78 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮುತ್ತೂರು ಗ್ರಾಮ ಪಂಚಾಯತ್ ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು .ಮುಖ್ಯ ಅತಿಥಿಯಾಗಿ ಆಗಮಿಸಿದ ಜೋಸೆಫ್ ಮೊರಸ್ ಇವರು ಧ್ವಜಾರೋಹಣವನ್ನು ನೆರವೇರಿಸಿ ನಮ್ಮ ಗ್ರಾಮದ ಅಭಿವೃದ್ಧಿಗೆ ಮುತ್ತೂರು ಗ್ರಾಮ ಪಂಚಾಯತ್ ನ ಸಹಕಾರ ಶ್ಲಾಘನೀಯ ಎಂದರು , ಸ್ವಾತಂತ್ರ್ಯ ಹೋರಾಟಗಾರ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಈ ಸಂಭ್ರಮಾಚರಣೆಯನ್ನು ಬಹಳ ಉತ್ಸಾಹದಿಂದ ಆಚರಿಸುವ ಎಂದು ಶುಭ ಹಾರೈಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ ಇವರು 300 ವರ್ಷಗಳ ಕಾಲ ಬ್ರಿಟಿಷರ ದಬ್ಬಾಳಿಕೆಯಿಂದ ಬೆಸೆತ್ತ ಭಾರತೀಯರಿಗೆ ಸ್ವಾತಂತ್ರ್ಯ ತಂದು ಕೊಟ್ಟ ಅನೇಕ ವೀರರಿಗೆ ಸ್ವಾತಂತ್ರ್ಯ ಯೋಧರಿಗೆ ನಾವು ಎಷ್ಟು ಚಿರರುಣಿಯಾಗಿದ್ದರು ಸಾಲದು . ಹಿರಿಯರು ತಂದು ಕೊಟ್ಟ ಈ ಸುವರ್ಣ ಸ್ವಾತಂತ್ರ್ಯವನ್ನು ನಾವುಗಳು ಉಳಿಸಿಕೊಳ್ಳೋಣ ಒಟ್ಟಾಗಿ ಒಗ್ಗಟ್ಟಾಗಿ ಬಾಳೋಣ ಎಂದು ಹೇಳಿದರು . ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಸತೀಶ್ ಪೂಜಾರಿ ಬಳ್ಳಾಜೆ ಇವರು ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ನಾವು ಮುಂದಕ್ಕೆ ಹೆಜ್ಜೆ ಇಡುತ್ತಾ ನಮ್ಮ ದೇಶದ ಏಳಿಗೆಗಾಗಿ ದುಡಿಯುವ ಎಂದರು . ಈ ವೇಳೆ ಸದಸ್ಯರು ಮುಖ್ಯ ಅತಿಥಿಯಾಗಿ ಆಗಮಿಸಿದ ಜೋಸೆಫ್ ಮೋರಸ್ ಇವರು ಕುಪ್ಪೆಪದವು , ಮುತ್ತೂರು ಪಂಚಾಯತ್ ವಿಂಗಡನೆಯಾದ ಸಂಧರ್ಭ ಮುತ್ತೂರು ಗ್ರಾಮ ಪಂಚಾಯತ್ ಗೆ ಹೊಸ ಕಟ್ಟಡ ಇಲ್ಲದ ಸಂಧರ್ಭದಲ್ಲಿ ಉಚಿತವಾಗಿ ತಮ್ಮ ಸ್ವಂತ ಬಾಡಿಗೆ ಕಟ್ಟಡವನ್ನು ನೀಡಿ ಪಂಚಾಯತ್ ನೊಂದಿಗೆ ಸಹಕರಿಸಿದನ್ನು ನೆನೆದರು . ಇದೇ ಸಂಧರ್ಭದಲ್ಲಿ ಪಂಚಾಯತ್ ವತಿಯಿಂದ ಮುತ್ತೂರು ಗ್ರಾಮದ ಹಿಂದೂ ರುದ್ರ ಭೂಮಿಯಲ್ಲಿ ಶವಾಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಶವ ಶೆಟ್ಟಿ ದಲ್ಲೋಡಿ ಇವರನ್ನು ಸನ್ಮಾನಿಸಲಾಯಿತು . ಕಾರ್ಯಕ್ರಮದಲ್ಲಿ ಮುತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಶ್ಮಾ , ಸದಸ್ಯರುಗಳಾದ ಪುಷ್ಪಾ ನಾಯ್ಕ್ , ಜಗದೀಶ್ ದುರ್ಗಾಕೋಡಿ , ತಾರನಾಥ್ ಕುಲಾಲ್ , ಮಾಲತಿ , ಶಶಿಕಲಾ , ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು , ಸಂಜೀವಿನಿ ಒಕ್ಕೂಟದ ಸದಸ್ಯರುಗಳು , ಗ್ರಾಮಸ್ಥರು ಉಪಸ್ಥಿತರಿದ್ದರು .