March 20, 2026
WhatsApp Image 2025-09-01 at 12.44.09 PM

ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣವೊಂದಕ್ಕೆ ಸಂಬಂಧಿಸಿ ಕಳೆದ 11ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಗದಗ ಜಿಲ್ಲೆಯ ನರಗುಂದ ಮಾರುತಿ ನಗರದ ಸಂಜು ಪತ್ತಾರ್ ಯಾನೆ ಸಂಜು ಬಡಿಗೇರ್(36) ಎಂದು ಗುರುತಿಸಲಾಗಿದೆ.

ಈತ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ 11 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಖಚಿತ ಮಾಹಿತಿ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯ ಸಿಬಂದಿ ರಾಘವೇಂದ್ರ ಮತ್ತು ಆನಂದಯ್ಯ ಎಂಬವರು ಬೆಳಗಾವಿಯ ಅನಗೋಳಿಯ ಅಂಬೇಡ್ಕರ್‌ಗಲ್ಲಿ ಎಂಬಲ್ಲಿ ಆಗಸ್ಟ್ 30ರಂದು ವಶಕ್ಕೆ ಪಡೆದು ಬಂಧಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.