March 5, 2026
WhatsApp Image 2024-09-06 at 2.14.31 PM

ಕಾರ್ಕಳ: ಬ್ಯಾಂಕ್‌ ಸಮಸ್ಯೆ ನಿವಾರಿಸುವ ನೆಪದಲ್ಲಿ ಕರೆ ಮಾಡಿ ವ್ಯಕ್ತಿಯೊಬ್ಬರಿಗೆ 76 ಸಾವಿರ ರೂ. ವಂಚನೆ ಮಾಡಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ಕಸಬಾ ಗ್ರಾಮದ ಬಾಲಚಂದ್ರ ಅವರು ಆಕ್ಸಿಸ್‌ ಬ್ಯಾಂಕ್‌ ಹಾಗೂ ಎಚ್‌ಡಿಎಫ್ಸಿ ಬ್ಯಾಂಕಿನಲ್ಲಿ ಕ್ರೆಡಿಟ್‌ ಕಾರ್ಡ್‌ ಹೊಂದಿದ್ದರು.ಅವರಿಗೆ ಮನುಜ್‌ ಶರ್ಮಾ ಎನ್ನುವವರು ಕರೆ ಮಾಡಿ ಎಚ್‌ಡಿಎಫ್ಸಿ ಬ್ಯಾಂಕ್‌ ಸಮಸ್ಯೆಯನ್ನು ನಿವಾರಿಸುವುದಕ್ಕಾಗಿ ಕರೆ ಮಾಡಿರುವುದಾಗಿ ತಿಳಿಸಿದ್ದರು. ಮನುಜ್‌ ಶರ್ಮಾ, ಬಾಲಚಂದ್ರ ಅವರಿಂದ ಆಕ್ಸಿಸ್‌ ಹಾಗೂ ಎಚ್‌ಡಿಎಫ್ಸಿ ಬ್ಯಾಂಕಿನ ವಿವರಗಳನ್ನು ಪಡೆದು ಅನಂತರ ಒಟಿಪಿ ಪಡೆದಿದ್ದಾರೆ.ಬಳಿಕ ಬಾಲಚಂದ್ರ ಅವರ ಖಾತೆಯ ಎರಡು ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ ಮೂಲಕ 76,188 ರೂ. ಕಡಿತವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.