ಮಣಿಪಾಲ: 10 ನೇ ತರಗತಿಯ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಕಾರಣಕ್ಕೆ ಮನನೊಂದು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದಲ್ಲಿ ನಡೆದಿದೆ.ಮೃತ ಬಾಲಕನನ್ನು ಕಾಪು ಎಲ್ಲೂರು ಗ್ರಾಮದ ಶೇಖರ್ ಎಂಬವರ ಪುತ್ರ ಅಜೀತ್ (17) ಎಂದು ಗುರುತಿಸಲಾಗಿದೆ. ಈತ ಸರ್ಕಾರಿ ಕಿರಿಯ ಕಾಲೇಜು ಪ್ರೌಡಶಾಲೆ ಮುದರಂಗಡಿಯಲ್ಲಿ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು ೨ ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದ. ಹೀಗಾಗಿ ಏಪ್ರಿಲ್ ನಲ್ಲಿ ಪುನಃ ಪರೀಕ್ಷೆ ಬರೆದಿದ್ದು. ಈ ವೇಳೆಯೂ ಅನುತ್ತೀರ್ಣಗೊಂಡಿದ್ದ.
ಅಜೀತ್ ನು ಶಾಲೆ ಇಲ್ಲದ ಕಾರಣ ಕಳೆದ 4 ತಿಂಗಳಿಂದ ಮಣಿಪಾಲದಲ್ಲಿರುವ ಆತನ ಅಜ್ಜಿ ಮನೆಗೆ ಬಂದು ವಾಸಮಾಡಿಕೊಂಡಿದ್ದು ಜು.೩ ರಂದು ಬೆಳಗ್ಗೆ ಬಾತ್ ರೂಂಗೆ ಹೋಗಿದ್ದ. ಎಷ್ಟು ಹೊತ್ತಾದರೂ ಹೊರಬಾರದೇ ಇದ್ದಾದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳೆಕಿಗೆ ಬಂದಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.