December 4, 2024
WhatsApp Image 2024-12-03 at 5.44.44 PM

ಉಡುಪಿ: ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕೊಲೆ ಅತ್ಯಾಚಾರ ಮತ್ತು ಹಿಂಸೆ ವಿರುದ್ಧ ನಾಳೆ ಉಡುಪಿಯಲ್ಲಿ ಹಿಂದೂ ಹಿತ ರಕ್ಷಣಾ ಸಮಿತಿಯಿಂದ ಪ್ರತಿಭಟನಾ ಜಾಥಾ ನಡೆಯಲಿದೆ.

ಬುಧವಾರ ಮಧ್ಯಾಹ್ನ 3 ಗಂಟೆಗೆ ಜೋಡುಕಟ್ಟೆಯಿಂದ ಪ್ರಾರಂಭವಾಗುವ ಪ್ರತಿಭಟನಾ ಜಾಥಾ ಉಡುಪಿ ಸರ್ವಿಸ್ ಬಸ್ ಸ್ಟ್ಯಾಂಡ್, ಸಿಟಿ ಬಸ್ ಸ್ಟ್ಯಾಂಡ್, ಕಲ್ಸಂಕ ಮಾರ್ಗವಾಗಿ ಕೃಷ್ಣಮಠದ ಪಾರ್ಕಿಂಗ್ ವಠಾರದಲ್ಲಿ ಸಮಾಪನಗೊಳ್ಳಲಿದೆ. ಈ ಸಭೆಯಲ್ಲಿ ಸಾವಿರಾರು ಜನ ಸೇರಲಿದ್ದು ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಕ್ರಮ ವಹಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.