

ಆರಂಬೋಡಿ, ಮೇ 31: ಆರಂಬೋಡಿ ಗ್ರಾಮದಲ್ಲಿರುವ ಐದು ಸರಕಾರಿ ಶಾಲೆಗಳ ಮಕ್ಕಳಿಗೆ ಶ್ರೀಮತಿ ಧನ್ಯಶ್ರೀ ಕೆ. ಮನೋಜ್ ಶೆಟ್ಟಿ ಐತೇರಿ ಇವರು ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಉಚಿತ ನೋಟ್ ಪುಸ್ತಕ ವಿತರಿಸಿದರು.
ಆರಂಬೋಡಿ ಗ್ರಾಮದ ಆರಂಬೋಡಿ, ಹೊಕ್ಕಾಡಿಗೋಳಿ, ಹನ್ನೆರಡುಕವಲು, ಪಿಲ್ಲಂಬುಗೋಳಿ, ಗುಂಡೂರಿ, ಮಂಚಕಲ್, ರಾಯಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಪ್ರತಿವರ್ಷ ಮನೋಜ್‌ರವರು ತಮ್ಮ ಪುತ್ರನಾದ ಜಸ್ಟೀಕ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಶಾಲೆಗಳಿಗೆ ಪುಸ್ತಕಗಳನ್ನು ನೀಡುತ್ತಾ ಬರುತ್ತಿದ್ದಾರೆ. ಮನೋಜ್ ಅವರ ಪರವಾಗಿ ಪ್ರದೀಪ್ ಅವರು ಪುಸ್ತಕಗಳ ವಿತರಣೆ ನೆರವೇರಿಸಿದರು.