March 20, 2026
WhatsApp Image 2025-10-16 at 5.01.50 PM

ಭಟ್ಕಳ: ಸ್ಥಳೀಯ ವ್ಯಾಪಾರಿಯಿಂದ 21 ಲಕ್ಷ ರೂ. ಪಡೆದು ವಂಚಿಸಿದ ಆರೋಪ ಭಟ್ಕಳದ ನಿವಾಸಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಮಹಮದ್ ಶಬೀ ಅವರಿಂದ ಆಸಿಪ್ ಇಕ್ಬಾಲ್ ಎಂಬಾತ 21 ಲಕ್ಷ ರೂ. ಪಡೆದು ವಂಚಿಸಿದ್ದಾರೆ.

ಭಟ್ಕಳದ ಸುಲ್ತಾನ್ ಸ್ಟ್ರೀಟ್ ಪ್ರದೇಶದ ನಿವಾಸಿ ಮಹಮದ್ ಶಬೀ ಅವರಿಗೆ, ಬಂದರು ರಸ್ತೆ ಭಾಗದ ಆಸಿಪ್ ಇಕ್ಬಾಲ್ ಅವರ ಪರಿಚಯವಿತ್ತು. ವ್ಯವಹಾರದ ವೇಳೆ ಆಸಿಪ್ ಇಕ್ಬಾಲ್ ಅವರು ತಮ್ಮ ಹೆಸರಿನಲ್ಲಿ “ಮೆಟ್ರೋ ಇನ್‌ಪೋಟೆಕ್ ಪ್ರೈವೇಟ್ ಲಿಮಿಟೆಡ್” ಕಂಪನಿಯ ಟೆಂಡರ್ ದೊರೆತಿದೆ ಎಂದು ಹೇಳಿ, ನಕಲಿ ದಾಖಲೆಗಳನ್ನು ತೋರಿಸಿ ವಿಶ್ವಾಸ ಗಳಿಸಿದ್ದರೆಂದು ತಿಳಿದುಬಂದಿದೆ.

ಅವರು “ಪ್ರಾಜೆಕ್ಟ್ ಆರಂಭವಾದ ನಂತರ ಮೂರು ಪಟ್ಟು ಲಾಭ ಸಿಗುತ್ತದೆ” ಎಂದು ಭರವಸೆ ನೀಡಿ, ಪ್ರಾರಂಭದಲ್ಲಿ 5 ಲಕ್ಷ ರೂಪಾಯಿ ಪಡೆದುಕೊಂಡರು. ಬಳಿಕ ರೈಲು ನಿಲ್ದಾಣದ ಬಳಿ ಭೇಟಿ ಮಾಡಿ ಮತ್ತಷ್ಟು 13 ಲಕ್ಷ ರೂಪಾಯಿ ಸ್ವೀಕರಿಸಿದರೆಂದು ಶಬೀ ಆರೋಪಿಸಿದ್ದಾರೆ. ನಂತರ ಮೊಬೈಲ್ ಟ್ರಾನ್ಸ್ಫರ್ ಮೂಲಕ ಉಳಿದ ಹಣವನ್ನು ಪಡೆದಿದ್ದಾರೆ.

ಆದರೆ ಬಳಿಕ ಹಣವನ್ನು ಹಿಂತಿರುಗಿಸದೇ ಸಂಪರ್ಕ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ, ಮಹಮದ್ ಶಬೀ ಅವರು ಭಟ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.