Uncategorized

ವೇಣೂರಿನ ಅಪತ್ಭಾಂಧವ ಹಿರಿಯ ಕಾರುಚಾಲಕ ಬೈರಣ್ಣ ನಿಧನ. ನಾಲ್ಕೈದು ದಶಕಗಳ ಕಾಲ ಸುರಕ್ಷತೆಯ ಸೇವೆ ನೀಡಿ ಮರೆಯಾದ ಮಾಣಿಕ್ಯ

ವೇಣೂರು, ಜೂ. 9: ಅಂಬಾಸಿಡರ್ ಕಾರು ಚಲಾಯಿಸಿ ವೇಣೂರಿನ ಜನತೆಗೆ ಅಪತ್ಭಾಂಧವರಾಗಿ ಕಳೆದ ನಾಲ್ಕೈದು ದಶಕಗಳಲ್ಲಿ ಸೇವೆ ನೀಡುತ್ತಿದ್ದ ಬೈರಣ್ಣ (84) ಅವರು ನಿನ್ನೆ ರಾತ್ರಿ ಹೃದಯಾಘಾತದಿಂದ ವೇಣೂರು ಕೆಳಗಿನ ಪೇಟೆಯ ಬಾಡಿಗೆ ಮನೆಯಲ್ಲಿ ನಿಧನ ಹೊಂದಿದರು.ಮೂಲತಃ ಮಂಗಳೂರು ಗುರುಪುರದವರಾಗಿರುವ ಇವರು ಸರಿಸುಮಾರು 1976ರಲ್ಲಿ ವೇಣೂರಿನಲ್ಲಿ ಕಾರು ಚಾಲಕರಾಗಿ ವೃತ್ತಿ ಆರಂಭಿಸಿದ್ದರು. ಬಸ್, ವಾಹನಗಳ ವ್ಯವಸ್ಥೆಯೇ ಇಲ್ಲದ ಕಾಲದಲ್ಲಿಯೂ ಅಂದು ಬೈರಣ್ಣನ ಅಂಬಾಸಿಡರ್ ಕಾರಿನಲ್ಲಿ ಪ್ರಯಾಣ ಮಾಡದಿರುವವರು ತುಂಬಾ ವಿರಳ ಎಂದೇ ಹೇಳಬಹುದು. ಸುಧೀರ್ಘ ಕಾಲದವರೆಗೂ ವೇಣೂರಿನಲ್ಲಿ ಅಂಬಾಸಿಡರ್ ಕಾರು ಚಲಾಯಿಸಿ ಅದೆಷ್ಟೋ ರೋಗಿಗಳಿಗೆ, …

Read More »

ಜೂ. 9: ಆರಂಬೋಡಿ ಗ್ರಾ.ಪಂ.ನಲ್ಲಿ PMJJBY-PMSBY ಇನ್ಸೂರೆನ್ಸ್ ವಿಮಾ ಸಪ್ತಾಹ

ಆರಂಬೋಡಿ, ಜೂ. 8: ಪ್ರಧಾನಮಂತ್ರಿ ಜೀವನ್‌ಜ್ಯೋತಿ ಬೀಮಾ ಯೋಜನೆ (PMJJBY) ಮತ್ತು ಪ್ರಧಾನಮಂತ್ರಿ ಸಂಧ್ಯಾ ಸುರಕ್ಷಾ ಯೋಜನೆ (PMSBY) ಇನ್ಸೂರೆನ್ಸ್ ವಿಮಾ ಸಪ್ತಾಹವು ಎಸ್‌ಬಿಐ ಬ್ಯಾಂಕ್ ವತಿಯಿಂದ ಜೂ. 9ರಂದು ಬೆಳಿಗ್ಗೆ 11 ಗಂಟೆಯಿಂದ ಆರಂಬೋಡಿ ಗ್ರಾ.ಪಂ. ವಠಾರದಲ್ಲಿ ಜರಗಲಿದೆ.ಸರಕಾರದPMJJBY-PMSBY ವಿಮೆ ಮಾಡದ ಗ್ರಾಮಸ್ಥರು, ಸ್ವ-ಸಹಾಯ ಸಂಘದ ಸದಸ್ಯರುಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಸಭೆಗೆ ಬರುವಾಗ ತಮ್ಮ ಬ್ಯಾಂಕ್ ಖಾತೆ ಪುಸ್ತಕ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ಏನಿದು ವಿಮಾ ಯೋಜನೆಗಳು? ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ …

Read More »

ಆಳ್ವಾಸ್ ಪ್ರಾಧ್ಯಾಪಕಿ ವೇಣೂರಿನ ಸುಕನ್ಯಾರಿಗೆ ಕುವೆಂಪು ವಿ.ವಿ.ಯಿಂದ ಡಾಕ್ಟರೇಟ್

ವೇಣೂರು, ಜೂ. 8: ಮೂಡುಕೋಡಿಯ ಶ್ರೀಮತಿ ಕುಮುದಿನಿ ಮತ್ತು ಲಿಂಗಪ್ಪ ದಂಪತಿಯ ಪುತ್ರಿ, ಮೂಡಬಿದಿರೆ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಶ್ಲೇಷಣಾತ್ಮಕ ರಾಸಾಯಣಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸುಕನ್ಯ ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ.ಶ್ರೀಮತಿ ಸುಕನ್ಯಾರವರು ಲೋಲ್ಟಾಮೆಟ್ರಿಕ್ ಸ್ಟಡೀಸ್ ಆಫ್ ಸಮ್ ಬಯೋಲಾಜಿಕಲ್ ಇಂಪಾರ್ಟೆಂಟ್ ಆರ್ಗನಿಕ್ ಕಂಪೌಂಡ್ಸ್ ಎಟ್ ಡಿಫರೆಂಟ್ ಮೋಡಿಫೈಡ್ ಇಲೆಕ್ಟ್ರೋಡ್ಸ್ ಎಂಬ ಸಂಶೋಧನ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ. ಕುವೆಂಪು ವಿವಿ ಕೈಗಾರಿಕಾ ರಾಸಾಯನಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಇ. ಕುಮಾರಸ್ವಾಮಿ ಮಾರ್ಗದರ್ಶನ ನೀಡಿದ್ದರು. ಪತಿ ಮಂಗಳೂರಿನ ಸಂತೋಷ್ …

Read More »

ಬೆಳ್ತಂಗಡಿ: ಅಜ್ಜಿಯನ್ನು ಕೊಲೆ ಮಾಡಿ ಚಿನ್ನಾಭರಣ ಕಳ್ಳತನ ಮಾಡಿ ಬಂಧಿತ ಆರೋಪಿ ಸಾವು

ಬೆಳ್ತಂಗಡಿ: ಬೆಳಾಲು ಗ್ರಾಮದಲ್ಲಿ ಒಬ್ಬಂಟಿಯಾಗಿದ್ದ ಅಜ್ಜಿಯನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಚಿನ್ನಾಭರಣ ಹಾಗೂ ಹಣ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಅಶೋಕ್ ನಿನ್ನೆ ಬೆಳಗ್ಗೆ ಮಂಗಳೂರಿನ ವೆನ್ಲಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಶುಗರ್ ಹಾಗೂ ಟಿ ಬಿ ಕಾಯಿಲೆಯಿಂದ ಬಳಲುತ್ತಿದ್ದ ಆತನನ್ನು ವೆನ್ಲಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ.ಆದರೆ ಚಿಕಿತ್ಸೆ ಫಲಿಸದೆ ಆರೋಪಿ ಅಶೋಕ್ ಬೆಳಗ್ಗೆ ಸಾವನ್ನಪ್ಪಿದ್ದಾನೆ. ಈತ ಸಾವನ್ನಪ್ಪಿದ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈತ ಮಂಗಳೂರಿನ ಸಬ್ ಜೈಲಿನಲ್ಲಿದ್ದ.ಈತನ ವಿರುದ್ಧ ಧರ್ಮಸ್ಥಳದಲ್ಲಿ ಕೊಲೆ ಪ್ರಕರಣ …

Read More »

ಅನಧಿಕೃತ ಪ್ಲೆಕ್ಸ್, ಬ್ಯಾನರ್ ತಕ್ಷಣ ತೆರವುಗೊಳಿಸುವಂತೆ ಪಂಚಾಯತ್‌ಗಳಿಗೆ ವೇಣೂರು ಪೊಲೀಸರ ಸೂಚನೆ

ವೇಣೂರು: ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಠಿಯಿಂದ ಪಂಚಾಯತ್ ವ್ಯಾಪ್ತಿಯಲ್ಲಿನ ಎಲ್ಲಾ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಮುಂತಾದವುಗಳನ್ನು ತಕ್ಷಣ ತೆರವುಗೊಳಿಸುವಂತೆ ಪಂಚಾಯತ್‌ಗಳಿಗೆ ವೇಣೂರು ಪೊಲೀಸರು ಸೂಚಿಸಿದ್ದಾರೆ.ಬ್ಯಾನರ್ ಹಾಕಲು ಸಕ್ಷಮದಿಂದ ಅನುಮತಿ ನೀಡುವಾಗ ಅದರ ಮಾಹಿತಿಯನ್ನು ಕಡ್ಡಾಯವಾಗಿ ಪೊಲೀಸ್ ಠಾಣೆಗೆ ತಿಳಿಸುವಂತೆಯೂ ಪಂಚಾಯತ್‌ಗಳಿಗೆ ನೀಡಲಾದ ನೋಟೀಸಿನಲ್ಲಿ ವಿವರಿಸಲಾಗಿದೆ. ಬ್ಯಾನರ್, ಬಂಟಿಂಗ್ಸ್‌ಗಳನ್ನು ಹರಿದು ವಿರೂಪಗೊಳಿಸಿ ಅಶಾಂತಿ ಸೃಷ್ಠಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಜಾಗೃತಕ್ರಮವಾಗಿ ಪೊಲೀಸರು ಈ ಕ್ರಮ ಕೈಗೊಂಡಿರುವುದಾಗಿ ತಿಳಿದು ಬಂದಿದೆ.

Read More »

 ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್‌ಗಿರಿ ಹತ್ತಿಕ್ಕಲು ಆಂಟಿ ಕಮ್ಯೂನಲ್‌ ವಿಂಗ್‌ ಸ್ಥಾಪನೆ: ಜಿ ಪರಮೇಶ್ವರ್‌. ಮಂಗಳೂರು ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಟಿ

ಮಂಗಳೂರು, ಜೂನ್‌ 6: ಕರಾವಳಿ ಭಾಗದಲ್ಲಿ ನಡೆಯುವ ನೈತಿಕ ಪೊಲೀಸ್​ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಮಂಗಳೂರು ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಗಳೂರು ಕಮಿಷನರೇಟ್​ ವ್ಯಾಪ್ತಿಯಲ್ಲಿ ಆಂಟಿ ಕಮ್ಯೂನಲ್‌ ವಿಂಗ್‌ನ ಹೊಸ ಘಟಕ ಆರಂಭಿಸುತ್ತೇವೆ. ಈ ವಿಂಗ್​ನಲ್ಲಿ ಸಮರ್ಥ ಅಧಿಕಾರಿಗಳು ಇರಲಿದ್ದಾರೆ. ಕರಾವಳಿ ಭಾಗದಲ್ಲಿ ಒಳ್ಳೆಯ ಜನರು ಇದ್ದಾರೆ ಎಂದು ನಾವೆಲ್ಲಾ ನಂಬಿದ್ದೇವೆ. ಈ ಭಾಗದಲ್ಲಿ ಭಯದ ವಾತಾವರಣವಿದೆ ಎಂದು ಜನರು ಮಾತಾನಾಡುತ್ತಿದ್ದಾರೆ. ಕೋಮು ಸೌಹಾರ್ದತೆಯನ್ನು ತರಲು ಪೊಲೀಸರಿಗೆ ಸೂಚನೆ …

Read More »

ರಾಜ್ಯದ ಜನರಲ್ಲಿ ಭಯ ಹುಟ್ಟಿಸಿದ ಮುಂಗಾರು!ತಡವಾದರೂ ಟೆನ್ಷನ್ ಬೇಡ, ರಾಜ್ಯದಲ್ಲಿ ಭರ್ಜರಿ ಮಳೆ: ಹವಮಾನ ಇಲಾಖೆ

ವೇಣೂರು, ಜೂ. 5: ‘ಮುಂಗಾರು ಮಳೆ’.. ರಾಜ್ಯಕ್ಕೆ ಅದರಲ್ಲೂ ಕರಾವಳಿಗೆ ಈ ಮಳೆ ಅಮೃತಕ್ಕೆ ಸಮಾನ. ಬಿರು ಬೇಸಿಗೆಯಿಂದ ನರಳಿದ ಜಾಗಕ್ಕೆ, ಇದೇ ಮಳೆ ಮತ್ತೆ ಜೀವಕಳೆ ನೀಡುತ್ತದೆ. ನಮ್ಮಲ್ಲಿನ ಕಾಡುಗಳಿಗೆ ಈ ಮಳೆಯೇ ಆಧಾರ. ಆದರೆ ಈ ಬಾರಿ ಮುಂಗಾರು ಮಳೆ ತಡವಾಗುತ್ತಿರುವುದು ಜನರಲ್ಲಿ ಭಯ ಹುಟ್ಟಿಸಿದೆ.ದಕ್ಷಿಣ ಭಾರತದ ಕೇರಳ ಕರಾವಳಿ ಮೂಲಕ ಎಂಟ್ರಿ ಕೊಡುವ ಮುಂಗಾರು ಮಾರುತಗಳು ಜೀವಕಳೆ ನೀಡುತ್ತವೆ. ಅದರಲ್ಲೂ ಕನ್ನಡ ನಾಡಿಗೆ ಇದೇ ಮಾರುತಗಳೇ ಆಧಾರ. ಆದರೆ ಈ ಬಾರಿ ಅಂದುಕೊಂಡ ರೀತಿ ಮುಂಗಾರು ಮೋಡಗಳು ಎಂಟ್ರಿ ಕೊಟ್ಟಿಲ್ಲ. …

Read More »

ವೇಣೂರು ಪತಂಜಲಿ ರಾಮಚಂದ್ರ ನಾಯಕ್‌ರವರ ಮೊಮ್ಮಗ ಮಾ| ವಿಘ್ನೇಶ್ ಬ್ರಹ್ಮೋಪದೇಶ ಗುಂಡೂರಿ ಆಶ್ರಮವಾಸಿಗಳಿಗೆ ಸಿಹಿಯೂಟ, ಟ್ರಸ್ಟ್‌ನಿಂದ ಪ್ರತಿಭಾ ಪುರಸ್ಕಾರ

ಆರಂಬೋಡಿ, ಜೂ. 4: ವೇಣೂರು ಪತಂಜಲಿ ಪುನರ್ನವ ಮಳಿಗೆಯ ರಾಮಚಂದ್ರ ನಾಯಕ್‌ರವರ ಮೊಮ್ಮಗ, ನಾಗೇಶ್ ನಾಯಕ್ ಮತ್ತು ಸ್ವಾತಿ ನಾಗೇಶ್ ನಾಯಕ್ ದಂಪತಿಯ ಪುತ್ರ ಮಾ| ವಿಘ್ನೇಶ್ ಬ್ರಹ್ಮೋಪದೇಶಯ ಪ್ರಯುಕ್ತ ಗುಂಡೂರಿಯ ಶ್ರೀಗುರು ಚೈತನ್ಯ ಸೇವಾಶ್ರಮದ ಆಶ್ರಮವಾಸಿಗಳಿಗೆ ಸಿಹಿಯೂಟದ ವ್ಯವಸ್ಥೆ ಕಲ್ಪಿಸಿ ಧನ್ಯತೆ ಮೆರೆದಿದ್ದಾರೆ. ವಟುವಿನ ಹೆತ್ತವರಾದ ನಾಗೇಶ್ ನಾಯಕ್ ಮತ್ತು ಸ್ವಾತಿ ನಾಗೇಶ್ ನಾಯಕ್ ಅವರು ಆಶ್ರಮವಾಸಿಗಳಿಗೆ ಸಿಹಿಯೂಟ ಬಡಿಸಿದರು. ಟ್ರಸ್ಟ್‌ನಿಂದ ಪ್ರತಿಭಾ ಪುರಸ್ಕಾರದ್ವಿತೀಯ ಪಿಯುಸಿಯಲ್ಲಿ ಶೇ. ೯೩ ಅಂಕವನ್ನು ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದಿರುವ ಪಡೆದ ಬಜಿರೆ ಗ್ರಾಮದ ಮಿಯಲಾಜೆ ನಿವಾಸಿ …

Read More »

ಇಂದಿರಾ ಕ್ಯಾಂಟೀನ್‌ಗಳ ಸ್ಥಿತಿಗತಿಗಳ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ CM ಸೂಚನೆ. ರಾಜ್ಯದಲ್ಲಿಬರಲಿವೆ 50 ಹೊಸ ಇಂದಿರಾ ಕ್ಯಾಂಟೀನ್?

ಬೆಂಗಳೂರು, ಜೂನ್ 04; ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪೂರ್ಣ ಬಹುಮತ ಪಡೆದು ಸರ್ಕಾರ ರಚನೆ ಮಾಡಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಸರ್ಕಾರ ಮುನ್ನಡೆಸುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆ. ಈಗ ಈ ಯೋಜನೆಯನ್ನು ಮತ್ತೆ ಕಾರ್ಯಗತಗೊಳಿಸುವ ಚರ್ಚೆ ಆರಂಭವಾಗಿದೆ. ಬೆಂಗಳೂರು ನಗರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇಂದಿರಾ ಕ್ಯಾಂಟೀನ್ ಉಸ್ತುವಾರಿ ನೋಡಿಕೊಳ್ಳುತ್ತದೆ. ನಗರದಲ್ಲಿ ಹೊಸದಾಗಿ 50 ಇಂದಿರಾ ಕ್ಯಾಂಟೀನ್ ಆರಂಭಿಸಲು ಸಿದ್ಧತೆ ನಡೆದಿದೆ. ಈಗ ಕಾಂಗ್ರೆಸ್ ಸರ್ಕಾರವೇ ಅಸ್ತಿತ್ವದಲ್ಲಿ ಇರುವುದರಿಂದ ಕ್ಯಾಂಟೀನ್ ನಿರ್ವಹಣೆ ಮಾಡಲು ಅನುದಾನದ ಕೊರತೆ …

Read More »

ಮಂಗಳೂರಿನಲ್ಲಿ ಕಾರ್ಯಕ್ರಮ ಸಂಯೋಜಕರು, ಕಚೇರಿ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ.

ಮಂಗಳೂರು, ಜೂ. 4: ಜಿಲ್ಲೆಯ ಬಾಲಭವನದ ಚಟುವಟಿಕೆ ಮತ್ತು ಕಾರ್ಯಕ್ರಮ ನಡೆಸಲು ಕಂಪ್ಯೂಟರ್ ಜ್ಞಾನ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಕಾರ್ಯಕ್ರಮ ಸಂಯೋಜಕರು ಹಾಗೂ ಕಚೇರಿ ಸಹಾಯಕರ ಹುದ್ದೆಗೆ ಮಾಸಿಕ ಗೌರವಧನ 10,000 ರೂ.ಗಳ ಆಧಾರದಲ್ಲಿ ಅರ್ಜಿ ಆಹ್ವಾನಿಸಲಾಗಿದೆ.ಪಿ.ಯು.ಸಿ ಮತ್ತು ಮೇಲ್ಪಟ್ಟ ವಿದ್ಯಾರ್ಹತೆಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರುವ ಅರ್ಹ ಅಭ್ಯರ್ಥಿಗಳು ಕಾರ್ಯಕ್ರಮ ಸಂಯೋಜಕರು ಹಾಗೂ ಕಚೇರಿ ಸಹಾಯಕರ ಹುದ್ದೆಗೆ 2023ರ ಜೂನ್ 6ರೊಳಗೆ ಅರ್ಜಿ ಭರ್ತಿ ಮಾಡಿ ನಗರದ ಬಿಜೈನಲ್ಲಿರುವ ಮೆಸ್ಕಾಂ ಹತ್ತಿರದ ಜಿಲ್ಲಾ ಸ್ತ್ರೀಶಕ್ತಿ ಭವನ 2ನೇ ಮಹಡಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ …

Read More »

You cannot copy content of this page.