

ವೇಣೂರು, ಎ. 22: ವೇಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಒಟ್ಟು ಹಾಜರಾದ 231 ವಿದ್ಯಾರ್ಥಿಗಳಲ್ಲಿ 217 ಮಂದಿ ಉತ್ತಿರ್ಣರಾಗಿ ಶೇ.93.93 ಫಲಿತಾಂಶ ಬಂದಿದೆ. ಅದರಲ್ಲಿ ವಾಣಿಜ್ಯ ವಿಭಾಗ ಶೇ. 100 ದಾಖಲಿಸಿದೆ. ವಾಣಿಜ್ಯ ವಿಭಾಗದಲ್ಲಿ 94 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಈ ಪೈಕಿ 22 ಮಂದಿ ಉನ್ನತ ಶ್ರೇಣಿ, 58 ಮಂದಿ ಪ್ರಥಮ, 14 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಸುಕನ್ಯಾ 568 ಅಂಕ ಪಡೆದುಕೊಂಡು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗ:
ವಿಜ್ಞಾನ ವಿಭಾಗದಲ್ಲಿ ಒಟ್ಟು ಹಾಜರಾದ 70 ಮಂದಿಯಲ್ಲಿ 64 ಮಂದಿ ಉತ್ತಿರ್ಣರಾಗಿ ಶೇ.91.42 ಫಲಿತಾಂಶ ದಾಖಲಿಸಿದೆ. 17 ಮಂದಿ ಉನ್ನತ ಶ್ರೇಣಿ, 46 ಪ್ರಥಮ, ಒಬ್ಬರು ದ್ವಿತೀಯ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಕಾರ್ತಿಕ ಮತ್ತು ಸಮ್ಯಕ್ ತಲಾ 557 ಅಂಕ ಗಳಿಸಿದ್ದಾರೆ.
ಕಲಾ ವಿಭಾಗ:
ಒಟ್ಟು ಹಾಜರಾದ 67 ವಿದ್ಯಾರ್ಥಿಗಳಲ್ಲಿ 59 ಮಂದಿ ಉತ್ತಿರ್ಣರಾಗಿ ಶೇ.88.05 ಫಲಿತಾಂಶ ಬಂದಿದೆ. ಈ ಪೈಕಿ 3 ಮಂದಿ ಉನ್ನತ ಶ್ರೇಣಿ, 28 ಮಂದಿ ಪ್ರಥಮ, 19 ಮಂದಿ ದ್ವಿತೀಯ, 9 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದು, ಸಾದಿಕ 534 ಅಂಕ ಪಡೆದಿದ್ದಾರೆ.