
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘವು ಸಮಾಜಿಕ ಸೇವೆಯ ಸಾಧನೆಗಾಗಿ 2025ನೇ ಸಾಲಿನ ಪ್ರತಿಷ್ಠಿತ ದ ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಕುಲಾಲ್ ಸಮುದಾಯದ ನಾಯಕ ಶ್ರೀ ಮಯೂರ್ ಉಳ್ಳಾಲ್ ರವರಿಗೆ ಸಮಸ್ತ ಕುಂಬಾರ/ ಕುಲಾಲ್ ಬಾಂಧವರು ಅಭಿಮಾನದ ಅಭಿನಂದನೆಗಳು ಸಲ್ಲಿಸಿದರು.

ಕುಲಾಲರ ಕುಲದೇವರು ಶ್ರೀ ವೀರನಾರಾಯಣ ದೇವಸ್ಥಾನವನ್ನು ಸಮುದಾಯದ ಸಂಘಟನೆಯ ಶಕ್ತಿಯೊಂದಿಗೆ ಜೀರ್ಣೋದ್ದಾರ ಗೊಳಿಸಿದ ಸಮುದಾಯ ಸಾರಥಿ. ಕುಲಾಲ್ ಸಮುದಾಯದ ಹಿರಿಯ ಚೇತನ, ಸಮಾಜ ರತ್ನ ಡಾ. ಅಮ್ಮೆoಬಳ ಬಾಳಪ್ಪರ ಹೆಸರನ್ನು ಮಂಗಳೂರಿನಲ್ಲಿ ಕೇಂದ್ರ ರೈಲ್ವೆ ನಿಲ್ದಾಣದ ಪ್ರಮುಖ ರಸ್ತೆಗೆ ನಾಮಕರಣ ಮಾಡಿಸಿದ ಛಲದಂಕ ಮಲ್ಲ.

ತನ್ನ ಕನಸಿನ ಯೋಜನೆಯಾದ ಸಮುದಾಯದ ಬಡ ಹೆಣ್ಣುಮಕ್ಕಳಿಗೆ ನೆರವಾಗಬಲ್ಲ ವಿದ್ಯಾರ್ಥಿನಿ ನಿಲಯದ ನಿರ್ಮಾಣಕ್ಕೆ ಸಿ ಎ ಸೈಟ್ ಅನುಮೋದಿಸಿ ಶೀಘ್ರದಲ್ಲೇ ದೊಡ್ಡ ಮೊತ್ತದ ಅನುದಾನ ಮತ್ತು ಸಮುದಾಯ ದ ಕೊಡುಗೈ ದಾನಿಗಳ ಸಹಭಾಗಿತ್ವದಲ್ಲಿ ಶಿಲಾನ್ಯಾಸ ನೆರವೇರಿಸಲಿರುವ ಸಮುದಾಯದ ಧೀಮಂತ ನಾಯಕ. ಸಮುದಾಯದ ಅಭಿವೃದ್ಧಿಗಾಗಿ, ಸಮುದಾಯದ ಏಳ್ಗೆಗಾಗಿ ಹಗಲಿರುಳೆನ್ನದೆ ಜೀವನ ಸವೆಸುವ ಅಪ್ರತಿಮ ನಾಯಕ ಪದಗಳಿಂದ ಬನ್ನಿಸಲು ಸಾಧ್ಯವಿಲ್ಲದ ತ್ಯಾಗ ಮನೋಭಾವನೆಯ ಜೀವ ಚೈತನ್ಯ, ನೇರ ನಡೆಯ,ನಮ್ಮೆಲ್ಲರ ಹೆಮ್ಮೆಯ ಸಮುದಾಯ ಶಕ್ತಿ ಇವರ ಈ ಸಮಾಜಮುಖಿ,ಧಾರ್ಮಿಕ,ಶೈಕ್ಷಣಿಕ ಸೇವೆಗಳಿಗೆ ಸಂದ ಗೌರವ, ಕುಲಾಲ ಸಮುದಾಯದ ಗರಿಮೆ ಇನ್ನಷ್ಟು ಹೆಚ್ಚಿಸಿದೆ ಈ ಪ್ರಶಸ್ತಿ ಎಂದು ಕುಲಾಲ ಸಮುದಾಯದ ಗಣ್ಯರು ನುಡಿದರು.
