July 3, 2025 12:35:17 PM
WhatsApp Image 2025-06-03 at 10.06.22 PM

ಪುತ್ತೂರು : ಪೊಲೀಸರು ಇಂದಿನಿಂದ ಹಿಂದೂಗಳ ಮನೆಗೆ ನುಗ್ಗಿ ಬೆದರಿಸುವ ಕೆಲಸವನ್ನು ಪೊಲೀಸರು ನಿಲ್ಲಿಸಬೇಕು ಇಲ್ಲದಿದ್ದಲ್ಲಿ ಹಿಂದೂ ಸಮಾಜದ ಶಕ್ತಿ ಏನೆಂದು ತೋರಿಸಲಿದ್ದೇವೆ ಎಂದು ಬಿಜೆಪಿ ಮುಖಂಡ ಅರುಣ್ ಪುತ್ತಿಲ ಎಚ್ಚರಿಕೆ ನೀಡಿದ್ದಾರೆ.

ಪುತ್ತೂರಿನಲ್ಲಿ ನಡೆದ ಗಡಿಪಾರು ನೋಟೀಸ್ ವಿರೋಧಿಸಿ ನಡೆದ ಖಂಡನಾ ಸಭೆಯಲ್ಲಿ ಮಾತನಾಡಿದ ಪುತ್ತಿಲ, ನನ್ನ ಮೇಲೆ ಗಡಿಪಾರು ಆದೇಶವಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಸಿದ್ಧರಾಮಯ್ಯ ಸರಕಾರ ಪೋಲೀಸರ ಮೂಲಕ ಹಿಂದೂ ಕಾರ್ಯಕರ್ತನ ಮೇಲೆ ಸವಾರಿ ಮಾಡುತ್ತಿದೆ.

ಅಧಿಕಾರದ ಅಮಲಿನಲ್ಲಿ ಕಾರ್ಯಕರ್ತರ ಮನೆ ಮೇಲೆ ರಾತ್ರೋರಾತ್ರಿ ಮನೆಗೆ ನುಗ್ಗುವ ಕೆಲಸ ಸರಕಾರದಿಂದ ನಡೆಯುತ್ತಾ ಇದೆ. ಇವತ್ತಿನಿಂದ ಯಾವುದೇ ಕಾರ್ಯಕರ್ತರ ಮನೆಗೆ ನುಗ್ಗಿ ಹಿಂಸೆ ಕೊಡುವ ಹಿರಿಯರಿಗೆ ಉಪಟಳ ಕೊಡುವ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಹಿಂದೂ ಸಮಾಜದ ಶಕ್ತಿ ಏನು ಎಂದು ತೋರಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗೋಹತ್ಯೆ,ಮತಾಂತರಕ್ಕೆ ಕುಮ್ಮಕ್ಕು ನೀಡುವ ಕೆಲಸ ಸರಕಾರದಿಂದ ನಡೆಯುತ್ತಿದೆ. ಬೇರೆಯವರನ್ನು ಓಲೈಕೆ ಮಾಡಿ ಅಧಿಕಾರಕ್ಕೆ ಬರೋದು ಬಿಜೆಪಿ ಪಕ್ಷವಲ್ಲ, ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಹಿಂದೂಗಳು ಶ್ರಮಿಸಬೇಕು. ನಾನು 30 ವರ್ಷಗಳಿಂದ ಸಂಘಟನೆಗಳಲ್ಲಿ ಕೆಲಸ ನಿರ್ವಹಿಸಿದ್ದೇನೆ. ಹಣ ನನಲ್ಲಿ ಇಲ್ಲ, ಅಧಿಕಾರ ನನಗೆ ಸಿಗಲೇ ಇಲ್ಲ,ಆದರೆ ಕಾರ್ಯಕರ್ತರ ಪ್ರೀತಿ ವಿಶ್ವಾಸದಿಂದ ಮುಂದಿನ ದಿನಗಳಲ್ಲಿ ಪುತ್ತೂರಿನ ರಾಜಕಾರಣದಲ್ಲಿ ನಾನು ಸಕ್ರಿಯವಾಗಿ ಇರುತ್ತೇನೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

About The Author

Leave a Reply

Your email address will not be published. Required fields are marked *

<p>You cannot copy content of this page.</p>