July 3, 2025
thmb-2025-06-10T161215.097-1

ಹೆಬ್ರಿ ಜೂನ್ 10: ಐಪಿಎಲ್ ಕಪ್ ಗೆದ್ದ ಆರ್ ಸಿಬಿಯ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೆಡಿಯಂ ನಲ್ಲಿ ಉಂಟಾದ ಕಾ ಲ್ತುಳಿತಕ್ಕೆ ಬಲಿಯಾಗಿದ್ದ ಹೆಬ್ರಿ ಮೂಲದ ಇಂಜಿನಿಯರಿಂಗ್ ವಿಧ್ಯಾರ್ಥಿನಿ ಚಿನ್ಮಯಿ ಶೆಟ್ಟಿ ಅವರಿಗೆ ರಾಜ್ಯ ಸರಕಾರ ನೀಡಿದ 25 ಲಕ್ಷ ರೂ ಪರಿಹಾರದ ಚೆಕ್ ನ್ನು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಹೆಬ್ರಿ ಇಂದಿರಾ ನಗರದಲ್ಲಿರುವ ಮನೆಗೆ ಭೇಟಿ ನೀಡಿ ಹಸ್ತಾಂತರಿಸಿದರು.ಈ ವೇಳೆ ಚಿನ್ಮಯಿ ಶೆಟ್ಟಿ ಅವರ ತಂದೆ ತಾಯಿ ಗೆ ಸಾಂತ್ವಾನ ತಿಳಿಸಿದ ಜಿಲ್ಲಾಧಿಕಾರಿ ಮನೆಯವರ ದುಃಖದಲ್ಲಿ ಸದಾ ಜಿಲ್ಲಾಡಳಿತ ಅವರೊಂದಿಗೆ ಇದೆ.

ಯಾವುದೇ ಸಮಸ್ಯೆ ಆದರೂ ನಮ್ಮನ್ನು ಸಂಪರ್ಕಿಸಬಹುದು ಎಂದು ಹೇಳಿದರು. ಚಿನ್ಮಯಿ ಶೆಟ್ಟಿಯ ತಂದೆ ತಾಯಿ ಸಹೋದರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ತಾಯಿಯನ್ನು ತಬ್ಬಿ ಹಿಡಿದು ನಿಮ್ಮೊಂದಿಗೆ ಸದಾ ನಾವಿದ್ದೇವೆ ಎಂದು ಭಾವುಕರಾದರು.ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಎ.ಸಿ. ರಶ್ಮಿ, ಹೆಬ್ರಿ ತಹಸಿಲ್ದಾರ್ ಪ್ರಸಾದ್ ಎಸ್. ಎ., ಹೆಬ್ರಿ ಠಾಣಾಧಿಕಾರಿ ಮಹೇಶ್ ಟಿ., ಹೆಬ್ರಿ ತಾಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ಶಂಕರ್ ಸೇರಿಗಾರ್, ಚಿನ್ಮಯ್ ತಾಯಿ ಶಾಂತ ಶೆಟ್ಟಿ, ಸಹೋದರ ಮತ್ತು ಅವರ ಕುಟುಂಬದವರು ಉಪಸ್ಥಿತರಿದ್ದರು.

ಹೆಬ್ರಿ ಶಾಂತ ಶೆಟ್ಟಿ ಹಾಗೂ ಉಪ್ಪಿನಂಗಡಿ ಕರುಣಾಕರ ಶೆಟ್ಟಿ ಅವರ ಪುತ್ರಿಯಾಗಿರುವ ಚಿನ್ಮಯಿ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಜ್ಯೋತಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದರು ಈಕೆ ತನ್ನ ಕಾಲೇಜಿನ ಸ್ನೇಹಿತರೊಂದಿಗೆ ಕಳೆದ ಜೂನ್.4 ರಂದು ಆರ್‌ಸಿಬಿ ಸಂಭ್ರಮಾಚರಣೆಗೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ತೆರಳಿದ್ದರು. ಈ ವೇಳೆ ಉಂಟಾದ ಕಾಲ್ತುಳಿತಕ್ಕೆ ಚಿನ್ಮಯಿ ಶೆಟ್ಟಿ ಬಲಿಯಾಗಿದ್ದರು.

About The Author

Leave a Reply

Your email address will not be published. Required fields are marked *

<p>You cannot copy content of this page.</p>