ರಾಜ್ಯ

ಫಾದರ್ಸ್ ಡೇ ದಿನವೇ ತನ್ನ ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಂದೆ..!

ಕಲಬುರಗಿ : ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ, ಮೃತರನ್ನು ಚಿಂಚೋಳಿಯ ಕುಂಚಾವರಂನ ಹಣಮಂತ (36), ಅಕ್ಷತಾ (6) ಹಾಗೂ ಓಕಾಂ (9) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಹಣಮಂತ ಪತ್ನಿ ಹಾಗೂ ಮಕ್ಕಳೊಂದಿಗೆ ಹೈದ್ರಾಬಾದ್‍ನಲ್ಲಿ ವಾಸಿಸುತ್ತಿದ್ದ. ಒಂದು ವಾರದ ಹಿಂದಷ್ಟೆ ಪತಿ ಹಾಗೂ ಪತ್ನಿ ನಡುವೆ ಗಲಾಟೆ ನಡೆದು ಕುಂಚಾವರಂಗೆ ಬಂದಿದ್ದರು. ಅಲ್ಲದೇ ಈ ವಿಚಾರವಾಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು …

Read More »

ಕಾರ್ಕಳ : ಆಗುಂಬೆ ಘಾಟಿಯಲ್ಲಿ ಬಸ್ ಬೈಕ್ ಮಧ್ಯೆ ಭೀಕರ ಅಪಘಾತ – ಯುವಕ ಸ್ಥಳದಲ್ಲೇ ಸಾವು, ಯುವತಿ ಗಂಭೀರ

ಹೆಬ್ರಿ : ಆಗುಂಬೆ ಘಾಟಿಯಲ್ಲಿ ಬಸ್ ಹಾಗೂ ಬೈಕ್‌ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಬ್ರಹ್ಮಾವರ ತಾಲೂಕಿನ ಶಶಾಂಕ್(21) ಮೃತಪಟ್ಟ ಬೈಕ್ ಸವಾರ. ಶಶಾಂಕ್ ಆತನ ಸಂಬಂಧಿಕಳಾದ ಯುವತಿಯ ಜತೆ ಬೈಕ್‌ನಲ್ಲಿ ಆಗುಂಬೆ ಕಡೆಯಿಂದ ಹೆಬ್ರಿ ಮೂಲಕ ಬ್ರಹ್ಮಾವರಕ್ಕೆ ತೆರಳುತ್ತಿದ್ದರು. ಬೈಕ್ ಆಗುಂಬೆ ಘಾಟಿಯ 2 ನೇ ತಿರುವಿನಲ್ಲಿ ವೇಗವಾಗಿ ಬರುತ್ತಿದ್ದಾಗ ಏಕಾಏಕಿ ಸ್ಕಿಡ್ಡಾದ ಪರಿಣಾಮ ಎದುರಿನಿಂದ ಬರುತ್ತಿದ್ದ ಖಾಸಗಿ ಮಿನಿ ಬಸ್‌ಗೆ ಡಿಕ್ಕಿಯಾಗಿದೆ.

Read More »

ಡ್ರೈವರ್ ಸೀಟ್ ಬಳಿಯಿಂದ ಬಸ್ ಹತ್ತಿದ ಗೃಹಲಕ್ಷ್ಮೀ: ಬಸ್ ಫುಲ್ ರಷ್

ಚಿಕ್ಕಮಗಳೂರು: ಮಹಿಳೆಯರಿಗೆ ಬಸ್ ಪ್ರಯಾಣ ಫ್ರೀ ಹಿನ್ನೆಲೆಯಲ್ಲಿ ಬಸ್ಸಿನಲ್ಲಿ ಮಹಿಳೆಯರ ಓಡಾಟ ಹೆಚ್ಚಳವಾಗಿದೆ.  ಶೃಂಗೇರಿ ದೇವಸ್ಥಾನಕ್ಕೆ ಬರುವ ಮಹಿಳೆಯರ ಸಂಖ್ಯೆಯೂ ಹೆಚ್ಚಳವಾಗಿದೆ. ಇದೀಗ ಬಸ್ಸಿನಲ್ಲಿ  ಫುಲ್ ರಷ್ ಆದ ಪರಿಣಾಮ ಮಹಿಳೆಯೊಬ್ಬರು ಡ್ರೈವರ್ ಸೀಟ್ ಬಳಿಯಿಂದ ಬಸ್ ಹತ್ತಿದ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಶೃಂಗೇರಿ ಬಸ್ ನಿಲ್ದಾಣದಲ್ಲಿ ಗೃಹ ಲಕ್ಷ್ಮಿಯೊಬ್ಬರು ತನ್ನ ಮಕ್ಕಳನ್ನು ಡ್ರೈವರ್ ಸೀಟ್ ಬಳಿಯಿಂದ ಹತ್ತಿಸಿ, ತಾನೂ ಅಲ್ಲಿಂದಲೇ ಬಸ್ ಹತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಮಹಿಳೆಯರೇ ತುಂಬಿದ್ದು, ಬಸ್ ನಿಲ್ದಾಣಕ್ಕೆ ಬಂದು ಕೆಲವೇ …

Read More »

ಉಳ್ಳಾಲ: ಮೆಹೆಂದಿ ಶಾಸ್ತ್ರದಂದು ನಾಪತ್ತೆಯಾಗಿದ್ದ ವರ- ಮನೆಗೆ ವಾಪಾಸ್!

ಉಳ್ಳಾಲ: ಮದುವೆ ಮೆಹೆಂದಿಯಂದು ನಾಪತ್ತೆಯಾಗಿದ್ದ ವರ ಮನೆಗೆ ವಾಪಸ್ಸಾಗಿದ್ದಾನೆ. ನಾಪತ್ತೆಯಾದ ಹಲವು ದಿನಗಳ ನಂತರ ಬಳ್ಳಾರಿಯಲ್ಲಿ ಇರುವುದಾಗಿ ಸಹೋದರಿಗೆ ಕರೆ ಮಾಡಿ ತಿಳಿಸಿದ ನಂತರ ಜೂ.16 ರಂದು ಕೊಣಾಜೆ ಠಾಣೆಗೆ ಬಂದು ಮನೆಗೆ ವಾಪಸ್ಸಾಗಿದ್ದಾರೆ. ವರ್ಕಾಡಿ ದೇವಂದಪಡ್ಪುವಿನ ಉದ್ಯಮಿ‌ ಐತಪ್ಪ ಶೆಟ್ಟಿ ಎಂಬವರ ಪುತ್ರ ಕಿಶನ್ ಶೆಟ್ಟಿ ಮೇ 31ರಂದು ಮೆಹಂದಿ ಶಾಸ್ತ್ರಕ್ಕೆ ಹಣ್ಣು ತರಲು ತೆರಳಿದ್ದವರು ನಾಪತ್ತೆಯಾಗಿದ್ದರು. ಇದರಿಂದಾಗಿ ನಿಗದಿಯಾಗಿದ್ದ ಮದುವೆಯೂ ಮುರಿದುಬಿದ್ದಿತ್ತು. ಇನ್ನು ಬಳ್ಳಾರಿ, ಬೆಂಗಳೂರು ಬಳಿ ತಂಗಿದ್ದ ಕಿಶನ್ ವಾಪಸ್ಸಾಗಿದ್ದಾರೆ. ಕಿಶನ್ ಶೆಟ್ಟಿ ಕೇರಳದ ಕುಂಜತ್ತೂರು ಬಳಿಯ ಅನ್ಯ ಜಾತಿಯ ಯುವತಿಯನ್ನು …

Read More »

ಬಲವಂತವಾಗಿ ಟೆರೇಸ್​ಗೆ ಕರೆದೊಯ್ದ ಎಂದ ಬಾಲಕಿ; ತನ್ನದಲ್ಲದ ತಪ್ಪಿಗೆ ಬಲಿಪಶುವಾದ ಡೆಲಿವರಿ ಬಾಯ್​

ಬೆಂಗಳೂರು: ಡೆಲಿವರಿ ಬಾಯ್​ ತನ್ನನ್ನು ಬಲವಂತವಾಗಿ ಅಪಾರ್ಟ್​ಮೆಂಟ್​ನ ಟೆರೇಸ್​ಗೆ ಕರೆದೊಯ್ದ ಎಂದು 8 ವರ್ಷದ ಬಾಲಕಿ ದೂರಿದ ಬೆನ್ನಲ್ಲೇ ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್​​ ಸಿಟಿಯಲ್ಲಿ ನಡೆದಿದೆ. ಘಟನೆಯೂ ಸೋಮವಾರ ಸಂಜೆ ನಡೆದಿದ್ದು ಕಾಣೆಯಾದ ತಮ್ಮ ಮಗಳನ್ನು ಹುಡುಕುತ್ತಿದ್ದ ಪೋಷಕರಿಗೆ ಆಕೆ ಟೆರೇಸ್​ನಲ್ಲಿರುವುದು ಕಂಡು ಬಂದಿದೆ. ಬಳಿಕ ಪ್ರಶ್ನಿಸಿದಾಗ ಡೆಲಿವರಿ ಬಾಯ್​ ಆಕೆಯನ್ನು ಬಲವಂತವಾಗಿ ಕರೆದುಕೊಂಡು ಬಂದಿದಾಗಿ ದೂರಿದ್ದಳು. ಆತನಿಂದ ತಪ್ಪಿಸಿಕೊಳ್ಳಲು ಕೈ ಕಚ್ಚಿದ್ದಾಗಿ ಬಾಲಕಿ ಆಕೆಯ ಪೋಷಕರ ಬಳಿ ಹೇಳಿದ್ದಳು. ಮನಸ್ಸೋಇಚ್ಛೆ ಹಲ್ಲೆ ತಮ್ಮ ಮಗಳ ಮಾತನ್ನು ನಂಬಿದ ಪೋಷಕರು …

Read More »

ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಕಿರುತೆರೆ ನಟನಿಗೆ ವಂಚನೆ- ನಟಿ ಅರೆಸ್ಟ್‌

ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ಕಿರುತೆರೆ ನಟನಿಗೆ ವಂಚಿಸಿದ್ದ ನಟಿ ಉಷಾ ರವಿಶಂಕರ್ ಅವರನ್ನು ಶಿವಮೊಗ್ಗದ ವಿನೋಬನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ. ನಟಿ ಉಷಾ ರವಿಶಂಕರ್ ಕಿರುತೆರೆ ನಟ ಶರವಣನ್ ಅವರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದರು. ಈ ಸಂಬಂಧ ನಟಿ ವಿರುದ್ಧ ಕೋರ್ಟ್ ನಲ್ಲಿ ಶರವಣನ್ ಖಾಸಗಿ ದೂರು ದಾಖಲಿಸಿದ್ದರು. ಈ ಸಂಬಂಧ ನಟಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ವಿಚಾರಣೆ ವೇಳೆ ಕೋರ್ಟ್ ನಟಿ ಗೈರಾಗಿದ್ದರಿಂದ ಆಕೆಯ ವಿರುದ್ಧ ವಾರೆಂಟ್ ಹೊರಡಿಸಲಾಗಿತ್ತು. ಕೋರ್ಟ್ ಆದೇಶದಂತೆ ನಟಿಯನ್ನು ಬಂಧಿಸಿರುವ …

Read More »

BREAKING NEWS: ರಾಜ್ಯದ ಪ್ರತಿ ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳ ದೂರವಾಣಿ ಸಂಖ್ಯೆ ಬೋರ್ಡ್ ಕಡ್ಡಾಯ

ಬೆಂಗಳೂರು: ಪೊಲೀಸ್ ಠಾಣೆಗೆ ಬರುವಂತ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಠಾಣೆಗಳಲ್ಲಿ ದಾಖಲಾಗುವಂತ ದೂರುಗಳ ಸಂಬಂಧ ಯಾರನ್ನು ಸಂಪರ್ಕಿಸಬೇಕು ಎನ್ನುವ ಬಗ್ಗೆ ಬೋರ್ಡ್ ಗಳಲ್ಲಿ ಸಂಪರ್ಕ ಸಂಖ್ಯೆಯನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಡಿಜಿ ಮತ್ತು ಐಜಿಪಿ ಆದೇಶಿಸಿದ್ದಾರೆ. ಈ ಕುರಿತಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ಅವರು ಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳನ್ನು ಒಳಗೊಂಡ ನಾಮಫಲಕ ಅಳವಡಿಸುವುದನ್ನು ಕಡ್ಡಾಯಗೊಳಿಸಿದ್ದಾರೆ. ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಸ್ಪಿ, …

Read More »

ಸಿಎಂ ಸಿದ್ದು ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ 5 ಮಹತ್ವದ ನಿರ್ಧಾರ ; ಇಲ್ಲಿದೆ ಡಿಟೈಲ್ಸ್

ಬೆಂಗಳೂರು : ಇಂದು ನಡೆದ ರಾಜ್ಯ ಸಚಿವ ಸಂಪುಟದಲ್ಲಿ ಹಲವು ಮಹತ್ವದ ನಿರ್ಧಾರಗಳನ್ನ ತೆಗೆದುಕೊಳ್ಳಲಾಗಿದ್ದು, ಬಿಜೆಪಿ ಸರ್ಕಾರದ ಬಹುತೇಕ ಕಾಯ್ದೆಗಳಿಗೆ ಕೊಕ್ ನೀಡಲಾಗಿದೆ. ಅದ್ರಂತೆ, ಹಿಂದಿನ ಬಿಜೆಪಿ ಸರ್ಕಾರ ಪರಿಚಯಿಸಿದ ಮತಾಂತರ ವಿರೋಧಿ ಕಾನೂನನ್ನ ರದ್ದುಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.   ಇನ್ನು ಶಾಲಾ ಪಠ್ಯ ಪರಿಷ್ಕರಣೆಯ ಅಂತಿಮ ವರದಿ ಸಿದ್ಧವಾಗಿದ್ದು, ಆರ್‌ಎಸ್‌ಎಸ್ ಸಂಸ್ಥಾಪಕ ಕೆ.ಬಿ.ಹೆಡ್ಗೆವಾರ್ ಮತ್ತು ಇತರರ ಶಾಲಾ ಪಠ್ಯಪುಸ್ತಕ ಪಾಠಗಳನ್ನ ತೆಗೆದುಹಾಕಲು ಕ್ಯಾಬಿನೆಟ್ ನಿರ್ಧರಿಸಿದೆ. ಇನ್ನು ಇನ್ನೊಂದು ಮಹತ್ವದ ನಿರ್ಧಾರ ಎನ್ನುವಂತೆ, ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು …

Read More »

BREAKING NEWS : ಕರ್ನಾಟಕದಲ್ಲಿ ‘ಮತಾಂತರ ನಿಷೇಧ ಕಾಯ್ದೆ’ ರದ್ದು

ಬೆಂಗಳೂರು : ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಹಿಂದಿನ ಬಿಜೆಪಿ ಸರ್ಕಾರ ಪರಿಚಯಿಸಿದ ಮತಾಂತರ ವಿರೋಧಿ ಕಾನೂನನ್ನ ರದ್ದುಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಇನ್ನು ಪಠ್ಯ ಪರಿಷ್ಕರಣೆಯ ಅಂತಿಮ ವರದಿ ಸಿದ್ಧವಾಗಿದ್ದು, ಆರ್‌ಎಸ್‌ಎಸ್ ಸಂಸ್ಥಾಪಕ ಕೆ.ಬಿ.ಹೆಡ್ಗೆವಾರ್ ಮತ್ತು ಇತರರ ಶಾಲಾ ಪಠ್ಯಪುಸ್ತಕ ಪಾಠಗಳನ್ನ ತೆಗೆದುಹಾಕಲು ಕ್ಯಾಬಿನೆಟ್ ನಿರ್ಧರಿಸಿದೆ.   ಇನ್ನು ಇನ್ನೊಂದು ಮಹತ್ವದ ನಿರ್ಧಾರ ೆನ್ನುವಂತೆ, ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವುದನ್ನ ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದೆ.

Read More »

ಗಂಡ ಹೆಂಡತಿ ಜಗಳ; ಪುಟ್ಟ ಕಂದಮ್ಮನ ಬಲಿ ತೆಗೆದ ತಂದೆ

ಕೋಲಾರ: ತಂದೆಯೊಬ್ಬ ತನ್ನ 2 ವರ್ಷದ ಹೆಣ್ಣು ಮಗುವನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಮುಳಬಾಗಲು ತಾಲ್ಲೂಕಿನ ಕೆ.ಬಿ.ಕೊತ್ತೂರು ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಆರೋಪಿಯನ್ನು ಕೊತ್ತೂರು ಗ್ರಾಮದ  32 ವರ್ಷದ ಗಂಗಾಧರ್ ಎಂದು ಗುರತಿಸಲಾಗಿದೆ. ಕ್ಷುಲ್ಲುಕ ಕಾರಣಕ್ಕೆ ನಡೆಯುತ್ತಿದ್ದ ಪತಿ ಗಂಗಾಧರ್  ಹಾಗೂ ಪತ್ನಿ ರೇಣುಕಾ ನಡುವಿನ ಗಲಾಟೆಯಲ್ಲಿ 2 ವರ್ಷದ ರಮ್ಯ ಎಂಬ ಪುಟ್ಟ ಕಂದಮ್ಮ ಜೀವಕಳೆದುಕೊಂಡಿದೆ ಎನ್ನಲಾಗಿದೆ.ಈ ಬಗ್ಗೆ ರೇಣುಕಾ ನಂಗಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕೋಲಾರ ಎಸ್ಪಿ ನಾರಾಯಣ ಭೇಟಿ ಪರಿಶೀಲನೆ ನಡೆಸಿದ್ದಾರೆ.

Read More »

You cannot copy content of this page.