March 19, 2026
WhatsApp Image 2024-05-01 at 9.01.21 AM
ಕಾರ್ಕಳ : ಕಾರ್ಕಳದ ಆನಂತಶಯನದ ಬಳಿ ಇರುವ ಅಪಾರ್ಟಮೆಂಟ್ ನಲ್ಲಿ ಬಾಡಿಗೆಗೆ ವಾಸವಾಗಿದ್ದ   ಯುವತಿಯೊರ್ವಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತ ಯುವತಿಯನ್ನು  ವಿಜಯ (23) ಎಂದು ಗುರುತಿಸಲಾಗಿದೆ. ವಿಜಯ ಸುಮಾರು 10 ವರ್ಷಗಳಿಂದ ಅಸ್ತಮಾ ಹಾಗೂ ಬೆನ್ನು ನೋವು ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ವಿಜಯರವರ ತಂದೆ ಆಗಾಗ ಅಪಾರ್ಟ್ ಮೆಂಟ್ ಗೆ ಹೋಗುತ್ತಿದ್ದು, ಎ.30 ರಂದು ಬೆಳ್ತಂಗಡಿ ಮೂಲದ ಅವರ ಅಕ್ಕ ಹಾಗೂ  ತಂದೆ ಆನಂದ ಅಪಾರ್ಟಮೆಂಟ್ ಗೆ ಬಂದು  ಬೆಡ್ ರೂಮಿನಲ್ಲಿ ನೋಡಿದಾಗ ಮಗಳು  ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

About The Author

Leave a Reply

Your email address will not be published. Required fields are marked *

You cannot copy content of this page.