ಹೊಸಂಗಡಿ ಮೇ 15: ವಿದ್ಯಾವಂತರಾಗಿ ಬದುಕುಕಟ್ಟಿಕೊಂಡು ಮೂಲಕ ದೇಶಸೇವೆಯಲ್ಲಿ, ದೇಶದಪ್ರಗತಿಯಲ್ಲಿ ಅಳಿಲುಸೇವೆ ಮಾಡಬಹುದು. ಎಲ್ಲಾ ಸಮಸ್ಯೆಗಳಿಗೆ ವಿದ್ಯಾವಂತರಾಗುವುದೇ ಪರಿಹಾರ ಎಂದು ವೇಣೂರು ಪ್ರಾ.ಕೃ.ಪ.ಸ. ಸಂಘದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಮಹಮ್ಮದ್ ವೇಣೂರು ಹೇಳಿದರು.
ಪೆರಿಂಜೆ ಸಾರ ಇಬ್ರಾಹಿಂ ಪ್ಯಾಮಿಲಿ ಟ್ರಸ್ಟ್ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪೆರಿಂಜೆ ಸಾರ ಇಬ್ರಾಹಿಂ ಪ್ಯಾಮಿಲಿ ಟ್ರಸ್ಟ್ ಕುಟುಂಬದ ಹಿರಿಯರು ನಮ್ಮ ಆತ್ಮೀಯರು, ವಿದ್ಯೆಗೆ ಬಾರಿ ಮಹತ್ವನ್ನು ಕೊಟ್ಟವರು. ಕುಟುಂಬದ ಶ್ರೇಯಸ್ಸಿಗಾಗಿ ಮತ್ತು ಉನ್ನತ ವಿದ್ಯಾಭ್ಯಾಸ ಮಾಡಲು ಸಾರಾಇಬ್ರಾಹಿಂ ಪ್ಯಾಮಿಲಿ ಟ್ರಸ್ಟ್ ಮೂಲಕ ಕಾರ್ಯಗತ ಮಾಡುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಎಸ್‌ಎಸ್‌ಎಲ್‌ಸಿಯಲ್ಲಿ 602 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಅಮೀನಾ ಫಾತಿಮಾ ಹಾಗೂ ಪಿಯುಸಿಯಲ್ಲಿ ಸಾಧನೆಗೈದ ಆಶಿಕ್ ಮರೋಡಿ ಅವರನ್ನು ಸಮ್ಮಾನಿಸಿ ಅಭಿನಂದಿಸಲಾಯಿತು.
ನಿಯೋಜಿತ ಅಧ್ಯಕ್ಷ ಇಸ್ಮಾಯಿಲ್ ಕೆ. ಪೆರಿಂಜೆ, ಹೊಸಂಗಡಿ ಗ್ರಾ.ಪಂ. ಸದಸ್ಯ ಅಬ್ದುಲ್ ರಹಿಮಾನ್, ಮೆಸ್ಕಾಂ ಸಹಾಯಕ ಲೆಕ್ಕಾಧಿಕಾರಿ ಹಾಗು ಟ್ರಸ್ಟ್ ಸದಸ್ಯೆ ಶ್ರೀಮತಿ ಬುಶ್ರಾ ಇಸ್ಮಾಯಿಲ್ ಪೆರಿಂಜೆ, ಅರಬಿಕ್ ಸ್ಕೂಲ್‌ನ ಅಧ್ಯಕ್ಷ ಸಾದಿಕ್, ಖಾದರ್ ಪೆರಿಂಜೆ, ಪಿಸಿ ಅಬ್ದುಲ್ ಖಾದರ್, ಅಬೂಬಕ್ಕರ್, ಅಬ್ದುಲ್ ಹಮೀದ್, ಅಕ್ಬರ್, ಆದಿಲ್ ರಫೀಕ್ ಉದ್ದಬೆಟ್ಟು, ಮುಸ್ತಫಾ ಅಬ್ದುಲ್ ಹಮೀದ್ ಮತ್ತು ಕುಟುಂಬದ ಗಣ್ಯರು ಉಪಸ್ಥಿತರಿದ್ದರು. ಟ್ರಸ್ಟ್ ಅಧ್ಯಕ್ಷ ಇಸ್ಮಾಯಿಲ್ ಕೆ. ಪೆರಿಂಜೆ ಅಥಿತಿಗಳನ್ನು ಸ್ವಾಗತಿಸಿದರು. ಎಮಿರೇಟ್ ಏರ್‌ಲೈನ್ಸ್‌ನ ಸೂಚೆಫ್ ಹಾಗು ಟ್ರಸ್ಟ್‌ನ ಸದಸ್ಯರಾದ ಉಮರ್ ಕುಂಞ ಪೆರಿಂಜೆ ಸಂಯೋಜಿಸಿ ವಂದಿಸಿದರು.