March 4, 2026
WhatsApp Image 2024-03-26 at 12.21.48 PM

ಉಡುಪಿ : ಬಾರ್‌ವೊಂದಕ್ಕೆ ನುಗ್ಗಿದ ಕಳ್ಳರು ಕ್ಯಾಶ್ ಕೌಂಟರ್‌ನಲ್ಲಿ ಇಟ್ಟಿದ್ದ ಲಕ್ಷಾಂತರ ರೂ. ದೋಚಿ ಪರಾರಿಯಾಗಿರುವ ಘಟನೆ ಅಂಬಾಗಿಲಿನಲ್ಲಿ ನಡೆದಿದೆ. ಅಂಬಾಗಿಲಿನಲ್ಲಿರುವ ಬಾರ್ ನಲ್ಲಿ ಕ್ಯಾಶಿಯರ್ ಆಗಿದ್ದ ವಸಂತ ಅವರು ರಾತ್ರಿ ಕೆಲಸ ಮುಗಿಸಿ ಬಾರ್ ಬಂದ್ ಮಾಡಿ ಮನೆಗೆ ಹೋಗಿದ್ದರು. ಬೆಳಿಗ್ಗೆ ಬಾರ್‌ಗೆ ಅಡುಗೆ ಕೆಲಸಕ್ಕೆಂದು ಬಂದವರು ಬಾರ್‌ನ ಶಟರ್‌ ಮಧ್ಯದಲ್ಲಿ ತೆರೆದಿರುವುದು ಕಂಡು ವಸಂತ ಅವರಿಗೆ ತಿಳಿಸಿದಂತೆ ವಸಂತರವರು ಬಂದು ನೋಡಿದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಶಟರ್ ನ ಮದ್ಯದಲ್ಲಿ ಒಳ ನುಗ್ಗಿದ ಕಳ್ಳರು ಕ್ಯಾಶ್ ಕೌಂಟರ್ ನಲ್ಲಿ ಇಟ್ಟಿದ್ದ ರೂ. 1,20,000/- ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಘಟನೆ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.