ಮಂಗಳೂರು: ನಗರದ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ 2022-23ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಮಾತನಾಡಿದ ಕೌಶಲ್ಯ ತರಬೇತುದಾರರಾದ ಶೋಭಾ ಜಿ.ರಾವ್ ಜೀವನದ ಗುರಿ ಸಾಧಿಸಲು ಪರಿಶ್ರಮ, ನಾಯಕತ್ವ ಗುಣ, ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳೂ ಸಮಾಜಸೇವೆಯ ಕಡೆ ಹೆಚ್ಚಿನ ಒಲವನ್ನು ತೋರಬೇಕು ಎಂದು ಹೇಳಿದರು.
ವಿದ್ಯಾಸಂಸ್ಥೆಯ ಹುಟ್ಟೂ, ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವವಾದದ್ದು, ಆದರ್ಶ ವಿದ್ಯಾರ್ಥಿಗಳಾಗಿ, ಒಲಿದ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಿ ಎಂದು ರಾಷ್ಟ್ರೀಯ ಮಹಿಳಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮಣೆಲ್ ಅಣ್ಣಪ್ಫ ನಾಯಕ್, ಕಾರ್ಯದರ್ಶಿ ಜೀವನ್ ದಾಸ್ ನಾಯರಣ್, ಉಪಾಧ್ಯಕ್ಷೆ ಹಾಗೂ ಕಾಲೇಜಿನ ಸಂಚಾಲಕರಾದ ಡಾ| ಮಂಜುಳಾ ಕೆ.ಟಿ ಶುಭ ಹಾರೈಸಿದರು.
ವಿದ್ಯಾರ್ಥಿ ಸಂಘದ ಪತ್ರಿನಿಧಿಗಳಾದ ಅಧ್ಯಕ್ಷೆ ನೇಹಾ (ತೃತೀಯ ಬಿ.ಎ), ಉಪಾಧ್ಯಕ್ಷೆ (ತೃತೀಯ ಬಿ.ಬಿ.ಎ), ಕಾರ್ಯದರ್ಶಿ ಶ್ರೇಯ (ದ್ವಿತೀಯ ಬಿ.ಎಸ್ಸಿ), ಉಪಕಾರ್ಯದರ್ಶಿ ದೀಕ್ಷಾ (ಪ್ರಥಮ ಬಿ.ಬಿ.ಎ) ಉಳಿದ ಪದಾಧಿಕಾರಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ| ಸತೀಶ್ ಕುಮಾರ್ ಶೆಟ್ಟಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಬಳಿಕ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ಸಂಯೋಜಕರಾದ ಮೀರಾ ಎಡ್ನಾ ಕೊಯ್ಲಿಲ್, ಐಕ್ಯೂಎಸಿ ಮತ್ತು ನ್ಯಾಕ್ ಸಂಯೋಜಕರಾದ ಫ್ರೋ. ಸಯ್ಯದ್ ಖಾದರ್, ಡಾ| ಪ್ರವೀಣ್ ಕುಮಾರ್ ಕೆ.ಸಿ ಮತ್ತಿತ್ತರು ಉಪಸ್ಥಿತರಿದ್ದರು