March 7, 2026
WhatsApp Image 2024-05-04 at 10.41.38 AM

ಮಂಗಳೂರು: ಕಾಲೇಜಿನಲ್ಲಿ ನಡೆಯುತ್ತಿದ್ದ ಫೆಸ್ಟ್‌ ಒಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ. ಮಂಗಳೂರು ಹೊರ ವಲಯದ ವಳಚ್ಚಿಲ್‌ನಲ್ಲಿರುವ ಕಾಲೇಜಿನಲ್ಲಿ ಈ ಹೊಡೆದಾಟ ನಡೆದಿದೆ.

ಕಾಲೇಜಿನಲ್ಲಿ ಫೆಸ್ಟ್‌ ನಡೆಯುತ್ತಿದ್ದ ವೇಳೆ ಸಣ್ಣ ಕಾರಣವೊಂದಕ್ಕೆ ಜ್ಯೂನಿಯರ್ಸ್ ಹಾಗೂ ಸೀನಿಯರ್ಸ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದು ಬಳಿಕ ಹೊಡೆದಾಟಕ್ಕೆ ತಿರುಗಿದ್ದು, ವಿದ್ಯಾರ್ಥಿಗಳು ಕೈ ಸಿಕ್ಕ ವಸ್ತುಗಳಿಂದ ರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಎಲ್ಲರೂ ಕೇರಳ ಮೂಲದ ವಿದ್ಯಾರ್ಥಿಗಳಾಗಿದ್ದು, ಹೊಡೆದಾಟದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿಗಳ ಹೊಡೆದಾಟದ ಸಮಯದಲ್ಲಿ ಯುವಕನೊಬ್ಬ ಇನ್ನೊಂದು ವಿದ್ಯಾರ್ಥಿ ಮೇಲೆ ಬೈಕ್ ಹತ್ತಿಸುವ ಪ್ರಯತ್ನ ನಡೆಸಿದ್ದು ಕೂಡಾ ವಿಡಿಯೋದಾದಲ್ಲಿ ಕಾಣಿಸುತ್ತಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದ ವೇಳೆ ವಿದ್ಯಾರ್ಥಿಗಳೇ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ತೆರಳಿದ ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ಮಾಹಿತಿ ಲಭ್ಯವಾಗಿದೆ. ಆದ್ರೆ ಹೊಡೆದಾಟಕ್ಕೆ ನಿರ್ಧಿಷ್ಟ ಕಾರಣ ಏನು ಅನ್ನೋದು ಇನ್ನೂ ಕೂಡಾ ನಿಗೂಢವಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.