ಹೊಸಂಗಡಿ, ಜೂ. 2: ಆರೋಗ್ಯ ಅಮೃತ ಅಭಿಯಾನದಡಿ ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರವು ಜೂ. ೧ರಂದು ಹೊಸಂಗಡಿ ಗ್ರಾಮ ಪಂಚಾಯ್‌ತ್ ಸಭಾಂಗಣದಲ್ಲಿ ಜರಗಿತು.
ಬಿಪಿ (ರಕ್ತದ ಒತ್ತಡ) ತಪಾಸಣೆ, ಶುಗರ್ (ಮಧುಮೇಹ) ತಪಾಸಣೆ, ರಕ್ತ ಹೀನತೆ, ಆರೋಗ್ಯ ತಪಾಸಣೆ ನಡೆಸಿದ ನೂರಾರು ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಂಡರು. ಆಶಾ ಕಾರ್ಯಕರ್ತೆಯರು ಶಿಬಿರದ ಯಶಸ್ವಿಗೆ ಸಹಕರಿಸಿದರು.