Uncategorized

ಅಂಡಿಂಜೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯ ವ್ಯಾಮೋಹ ಮೆಚ್ಚಲೇಬೇಕು!

ಅಂಡಿಂಜೆ, ಎ. 16: ತಾನು ವಿದ್ಯೆ ಕಲಿತ ಶಾಲೆಗೆ ಏನಾದರೂ ಕೊಡುಗೆ ನೀಡುವುದು ಖಾಸಗಿ ಶಾಲೆಗಳಲ್ಲಿ ಮಾಮೂಲಿ ಆಗಿರುತ್ತದೆ. ಆದರೆ ಸರಕಾರಿ ಶಾಲೆಗಳಲ್ಲೂ ವಿದ್ಯಾರ್ಥಿಗಳು ವ್ಯಾಮೋಹ ತೋರಿಸುತ್ತಾರೆ ಅನ್ನುವುದನ್ನು ಅಂಡಿಂಜೆ ಸ.ಉ.ಪ್ರಾ. ಶಾಲೆಯ ವಿದ್ಯಾರ್ಥಿನಿಯೋರ್ವಳು ತೋತಿಸಿಕೊಟ್ಟಿದ್ದಾಳೆ.೭ನೇ ತರಗತಿಯ ಶೃತಿ ಅನ್ನುವ ವಿದ್ಯಾರ್ಥಿನಿ ಶಾಲೆಗೆ ಫ್ಯಾನ್ ಕೊಡುಗೆ ನೀಡಿದ್ದು, ಮುಖ್ಯಶಿಕ್ಷಕ ಗುರುಮೂರ್ತಿ ಅವರು ಕೊಡುಗೆಯನ್ನು ವಿದ್ಯಾರ್ಥಿನಿಯಿಂದ ಸ್ವೀಕರಿಸಿದರು.

Read More »

ವೇಣೂರು ಪೊಲೀಸ್ ಠಾಣೆ: ನೊಂದವರ ದಿನಾಚರಣೆ

ವೇಣೂರು, ಎ. 16: ವೇಣೂರು ಪೊಲೀಸ್ ಠಾಣೆಯಲ್ಲಿ ಇಂದು ಪೊಲೀಸ್ ಉಪನಿರೀಕ್ಷಕ ಶ್ರೀಶೈಲಾ ಡಿ. ಮುರುಗೋಡು ಅವರ ನೇತೃತ್ವದಲ್ಲಿ ನೊಂದವರ ದಿನಾಚರಣೆಯನ್ನು ಆಚರಿಸಲಾಯಿತು.ಪ್ರಕರಣದ ಸಂತ್ರಸ್ತರ ಆಹವಾಲು ಆಲಿಸಿದ ಪೊಲೀಸ್ ಉಪನಿರೀಕ್ಷರು ಪ್ರಕರಣದ ತನಿಖೆ ಪ್ರಗತಿ ಕುರಿತು ನೊಂದವರೊಂದಿಗೆ ಮಾಹಿತಿ ಹಂಚಿಕೊಂಡರು.ಸಹಾಯಕ ಪೊಲೀಸ್ ಉಪನಿರೀಕ್ಷಕ ವೆಂಕಟೇಶ್ ನಾಯ್ಕ್, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

Read More »

ಹೊಸಂಗಡಿ: ಒಂದೇ ವರ್ಷದೊಳಗೆ ಬಿರುಕುಬಿಟ್ಟ ಕಾಂಕ್ರಿಟ್ ರೋಡ್!ಕಳಪೆ ಕಾಮಗಾರಿಯೋ..? ಅಧಿಕ ಭಾರದ ವಾಹನ ಸಂಚಾರವೊ..?

ಹೊಸಂಗಡಿ, ಎ. 16: ಹಿಂದಿನ ಕಾಲದ ಡಾಮಾರು ರಸ್ತೆಗಳು ಮೂರ್‍ನಾಲ್ಕು ವರ್ಷ ಬಾಳಿಕೆ ಬರುವ ದಿನಗಳಿತ್ತು. ಆದರೆ ಇಂದು ಡಾಮಾರು ರಸ್ತೆಗಳು ಒಂದೆರಡು ವರ್ಷಗಳಲ್ಲಿ ಎದ್ದುಹೋಗುತ್ತಿವೆ. ಉತ್ಪಾದನೆ ಆಗುವ ಡಾಮಾರೇ ಗುಣಮಟ್ಟವಿಲ್ಲದ ಕಾರಣ ಈ ತೀರಿ ಡಾಮಾರು ರಸ್ತೆ ಹಾಳಾಗಲು ಕಾರಣ ಅನ್ನುವುದನ್ನು ತಳ್ಳಿಹಾಕುವಂತಿಲ್ಲ. ಆದರೆ ಕಾಂಕ್ರಿಟ್ ರಸ್ತೆಯ ಗ್ಯಾರಂಟಿ ಕನಿಷ್ಠ 10 ವರ್ಷವಾದರೂ ಇರಬೇಕಲ್ಲವೇ? ಇಲ್ಲಾ ಅನ್ನುತ್ತಿವೆ ಹೊಸಂಗಡಿ ಗ್ರಾ.ಪಂ. ವ್ಯಾಪ್ತಿಯ ಬಲ್ಲಂಗೇರಿ ದೇಗುಲ ಸಮೀಪದ ಕಾಂಕ್ರಿಟ್ ರಸ್ತೆ! ಸರಿಸುಮಾರು ಕಳೆದ ಒಂದು ವರ್ಷಗಳ ಹಿಂದೆಯಷ್ಟೇ ಬಲ್ಲಂಗೇರಿಯಲ್ಲಿ ಶಾಸಕರ ಅನುದಾನದಲ್ಲಿ ಈ ರಸ್ತೆಯನ್ನು …

Read More »

ಸ್ವಚ್ಛ ಭಾರತ್ ಪರಿಕಲ್ಪನೆಗೆ ಸವಾಲುಮುದ್ದಾಡಿಯಲ್ಲಿ ರಸ್ತೆ ಬದಿ ಸುರಿದ ಪ್ಲಾಸ್ಟಿಕ್ ತ್ಯಾಜ್ಯ

ವೇಣೂರು, ಎ.16: ಒಂದೆಡೆ ಪಂಚಾಯತುಗಳು ಸ್ವಚ್ಛ ಗ್ರಾಮ, ಪ್ಲಾಸ್ಟಿಕ್ ಮುಕ್ತ ಗ್ರಾಮ ಎಂದು ಘೋಷಿಸಿಕೊಳ್ಳಲು ನಾನಾ ಯೋಜನೆಗಳನ್ನು ರೂಪಿಸುತ್ತಿದ್ದರೆ ಮತ್ತೊಂದೆಡೆ ಅಲ್ಲಲ್ಲಿ ಸಾರ್ವಜನಿಕ ರಸ್ತೆ ಬದಿಗಳಲ್ಲೇ ರಾಶಿರಾಶಿ ತ್ಯಾಜ್ಯಗಳು ಕಂಡು ಬರುತ್ತವೆ.ವೇಣೂರು ಗ್ರಾ.ಪಂ. ವ್ಯಾಪ್ತಿಯ ಬಜಿರೆ ಗ್ರಾಮದ ಮುದ್ದಾಡಿಯ ಜನವಸತಿ ಪ್ರದೇಶದ ರಸ್ತೆ ಬದಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸುರಿಯಲಾಗಿದ್ದು, ಸ್ವಚ್ಛ ಭಾರತ್ ಪರಿಕಲ್ಪನೆಗೆ ಸವಾಲು ಎಸೆದಂತಾಗಿದೆ. ಪಂಚಾಯತ್‌ನ ಘನತ್ಯಾಜ್ಯ ವಿಲೇವಾರಿ ಘಟಕದ ಅಣತಿ ದೂರದಲ್ಲೇ ಈ ಪಾಸ್ಟಿಕ್ ತ್ಯಾಜ್ಯದ ರಾಶಿ ಕಂಡು ಬಂದಿದೆ. ತಕ್ಷಣ ಪಂಚಾಯತ್‌ನ ಅಧಿಕಾರಿಗಳು ಈ ಬಗ್ಗೆ ಗಮನ ನೀಡಬೇಕಾಗಿದೆ.

Read More »

ತುಂಬೆದಲೆಕ್ಕಿ: ಶ್ರೀ ಗುರುನಾರಾಯಣ ವೃತ್ತ ನಿರ್ಮಾಣ

ಆರಂಬೋಡಿ, ಎ. 15: ಇಲ್ಲಿಯ ಗುಂಡೂರಿ ಗ್ರಾಮದ ತುಂಬೆದಲೆಕ್ಕಿಯಲ್ಲಿ ಶ್ರೀ ಗುರುನಾರಾಯಣ ವೃತ್ತ ನಿರ್ಮಾಣ ಆಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.ಕಳೆದೆರಡು ವರ್ಷಗಳ ಹಿಂದೆ ಇಲ್ಲಿಯ ಕೆಲವು ಬಿಲ್ಲವ ಮುಖಂಡರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ತುಂಬೆದಲೆಕ್ಕಿಯಲ್ಲಿ ಶ್ರೀ ಗುರುನಾರಾಯಣಸ್ವಾಮಿ ವೃತ್ತ ನಿರ್ಮಿಸುವ ಬಗ್ಗೆ ಆರಂಬೋಡಿ ಗ್ರಾ.ಪಂ.ಗೆ ಲಿಖಿತ ಬೇಡಿಕೆ ಸಲ್ಲಿಸಿದ್ದರು. ಅನುದಾನದ ಕೊರತೆ ಮತ್ತು ವಿವಿಧ ಗೊಂದಲಗಳಿಂದ ವೃತ್ತ ನಿರ್ಮಾಣ ಕಾಮಗಾರಿ ಮುಂದುವರಿದಿರಲಿಲ್ಲ. ಬಳಿಕ ವಿರೋಧ ವ್ಯಕ್ತಪಡಿಸಿದವರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಸ್ಥಳೀಯಾಡಳಿತ ಕಾಮಗಾರಿ ನಡೆಸಿದ್ದು, ಶೇ. ೭೦ರಷ್ಟು ಕಾಮಗಾರಿ ಮುಗಿದಿದೆ.

Read More »

ಧರ್ಮಾಧಿಕಾರಿ ಡಾ| ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಹರೀಶ್ ಪೂಂಜ

ಬೆಳ್ತಂಗಡಿ, ಎ. 15: ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರನ್ನು ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರು ಇಂದು ಭೇಟಿಯಾಗಿ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ಮಾನ್ಯ ವಿಧಾನಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷರಾದ ಜಯಂತ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್, ಗಣೇಶ್ ಗೌಡ ನಾವೂರು ಹಾಗೂ ವಿವಿಧ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

Read More »

ವೇಣೂರು ಠಾಣೆ: ನಾಲ್ವರು ಹೊಸ ಪೊಲೀಸ್ ಸಿಬ್ಬಂದಿಗಳ ನಿಯೋಜನೆ

ವೇಣೂರು, ಎ. 15: ವೇಣೂರು ಪೊಲೀಸ್ ಠಾಣೆಗೆ ಹೊಸದಾಗಿ ನಾಲ್ವರು ಪೊಲೀಸ್ ಸಿಬ್ಬಂದಿಗಳು ನಿಯೋಜನೆಗೊಂಡಿದ್ದಾರೆ. ಪೊಲೀಸ್ ತರಬೇತಿ ಮುಗಿಸಿರುವ ನಿವೃತ್ತ ಯೋಧ ರೋಬಿನ್ ಜೋಸೆಫ್, ಸಂತೋಷ್ ಕುಮಾರ್, ಮೋಹನ್ ಹಾಗೂ ಮಹಿಳಾ ಕಾನ್ಸ್‌ಸ್ಟೇಬಲ್ ಕಾವೇರಿ ಅವರನ್ನು ವೇಣೂರು ಠಾಣೆಗೆ ನಿಯೋಜಿಸಿದ್ದು, ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹಲವು ಸಿಬ್ಬಂದಿ ವರ್ಗಾವಣೆಗೊಂಡಿದ್ದರಿಂದ ಇಲ್ಲಿ ಹುದ್ದೆಗಳು ಖಾಲಿಯಾಗಿದ್ದವು.

Read More »

ಕುಕ್ಕೇಡಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ

ಕುಕ್ಕೇಡಿ: ಸಂವಿದಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಕುಕ್ಕೇಡಿಯ ಅಂಬೇಡ್ಕರ್ ಭವನದ ಬಳಿಯಿರುವ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಯಂತಿ ಆಚರಣೆ ಮಾಡಲಾಯಿತು. ಶೇಖರ ಕುಕ್ಕೇಡಿ, ನಿತೀಶ್ ಎಚ್. ಮತ್ತಿತರರು ಜತೆಗಿದ್ದರು.

Read More »

ಗೋಳಿಯಂಗಡಿ-ಅಳದಂಗಡಿ ಸಂಪರ್ಕದ ಅರಣ್ಯ ಪ್ರದೇಶದ ರಸ್ತೆಯಲ್ಲಿ ರಾಶಿರಾಶಿ ತ್ಯಾಜ್ಯ!

ಕುಕ್ಕೇಡಿ, ಎ. 15: ಗೋಳಿಯಂಗಡಿಯಿಂದ ಅಳದಂಗಡಿ ರಸ್ತೆಯ ರಸ್ತೆಯಲ್ಲಿ ಅಲ್ಲಲ್ಲಿ ರಾಶಿರಾಶಿ ತ್ಯಾಜ್ಯ ವಸ್ತುಗಳನ್ನು ತಂದು ಸುರಿಯಲಾಗಿದ್ದು, ಪರಿಸರಕ್ಕೆ ಮಾರಕವಾಗಿದೆ.ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆಯ ಬಗ್ಗೆ ಪಂಚಾಯತ್‌ಗಳು ಆಗಾಗ ಜಾಗೃತಿ ಮೂಡಿಸುವ ಹೊರತಾಗಿಯೂ ನಾಂಜಕಾಡು ರಸ್ತೆಬದಿ ಪ್ಲಾಸ್ಟಿಕ್ ಹಾಗೂ ಇನ್ನಿತ್ತರ ತ್ಯಾಜ್ಯ ಪರಿಕರಗಳ ಕಸವನ್ನು ಸುರಿಯಲಾಗಿದ್ದು, ಈ ಪರಿಸರಕ್ಕೆ ಹಾನಿ ಮಾಡುವವರ ವಿರುದ್ಧ ಸಂಬಂಧಿತ ಇಲಾಖೆ ಹಾಗೂ ಪಂಚಾಯತು ಕ್ರಮ ಕೈಗೊಳ್ಳಬೇಕಿದೆ.

Read More »

ಎ.17: ಬಿಜೆಪಿ, ಕಾಂಗ್ರೆಸ್, ಎಸ್‌ಡಿಪಿಐ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಬೆಳ್ತಂಗಡಿ ಹೆದ್ದಾರಿ ಸಂಚಾರದಲ್ಲಿ ಅಡಚಣೆ ಸಾಧ್ಯತೆ, ಸಂಚಾರ ಬದಲಾವಣೆಗೆ ಡಿ.ಸಿ. ಆದೇಶ

ಬೆಳ್ತಂಗಡಿ, ಎ. 15 ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಎ. ೧೭ರಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಎಸ್.ಡಿ.ಪಿ.ಐ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಒಂದೇ ದಿನ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದು, ಸಾವಿರಾರು ಕಾರ್ಯಕರ್ತರು ಭಾಗಿಯಾಗುವ ಸಾಧ್ಯತೆಯಿದ್ದು, ಬೆಳ್ತಂಗಡಿ ನಗರ ಹೆದ್ದಾರಿ ಅಸ್ತವ್ಯಸ್ತ ಆಗುವ ಸಂಭವವನ್ನು ತಪ್ಪಿಸಲು ಸಂಚಾರದಲ್ಲಿ ಬದಲಾವಣೆ ತರುವಂತೆ ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.ತಮ್ಮ ತಮ್ಮ ಕಾರ್ಯಕರ್ತರ ಜೊತೆ ಒಂದೇ ದಿನ ನಾಮಪತ್ರ ಸಲ್ಲಿಸಲಿರುವುದರಿಂದ ಬೆಳ್ತಂಗಡಿ ಪೇಟೆಯಲ್ಲಿ ಅತ್ಯಧಿಕ ಜನ ಸಂದಣಿಯಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ.ಈ ಸಮಯದಲ್ಲಿ …

Read More »

You cannot copy content of this page.