ಮಂಗಳೂರು: ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಈ ಬಾರಿಯ ವರ್ಷಾವಧಿ ಮಹಾಪೂಜೆಗೆ ಮುಂಚಿತವಾಗಿ ಫೆ. 11ರಿಂದ 15ರ ವರೆಗೆ ಬ್ರಹ್ಮಕಲಶೋತ್ಸವ ನೆರವೇರಲಿದೆ ಎಂದು ಪ್ರಧಾನ ಸಂಚಾಲಕ ಗೌತಮ್ ಸಾಲ್ಯಾನ್ ಕೋಡಿಕಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಫೆ. 11ರಂದು ಬ್ರಹ್ಮಕಲಶೋತ್ಸವ ವಿಧಿ ಆರಂಭವಾಗಲಿದ್ದು, 13ರಂದು ಪುನಃ ಪ್ರತಿಷ್ಠೆ, 15ರಂದು ಬ್ರಹ್ಮಕಲಶೋತ್ಸವ, 16ರಂದು ವರ್ಷಾವಧಿ ಮಹಾಪೂಜೆ ಪ್ರಸಾದ ಹಾರಿಸುವಿಕೆ, 23ರಂದು ಚಂಡಿಕಾಯಾಗ, 26, 27ರಂದು ವರ್ಷಾವಧಿ ಪೂಜೆ ಮತ್ತು ಮಾ.
2ರಂದು ಮಲರಾಯ ನೇಮ ನೆರವೇರಲಿದೆ ಎಂದರು.
ಗರ್ಭಗುಡಿಯ ದುರಸ್ತಿ ಸಹಿತ ದೇವಸ್ಥಾನದ ಸುತ್ತು ಪೌಳಿಗಳನ್ನು ನವೀಕರಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ನ. 30ರಂದು ಕ್ಷೇತ್ರದ ಗರ್ಭಗುಡಿಯಲ್ಲಿರುವ ಶ್ರೀ ಮಾರಿಯಮ್ಮ ದೇವಿ ಮತ್ತು ಪರಿವಾರದ ಇತರ ವಿಗ್ರಹ ಗಳನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಕ್ಷೇತ್ರದ ಮುಂಭಾಗದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
ವಾಗುತ್ತಿರುವ ನೂತನ ಬೃಹತ್ ಸಭಾಂಗಣ ಶ್ರೀ ಮಾರಿಯಮ್ಮ ಸಮುದಾಯ ಭವನದ ಕಾಮಗಾರಿ ಗಳು ಅಂತಿಮ ಹಂತದಲ್ಲಿದ್ದು, ಜನವರಿ ಯಲ್ಲಿ ಉದ್ಘಾಟನೆ ನೆರವೇರಲಿದೆ ಎಂದು ತಿಳಿಸಿದರು.
ಕ್ಷೇತ್ರದ ನವೀಕರಣ, ನೂತನ ಬೃಹತ್ ಸಭಾಂಗಣ ನಿರ್ಮಾಣ, ಬ್ರಹ್ಮಕಲಶೋತ್ಸವಗಳನ್ನು ಯಶಸ್ವಿಯಾಗಿ ನಡೆಸುವ ಉದ್ದೇಶಕ್ಕಾಗಿ ಡಾ| ಜಿ. ಶಂಕರ್ ಗೌರವಾಧ್ಯಕ್ಷತೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ರಚಿಸಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಶಾಸಕ ವೇದವ್ಯಾಸ ಕಾಮತ್ ಗೌರವಾಧ್ಯಕ್ಷ ರಾಗಿರುತ್ತಾರೆ. ಅವಿಭಜಿತ ದ.ಕ. ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಗೌರವ ಸಲಹೆಗಾರರಾಗಿರುತ್ತಾರೆ ಎಂದು ಹೇಳಿದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಲಕ್ಷ್ಮಣ್ ಅಮೀನ್ ಕೋಡಿಕಲ್ ಮಾತನಾಡಿ, ಮಂಗಳೂರಿನ ಇತಿಹಾಸದಲ್ಲೇ ನಡೆಯದ ರೀತಿಯ ಬ್ರಹ್ಮಕಲಶೋತ್ಸವ ನಡೆಸಲು ಸಿದ್ಧತೆ ನಡೆಸುತ್ತಿದ್ದೇವೆ ಎಂದರು.
ಮೊಗವೀರ 7 ಪಟ್ಣ ಸಂಯುಕ್ತ ಸಭಾ ಅಧ್ಯಕ್ಷ ಲೋಕೇಶ್ ಸುವರ್ಣ ಕುದ್ರೋಳಿ-3, ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಬಂಗೇರ ಬೋಳೂರ, ಸಮಿತಿಯ ಉಪಾಧ್ಯಕ್ಷ ಕುಮಾರ್ ಮೆಂಡನ್ ಬೈಕಂಪಾಡಿ, ಕೋಶಾಧಿಕಾರಿ ವಸಂತ ಅಮೀನ್ ಬೈಕಂಪಾಡಿ, ಆರ್ಥಿಕ ಸಮಿತಿಯ ಮೋಹನ್ ಬೆಂಗ್ರೆ, ಪ್ರಚಾರ ಸಮಿತಿಯ
ಯಶವಂತ್ ಬೋಳೂರು ಮತ್ತು ಸುಭಾಷ್ ಕುಂದರ್ ಇದ್ದರು.