ಸಂಡೂರು : ರಾಜ್ಯದ ಪ್ರತೀ ಜಿಲ್ಲೆಗಳಿಗೆ ಹೋಗಿ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಬೆದರಿಕೆ ಹಾಕಿಸಿ, ರೈತರ ಜಮೀನುಗಳಿಗೆ ವಕ್ಫ್ ಆಸ್ತಿ ಎಂದು ನೋ ಟಿಸ್ ಕೊಡಿಸುತ್ತಿರುವ ಜಮೀರ್ ಒಬ್ಬ ಅಯೋಗ್ಯ ಮಂತ್ರಿ,ಕೂಡಲೇ ಗಡಿಪಾರುಮಾಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಡೂರಿನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜಮೀರ್ ರಾಜ್ಯದ ತುಂಬಾ ಓಡಾಡುತ್ತಿದ್ದಾನೆ. ರೈತರ ಜಮೀನುಗಳಿಗೆ ವಕ್ಫ್ ಎಂದು ಹೇಳಿ ನೋಟಿಸ್ ಕೊಡಿಸುತ್ತಿರುವ ಅವನೊಬ್ಬ ಪುಡಾರಿ ಎಂದು ಏಕವಚನದಲ್ಲಿ ಟೀಕಿಸಿದರು.
ದೇವಸ್ಥಾನ, ಮಠಮಾನ್ಯಗಳಿಗೂ ನೋ ಟಿಸ್ ಕೊಡಲು ಹೇಳುತ್ತಿದ್ದಾನೆ. ಇಲ್ಲವಾದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಅಧಿಕಾರಿಗಳಿಗೆ ಬೆದರಿಸುತ್ತಿದ್ದಾನೆ. ಸಮಾಜಕ್ಕೆ ಬೆಂಕಿ ಹಚ್ಚುತ್ತಿರುವ ಜಮೀರ್ ರೀತಿಯ ಅಯೋಗ್ಯ ಮಂತ್ರಿಯನ್ನು ರಾಜ್ಯದಲ್ಲಿ ಇಟ್ಟುಕೊಳ್ಳುವುದಕ್ಕಿಂತಲೂ ಗಡಿಪಾರುಮಾಡಬೇಕು ಎಂದು ವಾಗ್ದಾಳಿ ನಡೆಸಿದರು