ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 20ರಂದು ಸಂಭವಿಸುತ್ತದೆ. ಗ್ರಹಣವನ್ನು ಮಂಗಳಕರ ಘಟನೆ ಎಂದು ಪರಿಗಣಿಸದಿದ್ದರೂ, ಜ್ಯೋತಿಷ್ಯದಲ್ಲಿ ಇದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯನು ದುರ್ಬಲನಾಗಿರುತ್ತಾನೆ. ಸೂರ್ಯನು ಮೇಷ ಮತ್ತು ಅಶ್ವಿನಿ ನಕ್ಷತ್ರದಲ್ಲಿದ್ದಾಗ ಗ್ರಹಣ ಸಂಭವಿಸುತ್ತದೆ.
ಸೂರ್ಯಗ್ರಹಣ ವ್ಯಕ್ತಿಯ ಜೀವನದಲ್ಲಿ ಭಾರಿ ಬದಲಾವಣೆಗಳನ್ನು ತರುತ್ತದೆ. ಕೆಲ ಸಮಯದವರೆಗೆ ಮಾತ್ರ ಸೂರ್ಯಗ್ರಹಣ ಇರುತ್ತದೆ. ಆದರೆ ಇದರ ಪರಿಣಾಮ ಮಾತ್ರ ದ್ವಾದಶಿ ರಾಶಿಗಳ ಮೇಲೆ ಆರೋಗ್ಯ ಮತ್ತು ವೃತ್ತಿಯಿಂದ ಹಾಗೂ ವೈಯಕ್ತಿಕ ಜೀವನ ಮತ್ತು ಹಣಕಾಸಿನವರೆಗೆ ಇರುತ್ತದೆ.
ಮೊದಲ ಸೂರ್ಯಗ್ರಹಣದ ಅವಧಿ- ಭಾಗಶಃ ಸೂರ್ಯಗ್ರಹಣ ಆರಂಭ: 07:04 AM
ಈ ವರ್ಷ ಒಟ್ಟು 4 ಗ್ರಹಣ
ಪೂರ್ಣ ಸೂರ್ಯಗ್ರಹಣ ಆರಂಭ: 08:07 AM
ಗರಿಷ್ಠ ಸೂರ್ಯಗ್ರಹಣ: 09:46 AM
ಪೂರ್ಣ ಗ್ರಹಣ ಅಂತ್ಯ: 11:26 AM
ಭಾಗಶಃ ಗ್ರಹಣ ಅಂತ್ಯ: 12:29 PM
ಆದರೆ ಭಾರತದಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಕಾಣಿಸುವುದಿಲ್ಲ. ಆದಾಗ್ಯೂ ಸೂರ್ಯಗ್ರಹಣದ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀಳಲಿದೆ. ಯಾವ ರಾಶಿಯವರ ಜಾತಕದಲ್ಲಿ ಸೂರ್ಯ ಬಲ ಹೊಂದಿರುತ್ತದೆಯೋ ಅಂಥಹ ರಾಶಿಯವರಿಗೆ ಇದು ಉತ್ತಮ ಫಲ ನೀಡುತ್ತದೆ. ಯಾವ ರಾಶಿಯವರ ಜಾತಕದಲ್ಲಿ ಸೂರ್ಯ ಬಲವಾಗಿ ಇಲ್ಲದೇ ಇದ್ದರೆ ಸಮಸ್ಯೆಗಳನ್ನು ಎದುರಿಸಬಹುದು. ಹಾಗಾದರೆ ಈ ಸೂರ್ಯಗ್ರಹಣದಿಂದ ಯಾವ ರಾಶಿಯವರು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಾರೆ. ಈ ಬಗ್ಗೆ ಮಾಹಿತಿಯನ್ನು ತಿಳಿಯೋಣ. 5 5 5 5 00:03 / 02:30
ವೃಷಭ ರಾಶಿಯವರಿಗೆ ಅದೃಷ್ಟದ ಸೂರ್ಯಗ್ರಹಣ
ವೃಷಭ ರಾಶಿಯ 12ನೇ ಮನೆಯಲ್ಲಿ ಸೂರ್ಯಗ್ರಹಣ ಸಂಭವಿಸುತ್ತದೆ. ಹೀಗಾಗಿ ಈ ಅವಧಿಯು ವೃಷಭ ರಾಶಿಯವರಿಗೆ ತುಂಬಾ ಅದೃಷ್ಟವಾಗಿರುತ್ತದೆ. ಈ ಸಮಯದಲ್ಲಿ ವೃಷಭ ರಾಶಿಯವರಿಗೆ ಉತ್ತಮ ಪ್ರಗತಿ ಲಭಿಸಲಿದೆ. ಕೆಲಸ ಮತ್ತು ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ಸಿಗಲಿದೆ. ಈ ದಿನ ಉತ್ತಮ ಲಾಭ ಬರುವ ಲಕ್ಷಣ ದಟ್ಟವಾಗಿದೆ. ಉದ್ಯೋಗಿಗಳು ಉತ್ತಮ ಬಡ್ತಿ ಪಡೆಯಬಹುದು.
ಮಿಥುನ ರಾಶಿಯವರಿಗೆ ಶುಭತರುವ ಸೂರ್ಯಗ್ರಹಣ
ಮಿಥುನ ರಾಶಿಯ 11ನೇ ಮನೆಯಲ್ಲಿ ಸೂರ್ಯಗ್ರಹಣ ಸಂಭವಿಸುತ್ತದೆ. ಹೀಗಾಗಿ ಈ ರಾಶಿಚಕ್ರದವರಿಗೆ ಈ ಗ್ರಹಣವು ತುಂಬಾ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ನಿವಾರಣೆಯಾಗಿ ಸಂತೋಷ ಹೆಚ್ಚಾಗುತ್ತದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಹಠಾತ್ ಹಣದ ಹರಿವಿನ ಸಾಧ್ಯತೆಗಳಿವೆ. ದುಡಿಯುವ ಜನರು ತಮ್ಮ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು.
ಧನು ರಾಶಿಯವರಿಗೆ ಮಂಗಳಕರ ಸೂರ್ಯಗ್ರಹಣ
ಧನು ರಾಶಿಯ 5 ನೇ ಮನೆಯಲ್ಲಿ ಸೂರ್ಯಗ್ರಹಣ ಸಂಭವಿಸುತ್ತದೆ. ಹೀಗಾಗಿ ಈ ಗ್ರಹಣವು ಧನು ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಅದೃಷ್ಟದ ಸಂಪೂರ್ಣ ಬೆಂಬಲವನ್ನು ಧನು ರಾಶಿಯವರು ಪಡೆಯುತ್ತಾರೆ. ಕೈಯಲ್ಲಿ ಹೆಚ್ಚು ಹಣ ಸಂಗ್ರಹವಾಗುತ್ತದೆ. ಮಾಡಿದ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯದು ಸಮಯ ಇದಾಗಿದೆ. ಸಂಗಾತಿಯೊಂದಿಗಿನ ಸಂಬಂಧವು ಉತ್ತಮ ಮತ್ತು ಮಧುರವಾಗಿರುತ್ತದೆ.
ಮೀನ ರಾಶಿಯವರಿಗೆ ಅನುಕೂಲಕರ ಸೂರ್ಯಗ್ರಹಣ
ಮೀನ ರಾಶಿಯ 2ನೇ ಮನೆಯಲ್ಲಿ ಸೂರ್ಯಗ್ರಹಣ ಸಂಭವಿಸುತ್ತದೆ. ಉದ್ಯೋಗಿಗಳಿಗೆ ಈ ಅವಧಿ ತುಂಬಾ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಸಂಗಾತಿಯೊಂದಿಗೆ ಅನ್ಯೋನ್ಯತೆ ಹೆಚ್ಚಾಗುತ್ತದೆ. ಹಣಕಾಸಿನ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ಉದ್ಯೋಗದಾತರು ಮತ್ತು ವ್ಯಾಪಾರಸ್ಥರ ಆದಾಯದಲ್ಲಿ ಹೆಚ್ಚಳವಾಗಲಿದೆ.