Uncategorized

ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ಇದರ ವತಿಯಿಂದ ಹೊಸಂಗಡಿ ಗ್ರಾ.ಪಂ.ಗೆ ಶುದ್ಧ ಕುಡಿಯುವ ನೀರಿನ ಘಟಕದ ಕೊಡುಗೆ

ಹೊಸಂಗಡಿ, ಜೂ. 1 : ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿಯ ಸಂದರ್ಭದಲ್ಲಿ ಹೊಸಂಗಡಿ ಗ್ರಾಮ ಪಂಚಾಯತ್‌ಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಫಲಾನುಭವಿಗಳಿಗೆ ಶೌಚಾಲಯ ನಿರ್ಮಾಣಕ್ಕಾಗಿ ಧನ ಸಹಾಯವನ್ನು ನೀಡಲಾಯಿತು. ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ್, ಅಸಿಸ್ಟೆಂಟ್ ಗವರ್ನರ್ ಎಲಿಯಾಸ್ ಸ್ಯಾಂಟಿಸ್, ಝೋನಲ್ ಲೆಫ್ಟಿನೆಂಟ್ ರಾಘವೇಂದ್ರ ಭಟ್, ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕರುಣಾಕರ್, ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿಗಳು, ರೊಟೇರಿಯಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ, ರೋಟರಿ …

Read More »

ಬೆಳ್ಳಂಬೆಳಗ್ಗೆ ಪೆರಿಂಜೆ ಬದ್ರುದ್ದಿನ್ ಮನೆಗೆ NIA ದಾಳಿ ಪ್ರಕರಣ. ಮೊಬೈಲ್, ಅಗತ್ಯ ದಾಖಲೆಗಳನ್ನು ಕೊಂಡೊಯ್ದ ಅಧಿಕಾರಿಗಳು

ವೇಣೂರು, ಮೇ 31: ಭಯೋತ್ಪಾದಕ ಕೃತ್ಯಕ್ಕಾಗಿ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಹಣ ರವಾನೆ ಆಗುತ್ತಿರುವ ಮಾಹಿತಿ ಆಧರಿಸಿ ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ NIA ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಪುತ್ತೂರಿನ ನಾಲ್ವರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಹೊಸಂಗಡಿ ಗ್ರಾಮದ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಪೆರಿಂಜೆ ಎಂಬಲ್ಲಿ ಬದ್ರುದ್ದಿನ್ ಯಾನೆ ಬದು ಮನೆಗೆ ಬೆಳಗ್ಗೆ 5-30ರ ವೇಳೆಗೆ ದಾಳಿ ನಡೆಸಿರುವ ಎನ್.ಐ.ಎ. ಅಧಿಕಾರಿಗಳು ಬದ್ರುದ್ದಿನ್ ಅವರ ಮೊಬೈಲ್ ಫೋನ್, ಬ್ಯಾಂಕ್‌ಗೆ ಸಂಬಧಿಸಿದ ದಾಖಲೆ ಹಾಗೂ ವ್ಯವಹಾರದ ದಾಖಲೆಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.ಬದ್ರುದ್ದಿನ್ …

Read More »

ಶಿರ್ಲಾಲು-ಸುಲ್ಕೇರಿಮೊಗು ಶ್ರೀ ಮಹಮ್ಮಾಯಿ ಮರಾಟಿ ಆರಾಧನಾ ಸೇವಾ ಸಮಿತಿಯ ವಾರ್ಷಿಕ ಮಹಾಸಭೆ: ಪದಾಧಿಕಾರಿಗಳ ಆಯ್ಕೆ

ಶಿರ್ಲಾಲು, ಮೇ 31: ಶ್ರೀ ಮಹಮ್ಮಾಯಿ ಮರಾಟಿ ಆರಾಧನಾ ಸೇವಾ ಸಮಿತಿ ಶಿರ್ಲಾಲು-ಸುಲ್ಕೇರಿಮೊಗ್ರು ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಹುರುಂಬಿದೊಟ್ಟು ದೇವಸ್ಥಾನದ ವಠಾರದಲ್ಲಿ ನಡೆಯಿತು.ಸಭೆಯಲ್ಲಿ ಮುಂದಿನ ಸಾಲಿನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜಯ ನಾಯ್ಕ, ಉಪಾಧ್ಯಕ್ಷರಾಗಿ ಸಂಜೀವ ನಾಯ್ಕ, ಕಾರ್ಯದರ್ಶಿಯಾಗಿ ರವಿ ನಾಯ್ಕ, ಜೊತೆ ಕಾರ್ಯದರ್ಶಿಯಾಗಿ ಸುರೇಶ ನಾಯ್ಕ, ಕೋಶಾಧಿಕಾರಿಯಾಗಿ ಪ್ರಭಾಕರ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗೋಪಾಲ, ಸುನಿಲ್, ಪ್ರಸಾದ್, ದಿನೇಶ, ಶ್ರೀಮತಿ ರೂಪಾ, ಶ್ರೀಮತಿ ಚಂದ್ರಾವತಿ, ಓಬಯ್ಯ, ಚಂದ್ರ ಅವರನ್ನು ಆಯ್ಕೆ ಮಾಡಲಾಯಿತು.ಸುರೇಶ ಸ್ವಾಗತಿಸಿ, ವಂದಿಸಿದರು. ಗ್ರಾಮದ ಗುರಿಕಾರರಾದ ಚಿನ್ನಯ …

Read More »

ವೇಣೂರು: ಮದುವೆ ನಿಗದಿಯಾಗಿದ್ದ ವಧು ನಾಪತ್ತೆಯಾಗಿ ಪ್ರಿಯಕರನೊಂದಿಗೆ ಮದುವೆಯಾಗಿ ಠಾಣೆಗೆ ಹಾಜರು!

ವೇಣೂರು, ಮೇ 31: ನಿಶ್ಚಿತಾರ್ಥವಾಗಿ ಮದುವೆ ನಿಗದಿಯಾಗಿದ್ದ ಅಂಡಿಂಜೆಯ ಯುವತಿಯೋರ್ವಳು ಪ್ರಿಯಕರನೊಂದಿಗೆ ಪರಾರಿಯಾಗಿ ಮದುವೆಯಾಗಿ ಠಾಣೆಗೆ ಹಾಜರಾದ ಘಟನೆ ನಡೆದಿದೆ.ಅಂಡಿಂಜೆ ಗ್ರಾಮದ ಯುವತಿಗೆ ಬಂಟ್ವಾಳ ಕನ್ಯಾನ ಗ್ರಾಮದ ಯುವಕನೊಂದಿಗೆ ಮದುವೆ ನಿಗದಿಯಾಗಿದ್ದು, ನಾಳೆ ಅಂದರೆ ಜೂ. 1ರಂದು ಮದುವೆ ನೆರವೇರಬೇಕಿತ್ತು. ಆದರೆ ಮದುವೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ವಧು ಮನೆಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಮನೆಯವರು ವೇಣೂರು ಪೊಲೀಸರಿಗೆ ದೂರು ನೀಡಿದ್ದರು. ಅತ್ತ ಕರಿಮಣೇಲು ಗ್ರಾಮದ ಯುವಕನೂ ನಾಪತ್ತೆಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸುತ್ತಿರುವಾಗಲೇ ಯುವತಿ ಪ್ರೀತಿಸಿದ್ದ ಯುವಕನೊಂದಿಗೆ ಠಾಣೆಗೆ ಹಾಜರಾಗಿ …

Read More »

ಸರಕಾರಿ ಪ್ರಾಥಮಿಕ, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಭರ್ಜರಿ ಸ್ವಾಗತಬಜಿರೆ ಶಾಲೆ: ವೈಭವದ ಮೆರವಣಿಗೆಯಲ್ಲಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು

ವೇಣೂರು, ಮೇ 31: ಬೇಸಿಗೆ ರಜೆ ಮುಕ್ತಾಯವಾಗಿ ಇಂದು ಎಲ್ಲೆಡೆ ಸರ್ಕಾರಿ ಶಾಲೆಗಳು ಆರಂಭ ಆದವು. ಪರೀಕ್ಷೆ ಬರೆದು ಇಷ್ಟು ದಿನ ಬೀಸಿಗೆ ರಜೆಯಲ್ಲಿದ್ದ ಮಕ್ಕಳು ಇಂದಿನಿಂದ ಶಾಲೆಗೆ ಪಾಟಿಚೀಲ ಹಿಡಿದು ಶಾಲೆಕಡೆಗೆ ಹೆಜ್ಜೆಹಾಕಿದ ದೃಶ್ಯ ಕಂಡು ಬಂತು. ಶಾಲೆಗಳಲ್ಲೂ ವಿದ್ಯಾರ್ಥಿಗಳನ್ನು ಬರ್ಜರಿಯಾಗಿ ಸ್ವಾಗತಿಸಲಾಯಿತು. ಬಜಿರೆ ಸರಕಾರಿ ಉ.ಪ್ರಾ. ಶಾಲೆಯನ್ನು ಬೆಲೂನು, ಬಣ್ಣದ ಕಾಗದದ ಶೃಂಗಾರದಿಂದ ಕಂಗೊಳಿಸಲಾಗಿತ್ತು. ಬ್ಯಾಂಡ್, ಡಿ.ಜೆ., ಗೊಂಬೆಕುಣಿತ ಮುಂತಾದವೈಭವದ ಮೆರವಣಿಗೆಯಲ್ಲಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು ರಿಬ್ಬನ್ ತುಂಡರಿಸಿ ಶಾಲೆಗೆ ಪ್ರವೇಶಿಸಿದರು.ಮಕ್ಕಳಿಗೆ ಪಾನಿಯ ಮತ್ತು ಸಿಹಿತಿಂಡಿ ವಿತರಿಸಲಾಯಿತು. ಬಳಿಕ ನಡೆದ ಶಾಲಾ …

Read More »

ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಪಡಂಗಡಿಯ ಸಾಲಿಯತ್ ಹೃದಯಾಘಾತದಿಂದ ಇಂದು ಮುಂಜಾನೆ ನಿಧನ

ಪಡಂಗಡಿ, ಮೇ 31: ರಾಷ್ಟ್ರಮಟ್ಟದ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿ, ಉಜಿರೆ ಎಸ್.ಡಿ.ಎಂ. ಕಾಲೇಜು ಹಳೆ ವಿದ್ಯಾರ್ಥಿ, ಪಡಂಗಡಿ ಪೊಯ್ಯೆಗುಡ್ಡೆ ನಿವಾಸಿ ಪ್ರಸ್ತುತ ವಿವಾಹವಾಗಿ ಚಿಕ್ಕಮಗಳೂರು ಪತಿ ಮನೆಯಲ್ಲಿ ವಾಸವಾಗಿರುವ ಸಾಲಿಯತ್ (24) ಹೃದಯಾಘಾತದಿಂದ ಇಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಉಜಿರೆ ಎಸ್.ಡಿ.ಎಂ.ನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಪಡೆಯುತ್ತಿರುವಾಗ ಕ್ರೀಡಾ ಕ್ಷೇತ್ರದಲ್ಲಿ ಅತ್ಯಧಿಕ ಸಾಧನೆ ತೋರಿದ್ದರು. ಹೈದರ್ ಪಡಂಗಡಿ ಅವರ ಗರಡಿಯಲ್ಲಿ ಆರಂಭದ ತರಬೇತಿಯನ್ನು ಪಡೆದವರು. ಮುಂದೆ ಪ್ರೌಢ ಶಿಕ್ಷಣವನ್ನು ಮುಂಡಾಜೆ ಶಿಕ್ಷಣ ಸಂಸ್ಥೆಯಲ್ಲಿ ಪಡೆಯುತ್ತಿದ್ದ ಸಂದರ್ಭದಲ್ಲಿ ಉತ್ತರ ಪ್ರದೇಶದ ಅಲಹಾಬಾದ್ …

Read More »

ಗಾಳಿ ಸಹಿತ ಭಾರೀ ಮಳೆಯ ಮುನ್ಸೂಚನೆ. ದ.ಕ. ಸಹಿತ ಹಲವು ಜಿಲ್ಲೆಗೆ ಮುಂದಿನ ಎರಡು ದಿನ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು, ಮೇ 30: ಮುಂದಿನ ಎರಡು ದಿನ ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಭಾರೀ ಮಳೆ ಸಂಭವ ಇದೆ. ಹೀಗಾಗಿ ಇಷ್ಟು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನಾ ವರದಿಯಲ್ಲಿ ತಿಳಿಸಿದೆ. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳು ಮುಂದಿನ ನಾಲ್ಕು ದಿನ ಪೈಕಿ ಎರಡು ದಿನ ವೇಗದ ಗಾಳಿ ಸಹಿತ ವ್ಯಾಪಕ ಮಳೆ ದಾಖಲಾತಿಗೆ ಸಾಕ್ಷಿಯಾಗಲಿದ್ದು, ಈ ಸಂಬಂಧ ೧೨ ಜಿಲ್ಲೆಗಳಿಗೆ …

Read More »

ಕೇಳದಪೇಟೆಯಲ್ಲಿ ವೇಣೂರು ಜೈನ್ ಮಿಲನ್ ಮಾಸಿಕಸಭೆ. ಮಕ್ಕಳಿಗೆ ಹೆತ್ತವರೇ ನಿಜವಾದ ಆದರ್ಶರು: ಸೋಮಶೇಖರ್ ಶೆಟ್ಟಿ

ಕಾಶಿಪಟ್ಣ, ಮೇ 30: ಭಾರತೀಯ ಜೈನ್ ಮಿಲನ್ ಇಂದು ವಿಶ್ವವ್ಯಾಪಿ ಸಂಘಟನೆಯಾಗಿ ಬೆಳೆದಿದ್ದು, ಜಗತ್ತಿನಾದ್ಯಂತ ವಾಸಿಸುವ ಜೈನ ಬಾಂಧವರಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಮತ್ತು ಒಗ್ಗಟ್ಟನ್ನು ಮೂಡಿಸಲು ಶ್ರಮವಹಿಸುತ್ತಿದೆ. ಮುಂದಿನ ಪೀಳಿಗೆಗೆ ಧರ್ಮದ ತತ್ವಗಳ ಅರಿವು ಹಾಗೂ ಜೀವನ ಮೌಲ್ಯಗಳ ಬಗ್ಗೆ ತಿಳಿಯಪಡಿಸುವುದರ ಜತೆಗೆ ಸಂಸ್ಕಾರವನ್ನು ಬೆಳೆಸಲು ಹೆತ್ತವರು ಪ್ರಯತ್ನಿಸಬೇಕು. ಜೀವನ ಮಟ್ಟಗಳು ಮತ್ತು ಸಂಸ್ಕಾರವನ್ನು ಮಕ್ಕಳಲ್ಲಿ ಬೆಳೆಸುವಲ್ಲಿ ಹೆತ್ತವರೇ ನಿಜವಾದ ಆದರ್ಶರು ಎಂದು ಭಾರತೀಯ ಜೈನ್ ಮಿಲನ್ ನಿರ್ದೇಶಕ ಹಾಗೂ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಬಿ. ಸೋಮಶೇಖರ ಶೆಟ್ಟಿ …

Read More »

ವೇಣೂರು ಉಪಕೇಂದ್ರದಲ್ಲಿ ನಾಳೆ ವಿದ್ಯುತ್ ನಿಲುಗಡೆ

ವೇಣೂರು, ಮೇ 30: ತುರ್ತು ಕಾಮಗಾರಿಯ ಪ್ರಯುಕ್ತ ಮೇ 31ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ 33/11ಕೆವಿ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Read More »

ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ರಕ್ಷಿತ್ ಶಿವರಾಮ್

ಮಂಗಳೂರು: ಸಂತೋಷ್ ನಿನ್ನಿಕಲ್ಲು ಅವರ ತಾಯಿ ಅನಾರೋಗ್ಯದ ಕಾರಣದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ತುರ್ತಾಗಿ ರಕ್ತದ ಅವಶ್ಯಕತೆ ಇತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರು ತುರ್ತಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

Read More »

You cannot copy content of this page.