December 23, 2024
murmu-1120140-1655831088

ವದೆಹಲಿ : ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‌ನಲ್ಲಿ ಜಡ್ಜ್‌ ಹುದ್ದೆಯಿಂದ ನಿವೃತ್ತರಾಗಿದ್ದ ಕರ್ನಾಟಕ ಮೂಲದ ನ್ಯಾ. ಎಸ್‌.ಅಬ್ದುಲ್‌ ನಜೀರ್‌ ಸೇರಿದಂತೆ 13 ಜನರನ್ನು ವಿವಿಧ ರಾಜ್ಯಗಳ ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಿಸಿದ್ದಾರೆ.

 

7 ಜನರನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವರ್ಗಾವಣೆ ಮಾಡಲಾಗಿದ್ದರೆ, 6 ಜನರನ್ನು ಹೊಸದಾಗಿ ನೇಮಕ ಮಾಡಲಾಗಿದೆ.

ನೂತನ ರಾಜ್ಯಪಾಲರ ಪಟ್ಟಿ

  1. ಮಹಾರಾಷ್ಟ್ರದ ನೂತನ ರಾಜ್ಯಪಾಲರಾಗಿ ರಮೇಶ್ ಬೈಸ್ ನೇಮಕ
  2. ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿ ಲೆಫ್ಟಿನೆಂಟ್ ಜನರಲ್ ಕೈವಾಲ್ಯ ತ್ರಿವಿಕ್ರಮ್ ಪರ್ನಾಯಕ್
  3. ಸಿಕ್ಕಿಂ ರಾಜ್ಯಪಾಲರಾಗಿ ಲಕ್ಷ್ಮಣ್ ಪ್ರಸಾದ್ ಆಚಾರ್ಯ
  4. ಜಾರ್ಖಂಡ್ ರಾಜ್ಯಪಾಲರಾಗಿ ಸಿಪಿ ರಾಧಾಕೃಷ್ಣನ್
  5. ಅಸ್ಸಾಂ ರಾಜ್ಯಪಾಲರಾಗಿ ಗುಲಾಬ್ ಚಂದ್ ಕಟಾರಿಯಾ
  6. ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಶಿವ ಪ್ರತಾಪ್ ಶುಕ್ಲಾ
  7. ಲಡಾಖ್ ನ ಲೆಫ್ಟಿನೆಂಟ್ ಗವರ್ನರ್ ರಾಧಾ ಕೃಷ್ಣನ್ ಮಾಥುರ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ಮುರ್ಮು ಅಂಗೀಕರಿಸಿದ್ದಾರೆ, ಅರುಣಾಚಲ ಪ್ರದೇಶದ ರಾಜ್ಯಪಾಲ ಬ್ರಿಗೇಡಿಯರ್ (ಡಾ. ಬಿ.ಡಿ. ಮಿಶ್ರಾ (ನಿವೃತ್ತ) ಅವರನ್ನು ಲಡಾಖ್ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿದೆ.
  8. ನಿವೃತ್ತ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
  9. ಬಿಸ್ವಾ ಭೂಷಣ್ ಹರಿಚಂದನ್ ಅವರನ್ನು ಛತ್ತೀಸ್ ಗಢದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
  10. ರಾಜ್ಯಪಾಲರಾದ ಅನುಸೂಯಾ ಉಕ್ಯೆ ಅವರನ್ನು ಮಣಿಪುರದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
  11. ಲಾ ಗಣೇಶನ್ ಅವರನ್ನು ನಾಗಾಲ್ಯಾಂಡ್ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
  12. ಫಾಗು ಚೌಹಾಣ್ ಅವರನ್ನು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
  13. ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಬಿಹಾರದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.