

ವಿಟ್ಲದ ಅಡ್ಯನಡ್ಕ ಎಂಬಲ್ಲಿ ನುಸ್ರತುಲ್ ಯಂಗ್ ಮೆನ್ಸ್ ಅಸೋಸಿಯೇಷನ್ ಎಂಬ ಮುಸ್ಲಿಂ ಸಂಘಟನೆಯೊಂದು ಅಡ್ಯನಡ್ಕದ ರಾಜಕಮಲ್ ಹಾಲ್ ನಲ್ಲಿ ಆಯೋಜಿಸಿದ ಶೈಕ್ಷಣಿಕ ಕಾರ್ಯಾಗಾರ ಒಂದರಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಕುರಾನ್ ಮತ ಪ್ರವಚನ ನೀಡುತ್ತಿರುವ ನಿಖರ ಮಾಹಿತಿಯೊಂದಿಗೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದರು. ಈ ಮತಪ್ರವಚನಕ್ಕೆ ಅಡ್ಯನಡ್ಕ ಜನತಾ ಶಾಲೆಯ ಹಿಂದೂ ವಿದ್ಯಾರ್ಥಿಗಳನ್ನು ಒತ್ತಾಯ ಪೂರ್ವಕ ಕಳುಹಿಸಿದ ಪ್ರಾಂಶುಪಾಲ ಟಿ ಆರ್ ನಾಯ್ಕ್ ರ ಮೇಲೆ ಕೇಸು ದಾಖಲಿಸುವಂತೆ ಹಾಗೂ ಮತಾಂತರ ಕಾಯ್ದೆ ಹಾಕುವಂತೆ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಧರಣಿ ಕುಳಿತುಕೊಂಡರು. ಪ್ರಾಂಶುಪಾಲ ಹಾಗೂ ಆಯೋಜಕರ ಮೇಲೆ ಪ್ರಕರಣ ದಾಖಲು ಮಾಡಲಾಯಿತು.
ಈ ಸಂಧರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಪ್ರಮುಖರು , ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.