ರಾಜ್ಯ

ವಿದ್ಯಾರ್ಥಿನಿಯ ಕೈ ಮುರಿಯುವಂತೆ ಥಳಿತ. ಮುಖ್ಯ ಶಿಕ್ಷಕಿ ಸಸ್ಪೆಂಡ್

ವಿದ್ಯಾರ್ಥಿನಿಯೊಬ್ಬಳನ್ನು ಕೈ ಮುರಿಯುವಂತೆ ಸರ್ಕಾರಿ ಶಾಲೆ ಶಿಕ್ಷಕಿ ಥಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಅಲ್ಲಿಕಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣೇಶ ಮೂರ್ತಿಗೆ ಪೂಜೆ ಮಾಡಿದ ವಿಚಾರಕ್ಕೆ ಮುಖ್ಯ ಶಿಕ್ಷಕಿ ಹೇಮಲತಾ ವಿದ್ಯಾರ್ಥಿನಿ ಭವ್ಯಶ್ರೀ ಎಂಬುವವಳನ್ನು ಹೊಡೆದಿದ್ದಾರೆ. ಶಿಕ್ಷಕಿಯ ಥಳಿತಕ್ಕೆ ವಿದ್ಯಾರ್ಥಿನಿಯ ಎಡಗೈ ಮುರಿದಿದ್ದು, ಪೋಷಕರು ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದರು. ಗ್ರಾಮಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯ ಯೋಗಕ್ಷೇಮ ವಿಚಾರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ, ತಪ್ಪಿತಸ್ಥರ ವಿರುದ್ಧ ಕ್ರಮ …

Read More »

ಡಿವೈಡರಿಗೆ ಕಾರು ಢಿಕ್ಕಿ; ಮೂವರು ದುರ್ಮರಣ

ಬೆಂಗಳೂರು; ಭೀಕರ ರಸ್ತೆ ಅಪಘಾತದಲ್ಲಿ ಐವರು ಇಂಜಿನಿಯರ್ ಗಳ ಪೈಕಿ ಮೂವರು ಇಂಜಿನಿಯರ್​ಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ಆಗಸ್ಟಿನ್ ನಿರೋಷ್, ದಾ ರೆಡ್ಡಿ, ವಿಘ್ನೇಶ್ ಸ್ಥಳದಲ್ಲೆ ಸಾವನ್ನಪ್ಪಿದ್ದು, ಮಿಥುನ್ ಯಾದವ್ ಹಾಗೂ ಶತೃಘ್ನ ಸ್ಥಿತಿ ಗಂಭೀರವಾಗಿದೆ. ಮೃತರೆಲ್ಲರು ಬೆಂಗಳೂರಿನ ಖಾಸಗಿ ಐಟಿ ಕಂಪನಿಯೊಂದರಲ್ಲಿ ಟೆಕ್ಕಿಗಳಾಗಿದ್ದರು. ರಜೆ ಇದ್ದಿದ್ದರಿಂದ ಒಂದು ದಿನದ ಪಿಕ್‌ನಿಕ್ ಗೆ ಎಂದು ಮೈಸೂರು ಟ್ರಿಪ್ ಹೋಗಿದ್ದರು. ಮೈಸೂರಿಗೆ ತೆರಳಿ ವಾಪಸ್ ಬರುತ್ತಿದ್ದಾಗ ಅಪಘಾತ ನಡೆದಿದೆ. ಕಾರು ಚಾಲಕ ಆಗಸ್ಟೀನ್ ನಿದ್ದೆ ಮಂಪರಿನಲ್ಲಿ ವೇಗವಾಗಿ ಕಾರು …

Read More »

ಗೃಹಲಕ್ಷ್ಮಿ ಹಣ ಜಮೆಯಾಗಿಲ್ವೇ? ಹಾಗಾದ್ರೆ ಈ ಕೆಲ್ಸ ಮೊದಲು ಮಾಡಿ…

ಮಹಿಳೆಯರಿಗೆ 2000 ರೂ ನೀಡುವ ‘ಗೃಹಲಕ್ಷ್ಮಿ’ ಯೋಜನೆ ಆರಂಭವಾಗಿದ್ದು, ಸರ್ಕಾರ ಯಜಮಾನಿಯರ ಖಾತೆಗೆ ಹಣ ಜಮಾ ಮಾಡುತ್ತಿದೆ. ಕೆಲವರ ಖಾತೆಗೆ ಹಣ ಜಮಾ ಪ್ರಕ್ರಿಯೆ ನಡೆಯುತ್ತಿದೆ.ಆದರೆ ಕೆಲವು ಮಹಿಳೆಯರ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ. ಕೆಲವರು ನಮಗೆ SMS ಬಂದಿಲ್ಲ ಹೀಗಾಗಿ ನಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿದೆಯೋ ಅಥವಾ ತಡೆಹಿಡಿಯಲಾಗಿದೆಯೋ ಅಥವಾ ರದ್ದಾಗಿದೆಯೋ ಎನ್ನುವ ಗೊಂದಲದಲ್ಲಿ ಇದ್ದಾರೆ. ಕೆಲವು ತಾಂತ್ರಿಕ ಕಾರಣಗಳಿಂದ ಗೃಹಲಕ್ಷ್ಮಿ ಹಣ ಬರದೇ ಇರಬಹುದು. ಹಾಗಾಗಿ ಕೆಳಗೆ ಸೂಚಿಸಲಾದ ಕೆಲಸಗಳನ್ನು ಮಾಡಿದಲ್ಲಿ ನಿಮ್ಮ ಖಾತೆಗೆ ಹಣ ಜಮೆಯಾಗುತ್ತದೆ. 1) ನೀವು …

Read More »

ಉದ್ಯಮಿಗೆ 5 ಕೋಟಿ ವಂಚನೆಗೆ ಮತ್ತೊಂದು ಟ್ವಿಸ್ಟ್: ಮತ್ತೋರ್ವ ಶ್ರೀ ಹೆಸರು ಚೈತ್ರಾ ಕುಂದಾಪುರ ರಿವೀಲ್

ಬೆಂಗಳೂರು: ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ವಂಚನೆ ಪ್ರಕರಣದಲ್ಲಿ ಲಾಕ್ ಆಗಿರುವಂತ ಚೈತ್ರಾ ಕುಂದಾಪುರ ಅವರು, ಉದ್ಯಮಿ ಗೋವಿಂದಬಾಬು ಪೂಜಾರಿ ವಿರುದ್ಧವೇ ಐಟಿ, ಇಡಿಗೆ ದೂರು ನೀಡಿರೋದಾಗಿ ತಿಳಿದು ಬಂದಿದೆ. ಈ ದೂರಿನಲ್ಲಿ ಮತ್ತೋರ್ವ ಶ್ರೀಗಳ ಹೆಸರನ್ನು ರಿವೀಲ್ ಮಾಡಿದ್ದಾರೆ.   ಈಗಾಗಲೇ ಅಭಿನವ ಹಾಲಶ್ರೀಗಳು ಸಿಗಲಿ, ಎಂಎಲ್‌ಎ ಟಿಕೆಟ್ ಡೀಲ್ ಹಿಂದಿನ ಕಾರಣ ಏನು ಅಂತ ಮತ್ತಷ್ಟು ಮಾಹಿತಿ ಸಿಗಲಿದೆ ಅಂತ ಚೈತ್ರಾ ಕುಂದಾಪುರ ಸಿಸಿಬಿ ಬಂಧನದ ಬಳಿಕ ಸ್ಪೋಟಕ ಬಾಂಬ್ ಸಿಡಿಸಿದ್ದರು. ಈ ಬೆನ್ನಲ್ಲೇ ಈಗ ಮತ್ತೊಂದು ಹೆಸರು ರಿವೀಲ್ …

Read More »

ಗಣೇಶ ಹಬ್ಬದ ದಿನವೇ ಸರ್ಜಾ ಕುಟುಂಬದಲ್ಲಿ ಸಂಭ್ರಮ; ಗಂಡು ಮಗುವಿಗೆ ತಂದೆಯಾದ ಧ್ರುವ ಸರ್ಜಾ

ಬೆಂಗಳೂರು : ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾ ಅವರು ಗಣೇಶ ಹಬ್ಬದ ದಿನವಾದ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಬಸವನಗುಡಿಯಲ್ಲಿರುವ ಖ್ಯಾತ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದ್ದು, ಮಗು ಮತ್ತು ನಟ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆಯಷ್ಟೇ ಅದ್ಧೂರಿಯಾಗಿ ಸೀಮಂತ ಕಾರ್ಯ ನಡೆದಿದ್ದು, ಇದೀಗ ನಟ ಧ್ರುವ ಸರ್ಜಾ ಅವರು ಪತ್ನಿ ಪ್ರೇರಣಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗು …

Read More »

ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಾಗಿದ್ದ ಗೂಂಡಾ ಕಾಯ್ದೆ ರದ್ದು : ಜೈಲಿನಿಂದ ಬಿಡುಗಡೆಯಾದ ಪುನೀತ್ ಕೆರೆಹಳ್ಳಿ

ಬೆಂಗಳೂರು: ರಾಷ್ಟ್ರ ರಕ್ಷಣಾ ಪಡೆ ಅಧ್ಯಕ್ಷ‌ ಪುನೀತ್‌ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಲಾಗಿದ್ದು, ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕೆರೆಹಳ್ಳಿಯ ಪುನೀತ್, ನಗರದ ಜೆ.ಪಿ.ನಗರ 7ನೇ ಹಂತದಲ್ಲಿ ವಾಸವಿದ್ದ. ಪುನೀತ್ ವಿರುದ್ಧ ರಾಜ್ಯದ 11 ಠಾಣೆಗಳಲ್ಲಿ‌ ಎಫ್‌ಐಆರ್ ದಾಖಲಾಗಿತ್ತು. ಕೆಲ ಪ್ರಕರಣಗಳಲ್ಲಿ ಶಿಕ್ಷೆಯೂ ಆಗಿತ್ತು. ಅಪರಾಧ ಪ್ರಕರಣಗಳಲ್ಲಿ‌ ಪದೇ ಪದೇ ಭಾಗಿಯಾಗುತ್ತಿರುವುದರಿಂದ ಪುನೀತ್‌ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಪುನೀತ್ ಬಂಧಿಸುವಂತೆ ಕಮಿಷನರ್ ಆದೇಶ ಹೊರಡಿಸಿದ್ದರು. ನಂತರ, ಪುನೀತ್ ಕೆರೆಹಳ್ಳಿಯನ್ನು ಬಂಧಿಸಿ ಪರಪ್ಪನ …

Read More »

ಚೈತ್ರಾ ಕುಂದಾಪುರ ಕಾರು ಪತ್ತೆ ಹಚ್ಚಿದ CCB ಪೊಲೀಸರು

ಬಾಗಲಕೋಟೆ: ಇಲ್ಲಿನ ಮುಧೋಳದಲ್ಲಿ ಉದ್ಯಮಿಗೆ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವಂತ ಚೈತ್ರಾ ಕುಂದಾಪುರ ಅವರಿಗೆ ಸೇರಿದ್ದಂತ ಕಾರನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಲ್ಲದೇ ಚೈತ್ರಾ ಕುಂದಾಪುರ ಅವರ ಕಾರನ್ನು ಜಪ್ತಿ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಕಿರಣ್ ಎಂಬುವರಿಗೆ ಸೇರಿದ್ದಂತ ಮನೆಯಲ್ಲಿ ಚೈತ್ರಾ ಕುಂದಾಪುರ ಅವರು ಕಾರು ನಿಲ್ಲಿಸಿದ್ದರು. ಸೆಪ್ಟೆಂಬರ್.9ರಂದು ಮುಧೋಳಕ್ಕೆ ಕಾರ್ಯಕ್ರಮಕ್ಕೆ ಬಂದಂತ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತ ಕಿರಣ್ ಅವರ ಮನೆಯಲ್ಲಿ ಚೈತ್ರ ಕುಂದಾಪುರ ತಮ್ಮ ಕೆಎ-20 ಎಂಇ-7253 ನಂಬರ್ ಕಾರನ್ನು ಅಲ್ಲಿಯೇ ನಿಲ್ಲಿಸಿದ್ದರು. ಮುಧೋಳದಲ್ಲಿ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದಂತ …

Read More »

5 ಕೋಟಿ ರೂಪಾಯಿ ಡೀಲ್ ಪ್ರಕರಣಕ್ಕೂ ಮಠಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ : ಹಾಲಮಠದ ಶ್ರೀ

ವಿಜಯನಗರ : ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಎಂ ಎಲ್ ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಸುಮಾರು 5 ಕೋಟಿ ರೂಪಾಯಿ ವಂಚನೆ ಪ್ರಕರಣದ A3 ಆರೋಪಿಯಾಗಿರುವ ಅಭಿನವ ಹಾಲಶ್ರೀ ವಿರುದ್ಧ ಆರೋಪಕ್ಕೆ ಸಂಬಂಧಸಿದಂತೆ ಡೀಲ್ ಪ್ರಕರಣಕ್ಕೂ ಮಠಕ್ಕೂ ಯಾವುದೇ ರೀತಿಯಾದಂತಹ ಸಂಬಂಧವಿಲ್ಲ ಎಂದು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ಹಾಲಸ್ವಾಮಿ ಮಠದ ಶ್ರೀಗಳು ಹೇಳಿದ್ದಾರೆ.   ಸದ್ಗುರು ಹಾಲಶ್ರೀ ಯೋಗಿ ಸ್ವಾಮೀಜಿ ಹಾಗೂ ಸದ್ಗುರು ಸಿದ್ದೇಶ್ವರ ಶ್ರೀ ಹೇಳಿಕೆ ನೀಡಿದ್ದು, ಕೆಲ ಕಾರ್ಯಕ್ರಮಕ್ಕೆ ಹೋಗಬಾರದೆಂದು ಹಾಲಶ್ರೀ ಸ್ವಾಮೀಜಿಗಳಿಗೆ ನಾವು ಹೇಳಿದ್ದೆವು. …

Read More »

ರಾಜ್ಯದ ಸರ್ಕಾರಿ ಕಚೇರಿ, ಶಾಲಾ-ಕಾಲೇಜು, ವಿವಿಗಳಲ್ಲಿನ ‘RSS ಶಾಖೆ’ ಬಂದ್

 ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಕಚೇರಿ, ಪೊಲೀಸ್ ಠಾಣೆ, ಶಾಲಾ-ಕಾಲೇಜು, ವಿವಿಗಳನ್ನು ಆರ್ ಎಸ್ ಎಸ್ ಶಾಖೆಗಳನ್ನಾಗಿ ಮಾಡಲಾಗಿತ್ತು. ಹೀಗೆ ತೆರೆದಿದ್ದ ಆರ್ ಎಸ್ ಎಸ್ ಎಲ್ಲಾ ಶಾಖೆಗಳನ್ನು ಒಂದೊಂದಾಗಿ ಬಂದ್ ಮಾಡಲಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.   ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಆರ್ ಎಸ್ ಎಸ್ ಶಾಖೆಗಳನ್ನು ತೆರೆದು ನಿಯಮ ಬಾಹಿರ ಕೆಲಸ ಮಾಡಲು ಬಳಸಿಕೊಳ್ಳಲಾಗುತ್ತಿತ್ತು. ನಾವು ಅಧಿಕಾರಕ್ಕೆ ಬಂದ ಬಳಿಕ ಅಂತಹ ಕೇಂದ್ರಗಳನ್ನು ಒಂದೊಂದಾಗಿ ಬಂದ್ ಮಾಡುತ್ತಿದ್ದೇವೆ ಎಂದರು. ರಾಜ್ಯದಲ್ಲಿ ಸರ್ಕಾರಿ …

Read More »

ಚೈತ್ರಾ ಕುಂದಾಪುರ ಮಾದರಿಯಲ್ಲೇ ಮತ್ತೊಂದು ಹಗರಣ – ಅಮಿತ್ ಶಾ ಹೆಸರು ಹೇಳಿ ಹಣ ಲೂಟಿ

ಕೊಪ್ಪಳ : ಉದ್ಯಮಿ ಗೋವಿಂದ ಪೂಜಾರಿ ಎಂಎಲ್​ಎ ಟಿಕೆಟ್​ ಗಾಗಿ ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಇದೇ ಮಾದರಿ ವಂಚನೆ ಪ್ರಕರಣ ಕೊಪ್ಪಳ ಜಿಲ್ಲೆಯಲ್ಲೂ ಬೆಳಕಿಗೆ ಬಂದಿದೆ. ಇದರಲ್ಲೂ ಉದ್ಯಮಿ ಲಕ್ಷ ಲಕ್ಷ ಹಣ ಕಳಕೊಂಡಿದ್ದಾನೆ. ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗಾಯತ್ರಿ ತಿಮ್ಮಾರೆಡ್ಡಿ ಅವರಿಗೆ ಟಿಕೆಟ್​ ಕೊಡಿಸುವಲ್ಲಿ ಅವರ ಪತಿ ಜಿ‌.ತಿಮ್ಮಾರೆಡ್ಡಿ ಗಿಲ್ಲೆಸೂಗುರ್ ಭಾರಿ ಪ್ರಯತ್ನ ಮಾಡಿದ್ದರು. ಈ ವೇಳೆ ಟಿಕೆಟ್​ ಕೊಡಿಸುತ್ತವೆಂದು ಮೂವರು ಚೈತ್ರಾ ಕುಂದಾಪುರ ಗ್ಯಾಂಗ್ ರೀತಿಯಲ್ಲೆ ವಂಚನೆ …

Read More »

You cannot copy content of this page.