ವೇಣೂರು, ಮೇ 2: ಬಜಿರೆ ಬಾಡಾರುವಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಐವರು ಗಾಯಗೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ವೇಣೂರುವಿನಿಂದ ಮೂರ್ಜೆ ಕಡೆಗೆ ತೆರಳುತ್ತಿದ್ದ ಆಟೋ ರಿಕ್ಷಾಕ್ಕೆ ಬಜಿರೆ ಗ್ರಾಮದ ಬಾಡಾರು ಬಳಿ ಎದುರುನಿಂದ ಬಂದ ಕಾರು ಡಿಕ್ಕಿಯೊಡೆಯಿತು ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ರಿಕ್ಷಾ ಚಾಲಕ ನಾಗೇಶ್ ಆಚಾರ್ಯ (೫೧), ಪ್ರಯಾಣಿಕರಾದ ಸುದರ್ಶನ (೪೦), ಶೋಭಾ (೬೦), ಹರಣಿ (೩೮), ಮುರಳಿ (೩೫) ಗಾಯಗೊಂಡವರು.
ನಿರ್ಲಕ್ಷ್ಯವಾಗಿ ಕಾರು ಚಲಾಯಿಸಿ ಅಪಘಾತಕ್ಕೆ ಕಾರಣವಾದ ಚಾಲಕ ಸುಧೀರ್ ವಿರುದ್ಧ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.