Uncategorized

ತೀರ್ಪುಗಾರರ ಮಂಡಳಿಯ ರಾಜ್ಯ ಸಂಚಾಲಕರಾಗಿ ಪ್ರಭಾಕರ್ ನಾರಾವಿ ನೇಮಕ

ಬೆಂಗಳೂರು/ನಾರಾವಿ, ಎ.11: ಕರ್ನಾಟಕ ರಾಜ್ಯ ಅಮೇಚೂರು ಸಂಸ್ಥೆ ಬೆಂಗಳೂರು, ಕರ್ನಾಟಕ ರಾಜ್ಯ ತೀರ್ಪುಗಾರರ ಮಂಡಳಿ ಬೆಂಗಳೂರು ಹಾಗೂ ಕಂಠೀರವ ಕ್ರೀಡಾಂಗಣ ಬೆಂಗಳೂರು ಇದರ ವತಿಯಿಂದ ಪ್ರಭಾಕರ್ ನಾರಾವಿ ಅವರನ್ನು ರಾಜ್ಯ ಅಮೆಚೂರ್ ಸಂಸ್ಥೆ ಬೆಂಗಳೂರಿನ ತೀರ್ಪುಗಾರರ ಮಂಡಳಿಯ ರಾಜ್ಯ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ, ತಾಲೂಕು ಶಿಕ್ಷಕ ಸಂಘದ ಅಧ್ಯಕ್ಷರಾಗಿ, ತಾಲೂಕು ಕಬಡ್ಡಿ ತೀರ್ಪುಗಾರರ ಮಂಡಳಿ ಅಧ್ಯಕ್ಷರಾಗಿ, ದ.ಕ. ಜಿಲ್ಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರತಿನಿಧಿಯಾಗಿ, ಪ್ರಸ್ತುತ ನಾರಾವಿ ಉನ್ನತೀಕರಿಸಿದ ಮಾಧ್ಯಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಹಾಗೂ ಕಳೆದ ೧೦ ವರ್ಷಗಳಿಂದ …

Read More »

ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸಾಟಿ ವೇಣೂರು ಶಾಖೆಯ ಉದ್ಘಾಟನೆ

ವೇಣೂರು, ಮಾ. 2: ಸತತ ೩ ಬಾರಿ ಕರ್ನಾಟಕ ರಾಜ್ಯದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಪುರಸ್ಕೃತ ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸಾಟಿ (ಗೌಡರ ಯುವ ಸೇವಾ ಸಂಘ ರಿ. ಸುಳ್ಯ ಪ್ರವರ್ತಿತ) ಇದರ ೨೧ನೇ ನೂತನ ಶಾಖೆಯು ವೇಣೂರು ಮಹಾವೀರ ನಗರದ ಮಂಜುಶ್ರೀ ಕಾಂಪ್ಲೆಕ್ಸ್‌ನಲ್ಲಿ ರವಿವಾರ ಉದ್ಘಾಟನೆಗೊಂಡಿತು.ಮಂಗಳೂರು ವಿ.ಜಿ.ಎಸ್. ಸೌಹಾರ್ದ ಸಹಕಾರಿ ಇದರ ಅಧ್ಯಕ್ಷ ಕೆ. ಲೋಕಯ್ಯ ಗೌಡ ಅವರು ನೂತನ ಶಾಖೆಯನ್ನು ಉದ್ಘಾಟಿಸಿ, ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಸಾಧನೆ ಮಾಡಿದ ಸಹಕಾರಿ ಸಂಘಗಳಲ್ಲಿ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ …

Read More »

ವೇಣೂರು ಸದಾಶಿವ ಕುಲಾಲರ 51ರ ಯಕ್ಷಪಯಣಎ. 11ರಂದು ವೇಣೂರಿನಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ

ವೇಣೂರು: ಪ್ರಸಿದ್ಧ ಯಕ್ಷಗಾನ ಕಲಾವಿದರು, ದಿಗಿಣದ ರಾಜ ಎಂದೇ ಖ್ಯಾತಿಯಾಗಿರುವ ವೇಣೂರು ಸದಾಶಿವ ಕುಲಾಲ್ ಅವರ ೫೧ರ ಯಕ್ಷಪಯಣದ ಸಂಭ್ರಮದ ಹಿನ್ನೆಲೆಯಲ್ಲಿ ಎ. ೧೧ರಂದು ರಾತ್ರಿ ೮ ಗಂಟೆಯಿಂದ ವೇಣೂರು ಮುಖ್ಯಪೇಟೆಯ ಗಾರ್ಡನ್ ವ್ಯೂ ಬಳಿ ಶ್ರೀ ಹನುಮಗಿರಿ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಜರಗಲಿದೆ.ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಚಿನ್ನಯ ಭಟ್ ಕಲ್ಲಡ್ಕ ಹಾಗೂ ಪ್ರಧಾನ ಭೂಮಿಕೆಯಲ್ಲಿ ಸುಪ್ರಸಿದ್ಧ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ದಿ. ಕೆ. ನರಸಿಂಹ ಪೈ, ದಿ. ಪಿ. ನರಸಿಂಹ ರಾವ್ ಪಂಜಾಲಬೈಲು, ದಿ. ಡಾ. ಬಿ.ಪಿ. ಇಂದ್ರ, ದಿ. …

Read More »

ಕುಲಶೇಖರ ದೇಗುಲ: ನಾಗದೇವರ ಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆ

ಮಂಗಳೂರು: ಇಲ್ಲಿಯ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ನಿಮಿತ್ತ ಶ್ರೀ ನಾಗದೇವರ ಕಟ್ಟೆಯ ಪುನರ್ ನಿರ್ಮಾಣಕ್ಕೆ ಇಂದು ಭೂಮಿಪೂಜೆ ನೆರವೇರಿಸಲಾಯಿತು.ಶ್ರೀಹರಿ ಉಪಾಧ್ಯಾಯವರ ಪೌರೋಹಿತ್ಯದಲ್ಲಿ ನಡೆದ ಪೂಜಾ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಮಂಡಳಿ, ವಿವಿಧ ಸಮಿತಿಯ ಪದಾಧಿಕಾರಿಗಳು, ಭಕ್ತರು ಭಾಗವಸಿದ್ದರು. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಪ್ರಗತಿಯಲ್ಲಿದ್ದು, ಮೇ ೧೫ರಿಂದ ೨೪ರವರೆಗೆ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಜರಗಲಿದೆ.

Read More »

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಬೆಳ್ತಂಗಡಿ ತಾ.ನಲ್ಲಿ 25 ಮಂದಿ ಗೈರು

ಬೆಳ್ತಂಗಡಿ, ಮಾ. ೩೧: ತಾಲೂಕಿನ ೧೪ ಪರೀಕ್ಷಾ ಕೇಂದ್ರಗಳಲ್ಲಿ ೭೦ ಪ್ರೌಢಶಾಲೆಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದಿದ್ದು, ಪರೀಕ್ಷೆಗೆ ನೋಂದಾಯಿಸಿದ್ದ ೪೦೧೩ ಮಂದಿಯಲ್ಲಿ ೩೯೮೮ ವಿದ್ಯಾರ್ಥಿಗಳು ಹಾಜರಾಗಿದ್ದರು.ಶುಕ್ರವಾರ ನಡೆದ ಪ್ರಥಮ ಭಾಷೆ ಪರೀಕ್ಷೆ ನಡೆದಿದ್ದು, ೩೯೭೮ ಹೊಸ ವಿದ್ಯಾರ್ಥಿಗಳು ಹಾಗೂ ೩೫ ಮಂದಿ ಮರು ಪರೀಕ್ಷೆ ಬರೆಯಲು ನೋಂದಾಯಿಸಿದ್ದರು. ಹೊಸ ವಿದ್ಯಾರ್ಥಿಗಳ ಪೈಕಿ ೧೯ ಮಂದಿ ಹಾಗೂ ಮರು ಪರೀಕ್ಷೆ ಬರೆಯುವ ೬ ಮಂದಿ ಗೈರು ಹಾಜರಾಗಿದ್ದಾರೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

Read More »

ಆರ್ಥಿಕ ಸಹಾಯಕ್ಕಾಗಿ ಕುಲಾಲ ಕುಟುಂಬದಿಂದ ದಾನಿಗಳ ಮೊರೆ

ಬಂಟ್ವಾಳ: ಆರ್ಥಿಕವಾಗಿ ಬಳಲಿರುವ ನಮಗೆ ಸಹಾಯ ಮಾಡುವಂತೆ ಬಂಟ್ವಾಳ ತಾಲೂಕಿನ ಬಡಕಜೆಕಾರುವಿನ ಕುಲಾಲ ಕುಟುಂಬವೊಂದು ದಾನಿಗಳ ಮೊರೆ ಹೋಗಿದೆ.ಬಡಗಕಜೆಕಾರು ಪಾದೆ ದರ್ಖಾಸು ಮಾಡಪಲ್ಕೆ ನಿವಾಸಿ ಬಾಲಕೃಷ್ಣ ಕುಲಾಲ್ ಮತ್ತು ಭಾರತಿ ದಂಪತಿ ಆರ್ಥಿಕ ಸಹಾಯಕ್ಕಾಗಿ ಮೊರೆ ಹೋದ ಕುಟುಂಬ. ಬಾಡಿಗೆ ಮನೆಯಲ್ಲಿದ್ದ ಇವರು ಕಳೆದೆರಡು ವರ್ಷದ ಹಿಂದೆ ಸರಕಾರದ ೯೪ಸಿ ಯೋಜನೆಯಡಿ ೫ ಸೆಂಟ್ಸ್ ನಿವೇಶನ ಪಡೆದುಕೊಂಡಿದ್ದು, ಚಿಕ್ಕದಾದ ಆರ್‌ಸಿಸಿ ಮನೆ ನಿರ್ಮಿಸಿಕೊಂಡಿದ್ದಾರೆ. ಬಾಲಕೃಷ್ಣ ಕುಲಾಲ್ ಗಾರೆ ಕೆಲಸಕ್ಕೆ ಹೋಗುತ್ತಿದ್ದು, ಪ್ರತೀದಿನ ಕೆಲಸ ಸಿಗುವುದಿಲ್ಲ ಎನ್ನುವ ಅವರು ಮಳೆಗಾಲದಲ್ಲಂತೂ ತಿಂಗಳುಗಳ ಕಾಲ ಮನೆಯಲ್ಲೇ ಇರಬೇಕಾದ …

Read More »

ಬೆಳ್ತಂಗಡಿಯಲ್ಲಿ ರೂ. ೧೨ ಕೋಟಿ ವೆಚ್ಚದಲ್ಲಿ ಕೆಎಎಸ್‌ಆರ್‌ಟಿಸಿ ಬಸ್ ತಂಗುದಾಣ: ಶಾಸಕ ಹರೀಶ್ ಪೂಂಜ

ವೇಣೂರು: ತಾಲೂಕು ಕೇಂದ್ರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ತಂಗುದಾಣ ಇಲ್ಲ ಎಂದು ನಾಚಿಕೆ ಪಟ್ಟುಕೊಳ್ಳುವ ಸಮಯ ಕಳೆದುಹೋಗಿದೆ. ತಾಲೂಕು ಕೇಂದ್ರ ಭಾಗದಲ್ಲೇ ವಿವಿಧ ಇಲಾಖೆಗೆ ಸಂಬಂಧಿತ ೧.೨೦ ಎಕ್ರೆ ಜಾಗವನ್ನು ಒಟ್ಟು ಮಾಡಿ ಕೆಎಸ್‌ಆರ್‌ಟಿಸಿಗೆ ಹಸ್ತಾಂತರಿಸುವ ಪ್ರಕ್ರಿಯೆ ಮುಗಿದು ಬೊಮ್ಮಾಯಿ ಸರಕಾರ ರೂ. ೧೨ ಕೋಟಿ ಅನುದಾನ ಒದಗಿಸಿ ಕೆಲಸಕಾರ್ಯ ಆರಂಭವಾಗಿದ್ದು, ಬಹುದೊಡ್ಡ ಸವಾಲಿನ ಕಾರ್ಯ ಇದಾಗಿತ್ತು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ವೇಣೂರು ಮುಖ್ಯಪೇಟೆಯಲ್ಲಿ ರೂ. ೧.೮೦ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಮಾದರಿ ವಾಣಿಜ್ಯ ಸಂಕೀರ್ಣ ಸಹಿತ ಬಸ್ ತಂಗುದಾಣದ ಉದ್ಘಾಟನೆ ನೆರವೇರಿಸಿ …

Read More »

ಅಳದಂಗಡಿ ಸೌಮ್ಯ ರೆಸಿಡೆನ್ಸಿ ಲಾಡ್ಜಿಂಗ್, ರೆಸ್ಟೋರೆಂಟ್ ಉದ್ಘಾಟನೆ

ವೇಣೂರು: ಧರ್ಮಸ್ಥಳ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಳದಂಗಡಿಯ ಸೌಮ್ಯ ರೆಸಿಡೆನ್ಸಿ ಪ್ರವಾಸಿಗರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ರಾಜಕೀಯ, ಸಹಕಾರ, ಕಲೆ, ಉದ್ಯಮ ಮುಂತಾದ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಸುಂದರ ಹೆಗ್ಡಯವರು ಸೌಮ್ಯ ಸ್ವಭಾವದ ಬಹುವ್ಯಕ್ತಿತ್ವ ಉಳ್ಳವರಾಗಿದ್ದು, ಸಮಾಜಕ್ಕೆ ಇವರ ಕೊಡುಗೆ ಇನ್ನಷ್ಟು ದೊರಕುವಂತಾಗಲಿ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಅಳದಂಗಡಿಯ ಹೃದಯಭಾಗದಲ್ಲಿ ನಿರ್ಮಿಸಲಾದ ಸೌಮ್ಯ ರೆಸಿಡೆನ್ಸಿ ಬೋರ್ಡಿಂಗ್ ಆಂಡ್ ಲಾಡ್ಜಿಂಗ್ ರೀಜೆಂಟ್ ಫ್ಯಾಮಿಲಿ ರೆಸ್ಟೋರೆಂಟ್ ಇದರ ಉದ್ಘಾಟನೆಯನ್ನು ಬುಧವಾರ ನೆರವೇರಿಸಿ ಅವರು ಮಾತನಾಡಿ, ಸಂಸ್ಥೆಯಲ್ಲಿ ಸುಮಾರು ೫೦ ಮಂದಿಗೆ ಉದ್ಯೋಗ ನೀಡಿ ಅವರ ಕುಟುಂಬಕ್ಕೆ …

Read More »

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ..ನೋಡುವುದು ಹೇಗೆ, ಇಲ್ಲಿದೆ ಮಾಹಿತಿ

ಬೆಂಗಳೂರು, ಮಾರ್ಚ್‌ 31: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಶುಕ್ರವಾರ ಪ್ರಥಮ ಪಿಯುಸಿ ಫಲಿತಾಂಶ 2023 ಪ್ರಕಟಿಸಿದೆ. 11 ನೇ ತರಗತಿಯ ವಾಣಿಜ್ಯ, ವಿಜ್ಞಾನ, ಕಲಾ ವಿಭಾಗದ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈಗ ತಮ್ಮ ಫಲಿತಾಂಗಳನ್ನು ತಿಳಿಯಬಹುದಾಗಿದೆ. ವಿದ್ಯಾರ್ಥಿಗಳು  ಫಲಿತಾಂಶ 2023 ಕರ್ನಾಟಕವನ್ನು ಅಧಿಕೃತ ವೆಬ್‌ಸೈಟ್ result.dkpucpa.com ನಲ್ಲಿ ಪರಿಶೀಲಿಸಬಹುದು. ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶಗಳು 2023 ಅನ್ನು ಫಲಿತಾಂಶವನ್ನು ಡೌನ್‌ಲೋಡ್ ಮಾಡಲು ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಬೇಕು. ವಿದ್ಯಾರ್ಥಿಗಳು ಬೆಳಗ್ಗೆ 9.30ಕ್ಕೆ ತಮ್ಮ ಫಲಿತಾಂಶವನ್ನು ಈಗಾಗಲೇ ಪಡೆಯಬಹುದಾಗಿದೆ.

Read More »

ಪೋಷಕರೇ ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಐಸ್‌ಕ್ರೀಮ್‌ ಕೊಟ್ಟರೆ ಉತ್ತಮ?

ಐಸ್‌ಕ್ರೀಮ್‌ ಅಂದ್ರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ಹೇಳಿ. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಅದ್ರಲ್ಲೂ ಮಕ್ಕಳಿಗೆ ಮೊದಲ ಬಾರಿಗೆ ಐಸ್‌ಕ್ರೀಮ್‌ ಕೊಟ್ಟಾಗ ಅವರು ಅದನ್ನು ಚಪ್ಪರಿಸಿ ತಿನ್ನೋದನ್ನ ನೋಡೋದೇ ಒಂದು ರೀತಿ ಖುಷಿ. ಆದ್ರೆ ಚಿಕ್ಕ ಮಕ್ಕಳಿಗೆ ಐಸ್‌ಕ್ರೀಮ್‌ ಕೊಡಬಾರದು ಅಂತಾರೆ. ಹಾಗಾದ್ರೆ ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಈಸ್‌ಕ್ರೀಮ್‌ ಕೊಡಬೇಕು? ಒಂದು ವರ್ಷದ ಕೆಳಗಿನ ಮಕ್ಕಳಿಗೆ ಯಾಕೆ ಐಸ್‌ಕ್ರೀಮ್‌ ಕೊಡಬಾರದು? ಮಕ್ಕಳಿಗೆ ಐಸ್‌ಕ್ರೀಮ್‌ ಕೊಡೋ ವಿಧಾನ ಹೇಗೆ ಎಂಬುವುದರ ಬಗ್ಗೆ ವಿವರವಾಗಿ ನೋಡೋಣ. ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಐಸ್‌ಕ್ರೀಮ್‌ …

Read More »

You cannot copy content of this page.