May 28, 2025
acci copy

ನಾರಾವಿ, ಎ. 27: ನಾರಾವಿ ಸಮೀಪದ ಅರಸುಕಟ್ಟೆ ಬಳಿ ಗೂಡ್ಸ್ ಟೆಂಪೋಗೆ ಬೈಕ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಎ. 27 ರಂದು ಸಂಭವಿಸಿದೆ.

ಬೈಕ್ ಸವಾರ ಮಡಂತ್ಯಾರು ತಣ್ಣೀರುಪಂಥ ನಿವಾಸಿ ಜೋಕಿಂ ರೋಡ್ರಿಗಸ್ (೬೮) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ.
ಅಳದಂಗಡಿ ಕಡೆಯಿಂದ ನಾರಾವಿ ಕಡೆಗೆ ಬರುತಿದ್ದ ಬೈಕ್ ಸವಾರ ಏಕಾಏಕಿ ಬೈಕನ್ನು ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿದ್ದು, ನಾರಾವಿ ಕಡೆಯಿಂದ ಬರುತ್ತಿದ್ದ ೪೦೭ ಟೆಂಪೋಗೆ ಡಿಕ್ಕಿಯೊಡೆಯಿತು ಎನ್ನಲಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರನ ತಲೆಗೆ, ಬಲ ಕಾಲಿಗೆ, ಎಡ ಕೈಗೆ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>