಲಾಗಿದೆ. ಕಾಪು ಮಾರಿಗುಡಿ ಬಳಿ ಸ್ಕೂಟರ್ ಇಟ್ಟು ಹೋಗಿರುವ ಎರ್ಮಾಳು ಗ್ರಾಮದ ನಿವಾಸಿ ವರ್ಷಾ ನಾಪತ್ತೆಯಾಗಿರುವ ಬಗ್ಗೆ ಅವರ ಅಣ್ಣ ಪಡುಬಿದ್ರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಅವರ ಪತಿ ಪಾದೂರು ಐಎಸ್‌ಪಿಆರ್‌ಎಲ್‌ನಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದು, ಕೆಲಸಕ್ಕೆ ಹೋಗಿದ್ದರು. ಮನೆ ಬಿಟ್ಟು ತೆರಳುವ ವೇಳೆ ಅತ್ತೆ, ಮಾವ ಕೂಡ ಮನೆಯಲ್ಲಿ ಇರಲಿಲ್ಲ. ವರ್ಷಾ ಅವರು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ದಪ್ಪ ಶರೀರ ಹೊಂದಿರುವ ಅವರು ಕರಿಮಣಿ ಸರ ಧರಿಸಿದ್ದಾರೆ. ತುಳು, ಕನ್ನಡ ಭಾಷೆ ಮಾತಾಡಬಲ್ಲವರಾಗಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.