Uncategorized

ಎ.17: ಬಿಜೆಪಿ, ಕಾಂಗ್ರೆಸ್, ಎಸ್‌ಡಿಪಿಐ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಬೆಳ್ತಂಗಡಿ ಹೆದ್ದಾರಿ ಸಂಚಾರದಲ್ಲಿ ಅಡಚಣೆ ಸಾಧ್ಯತೆ, ಸಂಚಾರ ಬದಲಾವಣೆಗೆ ಡಿ.ಸಿ. ಆದೇಶ

ಬೆಳ್ತಂಗಡಿ, ಎ. 15 ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಎ. ೧೭ರಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಎಸ್.ಡಿ.ಪಿ.ಐ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಒಂದೇ ದಿನ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದು, ಸಾವಿರಾರು ಕಾರ್ಯಕರ್ತರು ಭಾಗಿಯಾಗುವ ಸಾಧ್ಯತೆಯಿದ್ದು, ಬೆಳ್ತಂಗಡಿ ನಗರ ಹೆದ್ದಾರಿ ಅಸ್ತವ್ಯಸ್ತ ಆಗುವ ಸಂಭವವನ್ನು ತಪ್ಪಿಸಲು ಸಂಚಾರದಲ್ಲಿ ಬದಲಾವಣೆ ತರುವಂತೆ ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.ತಮ್ಮ ತಮ್ಮ ಕಾರ್ಯಕರ್ತರ ಜೊತೆ ಒಂದೇ ದಿನ ನಾಮಪತ್ರ ಸಲ್ಲಿಸಲಿರುವುದರಿಂದ ಬೆಳ್ತಂಗಡಿ ಪೇಟೆಯಲ್ಲಿ ಅತ್ಯಧಿಕ ಜನ ಸಂದಣಿಯಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ.ಈ ಸಮಯದಲ್ಲಿ …

Read More »

ಕುತ್ಲೂರು: ಕಲ್ಕುಡ ಕಲ್ಲುರ್ಟಿ-ಪಂಜುರ್ಲಿ ದೈವಸ್ಥಾನದ ತುಳು ಭಕ್ತಿಗೀತೆ ಬಿಡುಗಡೆ

ನಾರಾವಿ, ಎ. 15: ವಜ್ರನಾಭ ಜೈನ್ ನಾರಾವಿ ನಿರ್ಮಾಣದ ಸುರೇಂದ್ರ ಜೈನ್ ನಾರಾವಿ ನಿರ್ದೇಶನದಲ್ಲಿ ಕುತ್ಲೂರು ಗ್ರಾಮದ ಅರಸಕಟ್ಟೆಯಲ್ಲಿರುವ ಕಲ್ಕುಡ ಕಲ್ಲುರ್ಟಿ-ಪಂಜುರ್ಲಿ ದೈವಸ್ಥಾನದ ಕುರಿತಾಗಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಟಿ.ಎನ್. ಕ್ರಿಯೇಷನ್‌ರವರ ಕಲ್ಕುಡ ಮಹಿಮೆ ಎಂಬ ತುಳು ಭಕ್ತಿಗೀತೆ ಇತ್ತೀಚೆಗೆ ಬಿಡುಗಡೆಗೊಂಡಿತ್ತು.ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ ದೈವದ ಮಹಿಮೆಯನ್ನು ಸಾರುವ ದೃಶ್ಯದ ಮೂಲಕ ವಿಭಿನ್ನ ಶೈಲಿಯ ಭಕ್ತಿಗೀತೆಯನ್ನು ವಜ್ರನಾಭ ಜೈನ್ ನಾರಾವಿ ಲೋಕಾರ್ಪಣೆಗೊಳಿಸಿದರು. ಈ ಭಕ್ತಿ ಗೀತೆಯ ಸಾಹಿತ್ಯ ಪಾರ್ಶ್ವನಾಥ ಜೈನ್ ಕಕ್ಯಪದವು, ಗಾಯನ ಮತ್ತು ವಿಡಿಯೋ ಚಿತ್ರೀಕರಣ ಗಣೇಶ್ ಹೆಗ್ಡೆ …

Read More »

ನಿಟ್ಟಡೆ ಕುಂಭಶ್ರೀ ಶಾಲೆ ಸ್ಕೂಟರ್ ಸ್ಕಿಡ್: ಸವಾರರಿಗೆ ಗಾಯ

ವೇಣೂರು, ಎ. 15: ಕುಕ್ಕೇಡಿ ಗ್ರಾ.ಪಂ. ವ್ಯಾಪ್ತಿಯ ನಿಟ್ಟಡೆ ರಾಜ್ಯ ಹೆದ್ದಾರಿ ಕುಂಭಶ್ರೀ ಶಾಲೆ ಬಳಿ ದ್ವಿಚಕ್ರ ವಾಹನ ಸ್ಕಿಡ್ ಆಗಿ ಸವಾರರು ಗಾಯಗೊಂಡ ಘಟನೆ ನಡೆದಿದೆ.ಗಾಯಾಳನ್ನು ಕುಕ್ಕೇಡಿ ಗ್ರಾಮದ ಗ್ರೆಗೋರಿ ಫೆರ್ನಾಂಡಿಸ್ ಹಾಗೂ ಲ್ಯಾನ್ಸಿ ಫೆರ್ನಾಂಡಿಸ್ ಗಾಯಗೊಂಡವರು. ಎ. ೧೦ರಂದು ವೇಣೂರು ಚರ್ಚ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದೆರಡು ತಿಂಗಳಿನಿಂದ ನಿಟ್ಟಡೆ ಬಳಿ ಹಲವು ಅಪಘಾತಗಳು ಸಂಭವಿದೆ. ಕಳೆದೊಂದು ವಾರದ …

Read More »

ವೇಣೂರು ಜಾತ್ರೋತ್ಸವ: ಗಮಕ ವಾಚನ, ಮನೋರಂಜನೆ ಕಾರ್ಯಕ್ರಮ

ವೇಣೂರು, ಎ. 15: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ. ೧14ರಿಂದ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಭಾಕರ ಪ್ರಭು ಮತ್ತು ಪ್ರಜ್ಞಾ ಪ್ರಭು ಅವರಿಂದ ಗಮಕ ವಾಚನ ಕಾರ್ಯಕ್ರಮ ನಡೆಯಿತು. ಪ್ರಭಾಕರ ಪ್ರಭು ಅವರು ಗಮಕ ವಾಚನದ ವಿವರಣೆ ನೀಡಿದ್ದು, ಪ್ರಜ್ಞಾ ಪ್ರಭು ಅವರ ಗಾಯನದೊಂದಿಗೆ ನಡೆದ ಕಾರ್ಯಕ್ರಮ ನೋಡುಗರ ಮನಸೋರೆಗೊಳಿಸಿತು.ಇಂದಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿಟ್ಟಡೆ ಕುಂಭಶ್ರೀ ಆಂಗ್ಲಮಾಧ್ಯಮ ವಸತಿ ಶಾಲೆ ಮತ್ತು ಕಾಲೇಜಿನ ಮಕ್ಕಳಿಂದ ಮನೋರಂಜನೆ ಕಾರ್ಯಕ್ರಮ ಜರಗಲಿದೆ. ಬಳಿಕ ಸಂಗೀತ ಕಚೇರಿ ಕಾರ್ಯಕ್ರಮ ನಡೆಯಲಿದೆ.

Read More »

ವೇಣೂರು ದೇವಸ್ಥಾನ: ಧ್ವಜಾರೋಹಣ, ಜಾತ್ರಾ ಮಹೋತ್ಸವಕ್ಕೆ ಚಾಲನೆ

ವೇಣೂರು, ಎ. 15: ಇತಿಹಾಸ ಪ್ರಸಿದ್ಧ ಇತ್ತೀಚೆಗೆ ಶಿಲಾಮಯ ದೇವಾಲಯವಾಗಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನೆರವೇರಿರುವ ವೇಣೂರು ಶ್ರೀ ಮಹಾಲಿಂಗೇಶ್ವರದ ಜಾತ್ರಾ ಮಹೋತ್ಸವಕ್ಕೆ ಎ. ೧೪ರಂದು ಚಾಲನೆ ದೊರೆಯಿತು.ಬೆಳಿಗ್ಗೆ ಪುಣ್ಯಾಹಃ, ಗಣಯಾಗ, ತೋರಣ ಮುಹೂರ್ತ, ಏಕಾದಶ ರುದ್ರಾಭಿಷೇಕ, ನವಕ ಪ್ರಧಾನ, ಕಂಕಣಬಂಧ ಜರಗಿ ಬೆಳಿಗ್ಗೆ ೧೧-೩೦ಕ್ಕೆ ಧ್ವಜಾರೋಹಣ ನೆರವೇರಿಸಿ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಸಂಜೆ ಪ್ರಭಾಕರ ಪ್ರಭು ವೇಣೂರು ಅವರ ವಿವರಣೆಯಲ್ಲಿ ಪ್ರಜ್ಞಾ ಪ್ರಭು ವೇಣೂರು ಅವರ ಗಾಯನದೊಂದಿಗೆ ಗಮಕ ವಾಚನ ಸಾಂಸ್ಕೃತಿಕ ಕಾರ್ಯಕ್ರಮ ಜರಗತು. ಜಾತ್ರಾ ಮಹೋತ್ಸವವು ಎ. 23ರವರೆಗೆ ಜರಗಲಿದೆ.ಮೇಷಸಂಕ್ರಮಣವಾದ …

Read More »

ಉಜಿರೆ: ನಿವೃತ್ತ ಸಿಬ್ಬಂದಿಗಳಿಗೆ ಸನ್ಮಾನ ಪ್ರಾಮಾಣಿಕ ನೌಕರರಿ೦ದ ಸಂಸ್ಥೆಯ ಗೌರವ ಹೆಚ್ಚುತ್ತದೆ: ಡಾ. ವೀರೇಂದ್ರ ಹೆಗ್ಗಡೆ

ಉಜಿರೆ: ಶಿಸ್ತು, ಸಂಯಮ, ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆಗಳಿಂದ ಕೆಲಸ ಮಾಡುವ ನೌಕರರು ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇಂತಹ ವ್ಯಕ್ತಿಗಳಿಂದ ಸಂಸ್ಥೆಯ ಗೌರವ ಹೆಚ್ಚುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಧ.ಮಂ. ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಅವರು ಶುಕ್ರವಾರ ಉಜಿರೆಯ ಶ್ರೀ ಸಿದ್ಧವನ ಗುರುಕುಲದಲ್ಲಿ ಶ್ರೀ ಧ.ಮಂ.ಎಜುಕೇಶನಲ್ ಸೊಸೈಟಿಯ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ,ನಿವೃತ್ತರಾದ ಸಿಬ್ಬಂದಿಗಳಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.ಇಸ್ಕಾನ್ ನ ಶ್ರೀಭಕ್ತಿ ವಿಕಾಸ್ ಸ್ವಾಮಿ ಮಹಾರಾಜ್ ಮಾತನಾಡಿ “ಮಾನವ ಜನ್ಮವನ್ನು ಧರ್ಮದ ಶ್ರೇಯಸ್ಸಿಗೆ ಉಪಯೋಗಿಸಬೇಕು.ಮಾನವ ಜೀವನವು ಪ್ರಕೃತಿ ಅವಲಂಬಿತವಾಗಿದೆ,ಪ್ರಕೃತಿಯನ್ನು …

Read More »

ಅಳದಂಗಡಿ ಕಲ್ಲುರ್ಟಿ ದೇವಸ್ಥಾನಕ್ಕೆನಟ ವಿಜಯರಾಘವೇಂದ್ರ ಭೇಟಿ

ಅಳದಂಗಡಿ: ಅಳದಂಗಡಿ ಶ್ರೀ ಸತ್ಯ ದೇವತೆ ಕಲ್ಲುರ್ಟಿ ದೇವಸ್ಥಾನಕ್ಕೆ ಸಂಕ್ರಾಂತಿಯ ಶುಭದಿನದಂದುಕನ್ನಡದ ಜನಪ್ರಿಯ ನಟ ವಿಜಯ ರಾಘವೇಂದ್ರ ಭೇಟಿ ನೀಡಿ, ವಿಶೇಷ ಸೇವೆ ನೀಡಿದರು.ಕ್ಷೇತ್ರಕ್ಕೆ ಆಗಮಿಸಿದ ಅವರನ್ನು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲರು ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಅಳದಂಗಡಿ ತಿಮ್ಮಣ್ಣರಸರಾದ ಪದ್ಮಪ್ರಸಾದ್ ಅಜಿಲರು ಮತ್ತು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಪೀತಾಂಬರ ಹೇರಾಜೆ ಉಪಸ್ಥಿತರಿದ್ದರು.

Read More »

ನಟ ವಿಜಯರಾಘವೇಂದ್ರ ಇಂದು ಪೆರಾಡಿಗೆ

ಮರೋಡಿ, ಎ. 13: ಕನ್ನಡ ಚಲನಚಿತ್ರ ಖ್ಯಾತ ನಟ ವಿಜಯರಾಘವೇಂದ್ರ ಅವರು ಎ. 13ರಂದು ಮರೋಡಿಯ ಪೆರಾಡಿ ಗ್ರಾಮದ ದೋಲ್ದೊಟ್ಟು ಬರ್ಕೆ ಮನೆಯಲ್ಲಿ ನಡೆಯಲಿರುವ ಧರ್ಮ ನೇಮೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ 8-30ರಿಂದ ಧರ್ಮನೇಮ ಜರಗಲಿದ್ದು, ರಾತ್ರಿ 8 ಗಂಟೆಗೆ ವಿಜಯರಾಘವೇಂದ್ರ ಅವರು ಬರ್ಕೆ ಮನೆಗೆ ಆಗಮಿಸುವ ನಿರೀಕ್ಷೆ ಇದೆ.

Read More »

ವೇಣೂರು ಸದಾಶಿವ ಕುಲಾಲ್ ದಿ| ಬಾಬು ಕುಡ್ತಡ್ಕ ಪ್ರಶಸ್ತಿಗೆ ಆಯ್ಕೆ

ಮಂಗಳೂರು, ಎ. 11: 2023ರ ಸಾಲಿನ ಬಾಬು ಕುಡ್ತಡ್ಕ ಪ್ರಶಸ್ತಿಗೆ ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ವೇಣೂರು ಸದಾಶಿವ ಕುಲಾಲ್ ಅವರನ್ನು ದಿ| ಬಾಬು ಕುಡ್ತಡ್ಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸ್ವಸ್ತಿಕ್ ಕಲಾಕೇಂದ್ರ (ರಿ.) ಜಲ್ಲಿಗುಡ್ಡೆ ಮಂಗಳೂರು ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ (ರಿ.) ಪಡೀಲ್ ಇದರ ಆಶ್ರಯದಲ್ಲಿ ಸಮುದಾಯದ ಹಿರಿಯ ಪ್ರಸಿದ್ಧ ಧೀಮಂತ ಕಲಾವಿದರಾಗಿದ್ದ ದಿ. ಬಾಬು ಕುಡ್ತಡ್ಕ ಅವರ ಸವಿನೆನಪಿಗೆ ಪ್ರತೀ ವರ್ಷ ಕಲಾಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಾ ಬಂದಿದೆ. …

Read More »

ವೇಣೂರು ಸದಾಶಿವ ಕುಲಾಲರ 51ರ ಯಕ್ಷಪಯಣ ಇಂದು ವೇಣೂರಿನಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ

ವೇಣೂರು, ಎ. 11: ಪ್ರಸಿದ್ಧ ಯಕ್ಷಗಾನ ಕಲಾವಿದರು, ದಿಗಿಣದ ರಾಜ ಎಂದೇ ಖ್ಯಾತಿಯಾಗಿರುವ ವೇಣೂರು ಸದಾಶಿವ ಕುಲಾಲ್ ಅವರ 51ರ ಯಕ್ಷಪಯಣದ ಸಂಭ್ರಮದ ಹಿನ್ನೆಲೆಯಲ್ಲಿ ಎ. 11ರಂದು ರಾತ್ರಿ 8 ಗಂಟೆಯಿಂದ ವೇಣೂರು ಮುಖ್ಯಪೇಟೆಯ ಗಾರ್ಡನ್ ವ್ಯೂ ಬಳಿ ಶ್ರೀ ಹನುಮಗಿರಿ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಜರಗಲಿದೆ.ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಚಿನ್ನಯ ಭಟ್ ಕಲ್ಲಡ್ಕ ಹಾಗೂ ಪ್ರಧಾನ ಭೂಮಿಕೆಯಲ್ಲಿ ಸುಪ್ರಸಿದ್ಧ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ದಿ. ಕೆ. ನರಸಿಂಹ ಪೈ, ದಿ. ಪಿ. ನರಸಿಂಹ ರಾವ್ ಪಂಜಾಲಬೈಲು, ದಿ. ಡಾ. ಬಿ.ಪಿ. ಇಂದ್ರ, …

Read More »

You cannot copy content of this page.