ಕೇರಳದಲ್ಲಿ ಮಂಗಳೂರಿನ ಕುಖ್ಯಾತ ರೌಡಿಶೀಟರ್ ಬರ್ಬರ ಹತ್ಯೆ ಮಾಡಲಾಗಿದೆ. ನಟೋರಿಯಸ್ ರೌಡಿಶೀಟರ್ ಟೋಪಿ ನೌಫಾಲ್ ಎಂಬಾತನನ್ನು ಬರ್ಬರ ಹತ್ಯೆ ಮಾಡಲಾಗಿದೆ.
ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳದ ರೈಲ್ವೆ ಗೇಟ್ ಬಳಿಯಲ್ಲಿ ಕೊಚ್ಚಿ ನೌಫಾಲ್ ಕೊಲೆ ಮಾಡಲಾಗಿದೆ. ನೌಫಾಲ್, ಫರಂಗಿಪೇಟೆ ಜೋಡಿ ಕೊಲೆ ಕೇಸ್ ನಲ್ಲಿ ಪ್ರಮುಖ ಆರೋಪಿಯಾಗಿದ್ದನು.
ಮಾರಕಾಸ್ತ್ರಗಳಿಂದ ಕೊಚ್ಚಿ ನೌಫಾಲ್ ಅನ್ನು ದುಷ್ಕರ್ಮಿಗಳು ಕೊಂದಿದ್ದಾರೆ. ಮಂಗಳೂರಿನ ಫೈಸಲ್ ನಗರದ ನಿವಾಸಿ ಟೋಪಿ ನೌಫಾಲ್ ಆಗಿದ್ದನು. ಉಪ್ಪಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.