ಬೆಳ್ತಂಗಡಿ: ವೀರಕೇಸರಿ ಬೆಳ್ತಂಗಡಿ ಸಂಘಟನೆಯ 200ನೇ ಸೇವಾಯೋಜನೆಯಾದ 8ನೇ ಆಸರೆ ಮನೆಯ ಭೂಮಿಪೂಜಾ ಕಾರ್ಯಕ್ರಮವು ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಅಂತರಬೈಲು ಪಾದೆಮೇಲಿನಲ್ಲಿ ನ. 25ರಂದು ನಡೆಯಿತು.
ಇದರೊಂದಿಗೆ 183 ಮತ್ತು 184 ಅನಾರೋಗ್ಯಗಳಿಂದ ಬಳಲುತ್ತಿರುವ ಎರಡು ಕುಟುಂಬಗಳಿಗೆ ಯೋಜನೆಯನ್ನು ಸ್ವಾಮೀಜಿ ಮತ್ತು ಗಣ್ಯ ವ್ಯಕ್ತಿಗಳ ತಂಡದ ಸದಸ್ಯರ ಸಮ್ಮುಖದಲ್ಲಿ ಹಸ್ತಾಂತರ ಕೂಡ ಮಾಡಲಾಯಿತು.
ಮನೆ ಕಟ್ಟುವ ಕಾರ್ಯವು ಈಗಾಗಲೇ ಪ್ರಾರಂಭವಾಗಿದೆ. ಇನ್ನು ಮುಂದಿನ ಕಾರ್ಯಗಳಿಗೆ ದಾನಿಗಳ ಸಹಕಾರವನ್ನು ನಿರೀಕ್ಷಿಸಲಾಗಿದೆ ಎಂದು ವೀರಕೇಸರಿ ಬೆಳ್ತಂಗಡಿ ಸಂಘಟನಾಕಾರರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪರಮ ಪೂಜ್ಯ ಶ್ರೀ ನಾಗಸಾಧು ತಪೋನಿಧಿ ಬಾಬಾ ಶ್ರೀ ವಿಠ್ಠಲ್ ಗಿರಿ ಜಿ ಮಹಾರಾಜ್, ಪಂಚಾಯಿತಿ ಅಖಾಡ ಶ್ರೀನಿರಂಜನಿ ಮಾಯಾಪುರಿ ಹರಿದ್ವಾರ್,ಸನ್ಮಾನ್ಯ ಶ್ರೀ ಮೋಹನ್ ಕುಮಾರ್, ಲಕ್ಷ್ಮೀ ಗ್ರೂಪ್ ಉಜಿರೆ ಇದರ ಮಾಲೀಕರು ಹಾಗೂ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್(ರಿ) ಉಜಿರೆ ಇದರ ಸ್ಥಾಪಕಾಧ್ಯಕ್ಷರು, ಸನ್ಮಾನ್ಯ ಶ್ರೀ ವೆಂಕಟರಮಣ ಶಮಾ೯ ಗುರುವಾಯನಕೆರೆ, ಭಾರತೀಯ ಭೊ ಸೇನೆ ನಿವೃತ್ತ ಮಾಜಿ ಸೈನಿಕರು,ಶ್ರೀ ಥೋಮಸ್ ಫಿಲಿಪ್ ಸೈನಿಕರು, ಭಾರತೀಯ ಭೊ ಸೇನೆ ವೀರ ಯೋಧ ಶ್ರೀ ಗಣೇಶ್ ಕುಲಾಲ್ ಕೆದಿಲ,ಸಹ ಸಂಯೋಜಕ ಹಿಂದೂ ಜಾಗರಣ ವೇದಿಕೆ ಮಂಗಳೂರು ಮಹಾನಗರ,ಶ್ರೀ ಕೃಷ್ಣಮೂತಿ೯ ಮಧುಗಿರಿ ತುಮಕೂರು, ಲೆಕ್ಕ ಪರಿಶೋಧಕರು ಮತ್ತು ತೆರಿಗೆ ಸಲಹೆಗಾರರು ಮಧುಗಿರಿ ತುಮಕೂರು ಜಿಲ್ಲೆ,ಶ್ರೀ ವಿಜಯ ಕುಮಾರ್ ಜೈನ್,ಆಮಂತ್ರಣ ಪರಿವಾರ ಸ್ಥಾಪಕಧ್ಯಕ್ಷರು,ಶ್ರೀ ಹರ್ಷೇಂದ್ರ ಗುಡಿಗಾರ್, ಸಂಚಾಲಕರು ರಾಷ್ಟ್ರೀಯ ತುಳು ಗುಡಿಗಾರ ಸಂಘ(ರಿ),ಶ್ರೀ ರವೀಂದ್ರ ಗುಡಿಗಾರ್, ಅಧ್ಯಕ್ಷರು ರಾಷ್ಟ್ರೀಯ ತುಳು ಗುಡಿಗಾರ ಸಂಘ (ರಿ),ಶ್ರೀಮತಿ ವಿಮಲಾ,ಅಧ್ಯಕ್ಷರು ಗ್ರಾಮ ಪಂಚಾಯತ್ ಕಲ್ಮಂಜ,ಶ್ರೀ ಮತಿ ಪೂರ್ಣಿಮಾ,ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಕಲ್ಮಂಜ,ಶ್ರೀ ಕೃಷ್ಣಪ್ಪ ಗುಡಿಗಾರ್, ಗೌರವಧ್ಯಕ್ಷರು ರಾಷ್ಟ್ರೀಯ ತುಳು ಗುಡಿಗಾರ ಸಂಘ(ರಿ),ಶ್ರೀ ಪ್ರಭಾಕರ್ ಸಿ.ಜಿ. ಕನ್ಯಾಡಿ, ಸಮಾಜ ಸೇವಕರು,ಶ್ರೀ ಸತೀಶ್ ಶೆಟ್ಟಿ,ಸಂಚಾಲಕರು ವೀರಕೇಸರಿ ಬೆಳ್ತಂಗಡಿ ಮತ್ತು ತಂಡದ ಸದಸ್ಯರು ಹಾಗೂ ಊರಿನ ಸಮಸ್ತ ಜನತೆ ಉಪಸ್ಥಿತರಿದ್ದರು.