
ಕೆಮ್ಮಾನು ಪಲ್ಕೆ ಶಾಲೆಗೆ ಹಳೇ ವಿದ್ಯಾರ್ಥಿ ಸಂಘ ಮತ್ತು ಶಾಲಾ ಹಿತೈಷಿಗಳಿಂದ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟದ ಬಲವರ್ಧನೆ ಹಾಗೂ ಶಾಲಾ ಸುರಕ್ಷತೆಗಾಗಿ ಶಾಲೆಗೆ ಕಂಪ್ಯೂಟರ್, ದೂರದರ್ಶನ ಮತ್ತು ಸಿಸಿ ಟಿವಿ ಕೊಡುಗೆಗಳನ್ನು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಮೂಲಕ ಶಾಲೆಗೆ ಹಸ್ತಾಂತರಿಸಿದರು.
ಈ ಸಂಧರ್ಬದಲ್ಲಿ ಗ್ರಾಮ ಪಂಚಾಯಿತನ ಉಪಾಧ್ಯಕ್ಷರಾದ ಶ್ರೀಮತಿ ಜಯ ದೇವಾಡಿಗ, ಗ್ರಾಮ ಪಂಚಾಯತ್ ನ ಮಾನ್ಯ ಸದಸ್ಯರಾದ ಶ್ರೀ ಹರಿಶ್ಚಂದ್ರ ಕಾಡಬೆಟ್ಟು, ಶಾಲಾ ಹಿತೈಷಿ ಬಳಗದ ಮಾನ್ಯ ಉಪಾಧ್ಯಕ್ಷರಾದ ವಿನಯ್ ಕುಮಾರ್, ಶಾಲಾ ಹಿತೈಷಿ ಬಳಗದ ಗೌರವಾನ್ವಿತಸದಸ್ಯರು, ಶ್ರೀ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಒಕ್ಕೂಟದ ಗೌರವಾನ್ವಿತ ಸೇವಾ ಪ್ರತಿನಿಧಿ, ಸ್ತ್ರೀ ಶಕ್ತಿ ಸಂಘ ಒಕ್ಕೂಟದ ಗೌರವಾನ್ವಿತ ಸದಸ್ಯರ ಸಮ್ಮುಖದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಗೌರವಾನ್ವಿತ ಅಧ್ಯಕ್ಷರು, ಉಪಾಧ್ಯಕ್ಷರು, ಶಾಲಾ ಅಭಿವೃದ್ಧಿಯ ಸದಸ್ಯರುಗಳು ಹಾಗೂ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ಬಂಧುಗಳು ಉಪಸ್ಥಿತರಿದ್ದರು.
