ಜೂ. 1 ವಿಶ್ವ ಹಾಲು ದಿನ 2022ನ್ನು ಆಚರಿಸಲಾಗುತ್ತಿದೆ. ನಿಮ್ಮ ಹೃದಯದ ಆರೋಗ್ಯ, ಮೂಳೆಗಳ ಆರೋಗ್ಯ ಮತ್ತು ಸ್ನಾಯುಗಳ ಬಲವನ್ನು ಕಾಪಾಡಿಕೊಳ್ಳಲು ಹಾಲು ಕುಡಿಯುವುದು ಪ್ರತಿ ಒಬ್ಬರಿಗೂ ಮುಖ್ಯ ಎಂದು ತಜ್ಞರು ಹೇಳುತ್ತಾರೆ.
ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಇದು ಪ್ರೊಟೀನ್, ವಿಟಮಿನ್ ಡಿ, ವಿಟಮಿನ್ ಬಿ, ಕ್ಯಾಲ್ಸಿಯಂ, ಸತು, ಪೊಟ್ಯಾಸಿಯಮ್, ವಿಟಮಿನ್ ಎ ನಂತಹ ಅಗತ್ಯ ಪೋಷಕಾಂಶಗಳ ಉಗ್ರಾಣವಾಗಿದೆ. ವಿಶ್ವ ಹಾಲು ದಿನದ ಪ್ರಯುಕ್ತ, ಪ್ರಮಾಣೀಕೃತ ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಮತ್ತು ಸಲಹೆಗಾರರಾದ ಹಿಮಾಂಶಿ ಭಾಟಿಯಾ, ಹಾಲನ್ನು ಸೇವಿಸುವುದರಿಂದ ಆಗು ಪ್ರಯೋಜನಗಳ ಬಗ್ಗೆ ಮಾತನಾಡಿದ್ದಾರೆ..
ಮಕ್ಕಳ ಬೆಳವಣಿಗೆ ಹಾಲು ಅತಿ ಮುಖ್ಯ ಎಂದು ಪರಿಗಣಿಸುವುದರಲ್ಲಿ ಆಶ್ಚರ್ಯವೇನಿಲ್ಲ. ತಜ್ಞರು ಹೇಳುವ ಪ್ರಕಾರ ಹಾಲು ಕುಡಿಯುವುದು ನಿಮ್ಮ ಹೃದಯದ ಆರೋಗ್ಯ, ಮೂಳೆಗಳ ಆರೋಗ್ಯ ಮತ್ತು ಸ್ನಾಯುಗಳ ಬಲವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕ್ಯಾಲ್ಸಿಯಂ, ಫಾಸ್ಫರಸ್, ಬಿ ವಿಟಮಿನ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಡಿ ಹಾಲಿನಲ್ಲಿ ಸಮೃದ್ಧವಾಗಿರುವುದರಿಂದ ಪ್ರತಿದಿನ ಹಾಲು ಕುಡಿಯುವುದು ಬಹಳ ಮುಖ್ಯ. ಹಾಲು ಕ್ಯಾಲ್ಸಿಯಂನ ಮೂಲವಾಗಿದೆ. ಆರೋಗ್ಯಕರ ಮೂಳೆಗಳನ್ನು ರೂಪಿಸುವಲ್ಲಿ ಕೊಡುಗೆ ನೀಡುತ್ತದೆ. ಅಲ್ಲದೆ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ದೇಹದಲ್ಲಿ ಕೆಂಪು ರಕ್ತ ಕಣಗಳ ರಚನೆಗೆ ಅಗತ್ಯವಾದ ಬಿ ವಿಟಮಿನ್‌ಗಳು ಹಾಲಿನಲ್ಲಿ ಯಥೇಚ್ಛವಾಗಿದೆ.
ಪ್ರತಿದಿನ ಹಾಲು ಕುಡಿಯುವುದರಿಂದ ನಿಮ್ಮ ಆಹಾರದಲ್ಲಿ ಕ್ಯಾಲ್ಸಿಯಂ ಸೇರುತ್ತದೆ. ಇದರಿಂದ ಹಲ್ಲುಗಳು ಸ್ಟ್ರಾಂಗ್ ಆಗುತ್ತವೆ.
ಇದು ನಿಮ್ಮ ದೇಶದಲ್ಲಿ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.