

ವೇಣೂರು, ಎ. 23: ಇಂದು ಬೆಳ್ಳಂಬೆಳಗ್ಗೆ ವೇಣೂರು ಕೆಳಗಿನ ಪೇಟೆಯಲ್ಲಿ ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ನಾಲ್ವರನ್ನು ವೇಣೂರು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು ಕೆ.ಆರ್. ಪುರಂ ನಿವಾಸಿ ಗೌರಿಶಂಕರ್ ಆರ್. (19), ಬೆಂಗಳೂರು ಹೊಸಕೋಟೆ ತಾಲೂಕಿನ ಮನು ಪಿ. (19), ಅಭಿ ಕೆ.ಎಲ್. (19) ಹಾಗೂ ಮೋಹನ್‌ರಾಜ್ ಎಸ್. (18) ಬಂಧಿತರು.
ಟಾಟಾ ಕ್ವಾಲಿಸ್ ಕಾರಿನಲ್ಲಿ ಬಂದಿದ್ದ ಆರೋಪಿಗಳು ವೇಣೂರು ಕೆಳಗಿನ ಪೇಟೆಯ ಬಸ್ ತಂಗುದಾಣದ ಬಳಿ ವಾಹನ ನಿಲ್ಲಿಸಿ ಯಾವುದೋ ಅಮಲು ಪದಾರ್ಥ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ. ರೌಂಡ್ಸ್‌ನಲ್ಲಿದ್ದ ವೇಣೂರು ಪೊಲೀಸ್ ಉಪ ನಿರೀಕ್ಷಕರಾದ ಶ್ರೀಶೈಲ ಡಿ. ಮುರಗೋಡು ಹಾಗೂ ಸಿಬ್ಬಂದಿ ಆರೋಪಿಗಳನ್ನು ವಿಚಾರಿಸಿದಾಗ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿತರನ್ನು ವಶಕ್ಕೆ ಪಡೆದ ಪೊಲೀಸರು ಕಾರನ್ನು ಸ್ವಾಧೀನಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.