ಮುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಕ್ಕೆ ಮಂಗಳೂರು ತಹಶೀಲ್ದಾರ್ ಭೇಟಿ

ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳವೂರು ದುರ್ಗಕೊಡಿಯಲ್ಲಿ ಸುಂದರಿ ಇವರ ಮನೆಗೆ ಗುಡ್ಡ ಜರಿದು ಯಾವುದೇ ಕ್ಷಣದಲ್ಲಿ ಮನೆ ಬೀಳುವ ಪರಿಸ್ಥಿತಿ ಉಂಟಾಗಿದೆ . ಸುಮಾರು 50 – 60 ವರ್ಷಗಳಿಂದ ವ್ಯಾಸ್ತವ್ಯ ಹೂಡಿರುವ ಸುಂದರಿಯವರ ಮನೆಗೆ ಕಳೆದ ವರ್ಷದ ಮಳೆಯಲ್ಲಿ ಕೂಡ ಗುಡ್ಡದ ನೀರು ಹರಿದು ಭಾರಿ ಹಾನಿಯಾಗಿತ್ತು .

ಇದಕ್ಕೆ ಕಾರಣ PWD ಪಕ್ಕ ಲಕ್ಷ್ಮಿ ರಮೇಶ್ ರಾವ್ ಎಂಬವರು ಜಾಗ ಖರೀದಿ ಮಾಡಿದ್ದು ಅವೈಜ್ಞಾನಿಕವಾಗಿ ಜಾಗವನ್ನು ಅಗೆದಿದ್ದು PWD ಚರಂಡಿ ಹಾಗೂ ನೀರು ಹೋಗುವ ತೋಡು ಮುಚ್ಚಿದರ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ . ಮುತ್ತೂರು ಗ್ರಾಮ ಪಂಚಾಯತ್ ನಿಂದ ಹಲವಾರು ಬಾರಿ ತೊಡನ್ನು ತೆರವುಗೊಳಿಸಿ ಮಳೆಯ ನೆರನ್ನು ಸುಗಮವಾಗಿ ಹರಿಯಲು ಬಿಡಬೇಕೆಂದು ಹೇಳಿದಾಗಲು ಸ್ಥಳದ ಮಾಲೀಕರಾದ ಲಕ್ಷ್ಮಿಯವರು ನೀರು ಹೋಗಲು ಬಿಡದೆ ತೋಡಿಗೆ ಅಡ್ಡಗಟ್ಟಿರುತ್ತಾರೆ .

ಸದ್ರಿ ಈಗ ಸುಂದರಿಯವರ ಕುಟುಂಬ ಮನೆಯಲ್ಲಿ ವಾಸಿಸಲು ಭಯದ ವಾತಾವರಣದಲ್ಲಿದ್ದು ಇದಕ್ಕೆ ಸೂಕ್ತ ಪರಿಹಾರ ಒದಗಿಸಿದಿದ್ದಲ್ಲಿ ನಾವು ಮನೆಯನ್ನು ಖಾಲಿ ಮಾಡುವುದಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ . ಹಾನಿಯಾದ ಮನೆಗೆ ಮಂಗಳೂರು ತಾಲೂಕು ಸಹಾಯಕ ಆಯುಕ್ತರಾದ ಹರ್ಷವರ್ಧನ್ , ತಹಶೀಲ್ದಾರರಾದ ಪ್ರಶಾಂತ್ ಪಾಟೀಲ್ , ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ , ಉಪಾಧ್ಯಕ್ಷರಾದ ಸುಷ್ಮಾ , ಸದಸ್ಯರುಗಳಾದ ಜಗದೀಶ್ ದುರ್ಗಾಕೋಡಿ , ಮಾಲತಿ , ತೋಮಸ್ ಹೆರಾಲ್ಡ್ ರೋಜಾರಿಯೋ , ತಾರನಾಥ್ ಕುಲಾಲ್ , ಶಶಿಕಲಾ , ರುಕ್ಮಿಣಿ , ಗ್ರಾಮ ಲೆಕ್ಕಾಧಿಕಾರಿ ಮುತ್ತಪ್ಪ ಬಡಿಗೇರ್ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಮೋದ್ ಎಸ್ ನಾಯ್ಕ್ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು .
ಈ ವೇಳೆ ಸಹಾಯಕ ಆಯುಕ್ತರಾದ ಹರ್ಷವರ್ಧನ್ ಇವರು ಮನೆಯವರನ್ನು 2 ತಿಂಗಳ ತನಕ ಬಾಡಿಗೆ ಮನೆಯಲ್ಲಿ ಇರುವಂತೆ ಸೂಚಿಸಿದರು

Check Also

ಮಂಗಳೂರು : ಇನ್ನೊಬ್ಬರ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೆ ತೆತ್ತ ಅರ್ಚನಾ ಕಾಮತ್…!!

ಮಂಗಳೂರು : ಇನ್ನೊಬ್ಬರ ಜೀವ ಉಳಿಸಲು ಹೋಗಿ ತನ್ನ ಮಹಿಳೆಯೊಬ್ಬರು ತನ್ನ ಪ್ರಾಣವನ್ನೇ ತೆತ್ತ ಹೃದಯವಿದ್ರಾವಕ ಘಟನೆ ನಡೆದಿದೆ. ಮೃತರನ್ನು …

Leave a Reply

Your email address will not be published. Required fields are marked *

You cannot copy content of this page.