March 21, 2026
wmremove-transformed (1)

ಬೆಳ್ತಂಗಡಿ : ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು. ಎಸ್.ಐ.ಟಿ ಕಚೇರಿಗೆ ಆರು ಮಂದಿ ಯೂಟ್ಯೂಬರ್ ಗಳು ಅ.3 ರಂದು ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ್ದಾರೆ. ಜೊತೆಯಲ್ಲಿ ಹೋರಾಟಗಾರ ಜಯಂತ್.ಟಿ ಮಗ ಜೀವನ್ ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ‌.

ಯೂಟ್ಯೂಬರ್ ಗಳಾದ ಡಿ ಟಾಸ್ಕ್ ಯೂಟ್ಯೂಬ್ ವಾಹಿನಿಯ ದಿನೇಶ್, ದೂತ ಯೂಟ್ಯೂಬ್ ವಾಹಿನಿಯ ಸಮೀರ್.ಎಮ್.ಡಿ , ಸಂಚಾರಿ ಸ್ಟೂಡಿಯೋ ಯೂಟ್ಯೂಬ್ ವಾಹಿನಿಯ ಸಂತೋಷ್ ಕಡಬ, ಕುಡ್ಲ ರಾಮ್ ಪೇಜ್ ಯೂಟ್ಯೂಬ್ ವಾಹಿನಿಯ ಅಜಯ್ ಅಂಚನ್, ಯುನೈಟೆಡ್ ಮೀಡಿಯಾ ಯೂಟ್ಯೂಬ್ ವಾಹಿನಿಯ ಅಭಿಷೇಕ್ ಸೇರಿ ಒಟ್ಟು ಆರು ಮಂದಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಹೋರಾಟಗಾರ ಜಯಂತ್.ಟಿ ಮಗ ಜೀವನ್ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ ವಿಡಿಯೋ ಮಾಡಿದ ಪ್ರಕರಣಕ್ಕೆ ವಿಚಾರಣೆ ಮಾಡಲು ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.