ರಾಜಕೀಯ

ನಾಳೆ ಬೆಳಗ್ಗೆ ಎಚ್.ಡಿ. ಕುಮಾರಸ್ವಾಮಿ ಧರ್ಮಸ್ಥಳಕ್ಕೆ

ಬೆಳ್ತಂಗಡಿ : ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಜೆಡಿಎಸ್ ಪಕ್ಷದ ರಾಜ್ಯಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನಾಳೆ ಬೆಳಿಗ್ಗೆ6 ಗಂಟೆಗೆ ಧರ್ಮಸ್ಥಳ ಭೇಟಿ ನೀಡಲಿದ್ದಾರೆ.

Read More »

ಕೊಕ್ರಾಡಿ ಶಕ್ತಿ ಕೇಂದ್ರ: ಬಿಜೆಪಿ ಪೂರ್ವಭಾವಿ ಸಭೆ

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹರೀಶ್ ಪೂಂಜ ಅವರುಕೊಕ್ರಾಡಿ ಶಕ್ತಿ ಕೇಂದ್ರದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಂಡರು.ಈ ಸಭೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬೆಳ್ತಂಗಡಿ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್, ಗಣೇಶ್ ನಾವೂರು, ಉಪಾಧ್ಯಕ್ಷರಾದ ಸೀತಾರಾಮ್ ಬೆಳಾಲು, ನಟರಾವಿ ಮಹಾಶಕ್ತಿ ಕೇಂದ್ರ, ಅಧ್ಯಕ್ಷ ಮೋಹನ್ ಅಂಡಿಂಜೆ, ಅಂಡಿಂಜೆ ಗ್ರಾಮ‌ಪಂಚಾಯತ್ ಅಧ್ಯಕ್ಷೆ ಜಯಂತಿ ಇದ್ದರು.

Read More »

ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್‌ರವರ ಚುನಾವಣಾ ಕಚೇರಿ ಉದ್ಘಾಟನೆ

ಬೆಳ್ತಂಗಡಿ, ಎ. 15: ಬೆಳ್ತಂಗಡಿ ಶ್ರೀ ಗುರುಗುರುನಾರಾಯಣ ವಾಣಿಜ್ಯ ಸಂಕೀರ್ಣದ ಮುಖ್ಯ ದ್ವಾರದ ಬಳಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಿತ್ ಶಿವರಾಮ್ ಅವರ ಚುನಾವಣಾ ಕಚೇರಿಯ ಉದ್ಘಾಟನೆಯು ಎ. 15ರಂದು ನಡೆಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಶಾಸಕರಾದ ಕೆ. ಹರೀಶ್ ಕುಮಾರ್, ಮಾಜಿ ಶಾಸಕರಾದ ಕೆ. ವಸಂತ ಬಂಗೇರ, ಮಾಜಿ ಸಚಿವರಾದ ಗಂಗಾಧರ ಗೌಡ, ಬ್ಲಾಕ್ ಕಾಂಗ್ರೆಸ್ (ನಗರ) ಅಧ್ಯಕ್ಷ ಶೈಲೇಶ್ ಕುಮಾರ್, ಗ್ರಾಮೀಣ ಅಧ್ಯಕ್ಷ ರಂಜನ್ ಜಿ. ಗೌಡ , ಪ್ರಚಾರ ಸಮಿತಿಯ ಸಂಯೋಜಕ ಭಗೀರಥ ಜಿ., …

Read More »

ಇಂದು ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್‌ರವರ ಚುನಾವಣಾ ಕಚೇರಿ ಉದ್ಘಾಟನೆ

ಬೆಳ್ತಂಗಡಿ, ಎ. 15: ಬೆಳ್ತಂಗಡಿ ಶ್ರೀ ಗುರುಗುರುನಾರಾಯಣ ವಾಣಿಜ್ಯ ಸಂಕೀರ್ಣದ ಮುಖ್ಯ ದ್ವಾರದ ಬಳಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಿತ್ ಶಿವರಾಮ್ ಅವರ ಚುನಾವಣಾ ಕಚೇರಿಯ ಉದ್ಘಾಟನೆಯು ಎ. 15ರಂದು ಬೆಳಿಗ್ಗೆ 11-15ಕ್ಕೆ ನಡೆಯಲಿದೆ.ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಶಾಸಕರಾದ ಕೆ. ಹರೀಶ್ ಕುಮಾರ್, ಮಾಜಿ ಶಾಸಕರಾದ ಕೆ. ವಸಂತ ಬಂಗೇರ, ಮಾಜಿ ಸಚಿವರಾದ ಗಂಗಾಧರ ಗೌಡ, ಮತ್ತು ಪಕ್ಷದ ನಾಯಕರುಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ (ನಗರ) ಅಧ್ಯಕ್ಷ ಶೈಲೇಶ್ ಕುಮಾರ್, ಗ್ರಾಮೀಣ ಅಧ್ಯಕ್ಷ ರಂಜನ್ …

Read More »

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕಣಕ್ಕಿಳಿದ ಹರೀಶ್ ಪೂಂಜ-ರಕ್ಷಿತ್ ಶಿವರಾಂಗೆ ನೇರಸ್ಪರ್ಧೆ

ಬಹುತೇಕ ಒಂದೇ ವಯಸ್ಸಿನವರು, ಇಬ್ಬರೂ ಹೈಕೋರ್ಟ್ ವಕೀಲರು!ಕಳೆದ ಮೂರು ಚುನಾವಣೆಯಲ್ಲಿ ಎರಡು ಬಾರಿ ಕಾಂಗ್ರೆಸ್, ಕಳೆದ ಬಾರಿ ಬಿಜೆಪಿ ಜಯಬೇರಿ ಬಾರಿಸಿದೆ. ಕಾಂಗ್ರೆಸ್‌ನಿಂದ ರಕ್ಷಿತ್ ಶಿವರಾಂಗೆ ಬಿಜೆಪಿಯಿಂದ ಮತ್ತೆ ಹರೀಶ್ ಪೂಂಜಾರಿಗೆ ಸೀಟು ಘೋಷಣೆಯಾಗಿದ್ದು, ಇಬ್ಬರೂ ಪ್ರಚಾರದ ಫೀಲ್ಡ್‌ಗೆ ಇಳಿದಿದ್ದಾರೆ.ಹರೀಶ್ ಪೂಂಜಾ ಮತ್ತು ರಕ್ಷಿತ್ ಶಿವರಾಂ ಬಹುತೇಕ ಹೆಚ್ಚುಕಮ್ಮಿ ಒಂದೇ ವಯಸ್ಸಿನವರು ಮತ್ತು ಇಬ್ಬರೂ ಹೈಕೋರ್ಟ್ ವಕೀಲರು. ಇಬ್ಬರೂ ಕೊರೊನಾ ವೇಳೆ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡವರು. ಈಗಾಗಿ ಮತದಾರರ ಒಲವು ಯಾವಕಡೆ ಇದೆ ಎನ್ನುವುದನ್ನು ಈಗಲೇ ನಿರ್ಧರಿಸುವುದು ಕಷ್ಟ.ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಬೆಳ್ತಂಗಡಿ …

Read More »

ಎದುರಾಳಿ ಯಾರೇ ಇದ್ದರೂ ಚುನಾವಣೆ ಎದುರಿಸೋದು ಗೊತ್ತಿದೆ ಧರ್ಮಸ್ಥಳದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ

ಧರ್ಮಸ್ಥಳ: ಎದುರಾಳಿ ಯಾರೇ ಇದ್ದರೂ ಸರಿ ಚುನಾವಣೆ ಎದುರಿಸೋದು ನನಗೆ ಚೆನ್ನಾಗಿ ಗೊತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಎ. 12ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ ಅವರು ದೇವರ ದರ್ಶನ ಪಡೆದು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.ಧರ್ಮಸ್ಥಳ, ಕುಕ್ಕೆ, ಸೋಮೇಶ್ವರ ದೇವಸ್ಥಾನಗಳಿಗೆ ಅವಾಗಾವಾಗ ಭೇಟಿ ನೀಡುತ್ತಿರುತ್ತೇನೆ. ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಬಂದು ಮಂಜುನಾಥನ ದರ್ಶನ ಪಡೆದಿದ್ದೇನೆ. ಸಮಸ್ತ ಕನ್ನಡ ನಾಡಿನ ಸುಭೀಕ್ಷೆಗಾಗಿ ಪ್ರಾರ್ಥನೆ ಮಾಡಿದ್ದೇನೆ. ಪಕ್ಷದಲ್ಲಿ ಅಸಮಾಧಾನಗೊಂಡಿರುವ ಎಲ್ಲರತ್ರನೂ ಸಂಪರ್ಕದಲ್ಲಿದ್ದೇನೆ. ಪಕ್ಷ ಅವರನ್ನ ಗೌರವದಿಂದ ಕಂಡು ಶಾಸಕರಾಗಿ ಮಾಡಿದೆ. ಅವರ …

Read More »

ನಿಟ್ಟಡೆ: ಬಿಜೆಪಿ ಚುನಾವಣೆ ಪ್ರಚಾರದ ಪೂರ್ವಭಾವಿ ಸಭೆ

ಕುಕ್ಕೇಡಿ, ಎ. 12: ಸಾಮಾನ್ಯ ವ್ಯಕ್ತಿಯೂ ಓರ್ವ ಶಾಸಕನ ಬಳಿಗೆ ತೆರಳಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಮತ್ತು ಜನಪ್ರತಿನಿಧಿಗಳಲ್ಲಿ ಜನರ ಬಗೆಗಿನ ಅಂತರವನ್ನು ದೂರವಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಳೆದೈದು ವರ್ಷದಲ್ಲಿ ಕೆಲಸ ನಿರ್ವಹಿಸಿದ್ದೇನೆ ಎಂದು ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಹೇಳಿದರು.ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಚುನಾವಣೆ ಪೂರ್ವಭಾವಿಯಾಗಿ ನಿಟ್ಟಡೆ ಬಿಜೆಪಿ ಶಕ್ತಿ ಕೇಂದ್ರದಲ್ಲಿ ಅನಿಲ್ ಹೆಗ್ಡೆಯವರ ಮನೆಯಲ್ಲಿ ನಡೆದ ಚುನಾವಣೆ ಪ್ರಚಾರದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸಭೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಅಳದಂಗಡಿ ಮಹಾಶಕ್ತಿಕೇಂದ್ರದ ಅಧ್ಯಕ್ಷ …

Read More »

ಬಿಜೆಪಿ  ಅಭ್ಯರ್ಥಿ  ಹರೀಶ್ ಪೂಂಜ ನಾರಾವಿ ಸೂರ್ಯನಾರಾಯಣ ಕ್ಷೇತ್ರಕ್ಕೆ ಭೇಟಿ 

 ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹರೀಶ್ ಪೂಂಜ ಅವರು ಬುಧವಾರ ನಾರಾವಿ ಶ್ರೀ ಸೂರ್ಯನಾರಾಯಣ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ದೇವರ ಆಶೀರ್ವಾದ ಪಡೆದು, ಚುನಾವಣಾ ಪ್ರಚಾರವನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ನಾರಾವಿ ಗ್ರಾಮ ಪಂಚಾಯತ್, ಅಧ್ಯಕ್ಷೆ ಆಶಾಲತಾ  ಉಪಾಧ್ಯಕ್ಷ ‌ಉದಯ ಹೆಗ್ಡೆ ನಾರಾವಿ ಇದ್ದರು.

Read More »

ಬಿಜೆಪಿ ನಾರಾವಿ ಶಕ್ತಿ ಕೇಂದ್ರ: ಪೂರ್ವಭಾವಿ ಸಭೆ

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹರೀಶ್ ಪೂಂಜ ಅವರು ಚುನಾವಣಾ ಪ್ರಚಾರದ ಭಾಗವಾಗಿ ಮಂಗಳವಾರ ನಾರಾವಿ ಶಕ್ತಿ ಕೇಂದ್ರದಲ್ಲಿ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿದರು.ಈ ಸಭೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬೆಳ್ತಂಗಡಿ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್, ಗಣೇಶ್ ನಾವೂರು, ಉಪಾಧ್ಯಕ್ಷರಾದ ಸೀತಾರಾಮ್ ಬೆಳಾಲು, ನಾರಾವಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಅಂಡಿಂಜೆ , ಕಾರ್ಯದರ್ಶಿ ನಿತೇಶ್, ಮಹಾಶಕ್ತಿಕೇಂದ್ರದ ಚುನಾವಣಾ ಪ್ರಭಾರಿ ವಸಂತಿ‌ ಮಚ್ಚಿನ ಇದ್ದರು.

Read More »

You cannot copy content of this page.