ರಾಷ್ಟ್ರೀಯ ಸುದ್ದಿ

ಆಟವಾಡಲು ತೆರಳಿದ್ದ ಮೂವರು ಮಕ್ಕಳು ನಾಪತ್ತೆ ಪ್ರಕರಣ: ಕಾರಿನಲ್ಲಿ ಮಕ್ಕಳ ಮೃತದೇಹ ಪತ್ತೆ

ಮಹಾರಾಷ್ಟ್ರ:ನಾಗ್ಪುರದಲ್ಲಿ ಮೂವರು ಮಕ್ಕಳು ನಾಪತ್ತೆ ಪ್ರಕರಣದಲ್ಲಿ ಬೆಳವಣಿಗೆ ನಡೆದಿದೆ.ಮನೆಯಿಂದ 50 ಮೀಟರ್ ದೂರದಲ್ಲಿ ಕಾರಿನಲ್ಲಿ ಸಹೋದರ-ಸಹೋದರಿ ಸೇರಿದಂತೆ ಮೂವರು ಮಕ್ಕಳ ಮೃತದೇಹ ಪತ್ತೆಯಾಗಿದೆ. ಕಾಣೆಯಾದ ಒಂದು ದಿನದ ನಂತರ ಭಾನುವಾರ ಸಂಜೆ ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫಾರುಕ್ ನಗರದ ನಿವಾಸಿಗಳಾದ ತೌಫಿಕ್ ಫಿರೋಜ್ ಖಾನ್ (4),ಅಲಿಯಾ ಫಿರೋಜ್ ಖಾನ್ (6) ಮತ್ತು ಅಫ್ರಿನ್ ಇರ್ಷಾದ್ ಖಾನ್ (6) ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದಾರೆ. ಶನಿವಾರ ತಡರಾತ್ರಿಯಾದರೂ ಮಕ್ಕಳು ವಾಪಸ್ ಬಾರದೆ ಇದ್ದಾಗ ಪೊಲೀಸರಿಗೆ ದೂರು ನೀಡಿದ್ದು, …

Read More »

BIG NEWS: ಇಂಫಾಲದಲ್ಲಿ ಕೇಂದ್ರ ಸಚಿವ ʻಆರ್ ಕೆ ರಂಜನ್ ಸಿಂಗ್ʼ ಮನೆಗೆ ಬೆಂಕಿ

ನವದೆಹಲಿ: ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಬೇಡಿಕೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆಗೆ ಸಾಕ್ಷಿಯಾಗಿರುವ ಈಶಾನ್ಯ ರಾಜ್ಯದಲ್ಲಿ ಹಿಂಸಾಚಾರದ ಇತ್ತೀಚಿನ ಘಟನೆಯಲ್ಲಿ ಕಳೆದ ರಾತ್ರಿ ಮಣಿಪುರದಲ್ಲಿ ಕೇಂದ್ರ ಸಚಿವ ಆರ್‌ಕೆ ರಂಜನ್ ಸಿಂಗ್ ಮನೆ ಮೇಲೆ 1,000 ಕ್ಕೂ ಹೆಚ್ಚು ಜನರ ಗುಂಪೊಂದು ದಾಳಿ ಮಾಡಿದೆ. ಘಟನೆಯ ವೇಳೆ ಆರ್‌ಕೆ ರಂಜನ್ ಸಿಂಗ್ ಅವರು ಇಂಫಾಲ್‌ನ ಮನೆಯಲ್ಲಿ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂಫಾಲದಲ್ಲಿ ಕರ್ಫ್ಯೂ ಇದ್ದರೂ ಜನಸಮೂಹ ಕೊಂಗ್ಬಾದಲ್ಲಿರುವ ಸಚಿವರ ಮನೆಗೆ ತಲುಪುವಲ್ಲಿ ಯಶಸ್ವಿಯಾಯಿತು. ಘಟನೆಯ ವೇಳೆ ಸಚಿವರ ನಿವಾಸದಲ್ಲಿ ಒಂಬತ್ತು ಭದ್ರತಾ …

Read More »

ಮಧ್ಯಪ್ರದೇಶದಲ್ಲೂ ಬಿಜೆಪಿಗೆ ಆಘಾತ? ಕರ್ನಾಟಕದ ನಿಖರ ಭವಿಷ್ಯ ನುಡಿದಿದ್ದ ಸಿ -ಡೈಲಿ ಟ್ಯ್ರಾಕರ್ ಹೇಳಿದ್ದೇನು?

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿ ಬೀಗಿದ್ದ ಆಡಳಿತಾರೂಡಾ ಬಿಜೆಪಿ ಪಕ್ಷಕ್ಕೆ ಭಾರಿ ಮುಖಭಂಗವಾಗಿತ್ತು, ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತ ಪಡೆಯುವ ಮೂಲಕ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿತ್ತು. ದೇಶದಲ್ಲಿ ನೆಲಕಚ್ಚಿದ್ದ ಕಾಂಗ್ರೆಸ್‌ಗೆ ಈ ಗೆಲುವು ಮರುಜೀವ ನೀಡಿದೆ ಎಂದೇ ಹೇಳಲಾಗಿತ್ತು. ಕರ್ನಾಟಕದ ನಂತರ ಮಧ್ಯಪ್ರದೇಶದಲ್ಲಿ ಕೂಡ ಈ ವರ್ಷದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಕರ್ನಾಟಕ ಚುನಾವಣೆ ಸೋಲಿನ ನಂತರ, ಬಿಜೆಪಿ ಮಧ್ಯಪ್ರದೇಶದಲ್ಲಿ ಕೂಡ ಸೋಲನುಭವಿಸಲಿದ್ದು, ಮತ್ತೊಂದು ಆಘಾತ ಕಾದಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ನವೆಂಬರ್ ಅಥವಾ …

Read More »

ಒಡಿಶಾದಲ್ಲಿ ಮತ್ತೊಂದು ರೈಲು ಅಪಘಾತ, ಹಳಿ ತಪ್ಪಿದ 5 ಬೋಗಿಗಳು!

ಬಾರ್ಗರ್‌, ಜೂನ್‌ 5: ಓಡಿಶಾದಲ್ಲಿ ಮೂರು ರೈಲುಗಳ ನಡುವೆ ಏರ್ಪಟ್ಟ ಅಪಘಾತದ ನೆನೆಪು ಮಾಸುವ ಮುನ್ನವೇ ಇದೇ ಓಡಿಶಾದಲ್ಲಿ ಮತ್ತೊಂದು ರೈಲು ಅಪಘಾತ ನಡೆದಿದೆ. ಘಟನೆಯಲ್ಲಿ ಗೂಡ್ಸ್‌ ರೈಲು ಹಳಿ ತಪ್ಪಿದ ಪರಿಣಾಮ ರೈಲಿನ 5 ಬೋಗಿಗಳು ನೆಲಕ್ಕುರುಳಿವೆ ಎಂದು ತಿಳಿದು ಬಂದಿದೆ. ಓಡಿಶಾದ ಬಾರ್ಗರ್‌ನಲ್ಲಿ ಚಲಿಸುತ್ತಿದ್ದ ಗೂಡ್ಸ್‌ ರೈಲಿನ 5 ಬೋಗಿಗಳು ಹಳಿ ತಪ್ಪಿವೆ ಎಂದು ತಿಳಿದು ಬಂದಿದೆ. ಈ ರೈಲಿನಲ್ಲಿ ಸುಣ್ಣದ ಕಲ್ಲು ಸಾಗಿಸಲಾಗುತ್ತಿತ್ತು ಎನ್ನಲಾಗಿದ್ದು, ಸದ್ಯ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ವರದಿಗಳು ತಿಳಿಸಿವೆ.

Read More »

ರೈಲು ಅಪಘಾತಕ್ಕೆ ಕಾರಣವೇನು ಗೊತ್ತಾ? ಪ್ರಾಥಮಿಕ ತನಿಖೆಯಲ್ಲಿ ಬಹಿರಂಗ

ಒಡಿಶಾದ ಬಾಲಸೋರ್‌ನಲ್ಲಿ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ದುರಂತಕ್ಕೆ ಕಾರಣವೇನು ಎಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಸಿಗ್ನಲ್‌ನಲ್ಲಿ ಗೊಂದಲ ಉಂಟಾಗಿದ್ದೇ ದುರ್ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಯಶವಂತಪುರ-ಹೌರಾ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಅಪಘಾತಕ್ಕೀಡಾದವು. ತಪ್ಪಾದ ಸಿಗ್ನಲ್ ಕಾರಣದಿಂದ ಕೋರಮಂಡಲ್ ಎಕ್ಸ್‌ಪ್ರೆಸ್ ಗೂಡ್ಸ್ ರೈಲು ನಿಂತಿದ್ದ ಮಾರ್ಗವನ್ನು ಪ್ರವೇಶಿಸಿತು. ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದ ನಂತರ ಕೆಲವು ಬೋಗಿಗಳು ಪಕ್ಕದ ಹಳಿ ಮೇಲೆ ಬಿದ್ದವು, ನಂತರ ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ಹಳಿ ಮೇಲೆ ಬಿದ್ದಿದ್ದ ಬೋಗಿಗಳಿಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಹೆಚ್ಚಿನ …

Read More »

ರೈಲು ಅಪಘಾತ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

ನವದೆಹಲಿ, ಜೂನ್‌ 03: ಒಡಿಶಾದ ಬಾಲಸೋರ್‌ನಲ್ಲಿ ರೈಲು ಅಪಘಾತ ನಡೆದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. ಮೋದಿ ಕಟಕ್‌ನ ಆಸ್ಪತ್ರೆಗಳಲ್ಲಿ ಗಾಯಗೊಂಡವರನ್ನು ಭೇಟಿಯಾಗಲಿದ್ದಾರೆ ಎಂದು ಅವರ ಕಚೇರಿ ಟ್ವೀಟ್ ಮಾಡಿದೆ.ಕ್ಯಾಬಿನೆಟ್ ಸಹೋದ್ಯೋಗಿಗಳಾದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಮೋದಿ ಅವರು ಸ್ಥಳವನ್ನು ಪರಿಶೀಲಿಸಿದರು. ಭುವನೇಶ್ವರದಿಂದ ಉತ್ತರಕ್ಕೆ 170 ಕಿಮೀ ದೂರದಲ್ಲಿರುವ ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ನಿಲ್ದಾಣದಲ್ಲಿ ಘಟನೆ ನಡೆದ ಸ್ಥಳದ ಬಳಿ ಪ್ರಧಾನಿ ಮೋದಿ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಬಂದಿಳಿದರು. ಸ್ಥಳದಲ್ಲಿ …

Read More »

ಕುಸ್ತಿಪಟುಗಳ ಪ್ರತಿಭಟನೆ: ವಿದೇಶಗಳಲ್ಲಿಯೂ ಸುದ್ದಿಯಾದ ಕುಸ್ತಿಪಟುಗಳ ನಕಲಿ ಚಿತ್ರ!

ನವದೆಹಲಿ, ಜೂನ್. 01: ಮೇ 28 ರಂದು ಪ್ರತಿಭಟನೆಯ ಸಂದರ್ಭದಲ್ಲಿ ಭಾರತೀಯ ಕುಸ್ತಿಪಟುಗಳ ಗುಂಪನ್ನು ಪೊಲೀಸರು ಬಂಧಿಸಿದಾಗ, ಅವರಲ್ಲಿ ಒಬ್ಬರು ತೆಗೆದ ಸೆಲ್ಫಿಯ ಎರಡು ಆವೃತ್ತಿಗಳು ಟ್ವಿಟರ್‌ನಲ್ಲಿ ಭಾರೀ ವೈರಲ್ ಆಗಲು ಪ್ರಾರಂಭಿಸಿದವು. ಎರಡೂ ಚಿತ್ರಗಳಲ್ಲಿ ಪದಕ ವಿಜೇತರಾದ ವಿನೇಶ್ ಮತ್ತು ಸಂಗೀತಾ ಫೋಗಟ್ ಅವರು ಮೂವರು ಪೊಲೀಸ್ ಅಧಿಕಾರಿಗಳೊಂದಿಗೆ ಕುಸ್ತಿ ತಂಡದ ಇತರ ಬಂಧಿತ ಸದಸ್ಯರೊಂದಿಗೆ ಬಸ್‌ನಲ್ಲಿ ಕುಳಿತಿರುವುದನ್ನು ತೋರಿಸುತ್ತವೆ. ಎರಡು ಚಿತ್ರಗಳು ಒಂದೇ. ಆದರೆ, ಅವುಗಳಲ್ಲಿ ಒಂದರಲ್ಲಿ ಕುಸ್ತಿಪಟುಗಳು ನಗುತ್ತಿರುವಂತೆ ಕಾಣುತ್ತಾರೆ. ಇನ್ನೊಂದರಲ್ಲಿ ಸಪ್ಪೆ ಮೊರೆಯಲ್ಲಿದ್ದಾರೆ. ಕುಸ್ತಿ ಫೆಡರೇಶನ್ ಮಾಜಿ ಮುಖ್ಯಸ್ಥ …

Read More »

75 ರೂ ನಾಣ್ಯ ಬಿಡುಗಡೆ; ಎಲ್ಲಿ ಸಿಗುತ್ತೆ ಈ ಕಾಯಿನ್? ಏನಿದರ ವಿಶೇಷತೆ? ಇಲ್ಲಿದೆ ಡೀಟೇಲ್ಸ್

ವಿಶೇಷ ಸಂದರ್ಭಗಳ ಸ್ಮರಣಾರ್ಥವಾಗಿ ಸರ್ಕಾರ ನಾಣ್ಯ ಮತ್ತಿತರ ಕರೆನ್ಸಿ, ಅಂಚೆ ಚೀಟಿ ಇತ್ಯಾದಿ ಬಿಡುಗಡೆ ಮಾಡುವುದುಂಟು. ಈಗ 75 ವರ್ಷದ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ 75 ರೂ ನಾಣ್ಯ ಬಿಡುಗಡೆ ಆಗಿದೆ. ಈ ನಾಣ್ಯದ ವಿಶೇಷತೆ ಬಗ್ಗೆ ಇಲ್ಲಿದೆ ವಿವರ. ನವದೆಹಲಿ: ಕೇಂದ್ರ ರಾಜಧಾನಿ ನಗರಿಯಲ್ಲಿ ಹೊಸ ಸಂಸದೀಯ ಭವನದ ಉದ್ಘಾಟನೆ ಆಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 75 ರೂ ಮುಖಬೆಲೆಯ ನಾಣ್ಯ (Rs. 75 coin) ಹಾಗೂ ವಿಶೇಷ ಅಂಚೆ ಚೀಟಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಹೊಸ ಸಂಸತ್ ಭವನದ ಸ್ಮರಣಾರ್ಥ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸ್ಮರಣಾರ್ಥ 75 ರೂ ನಾಣ್ಯವನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಈ …

Read More »

ವೇಣೂರು ಮಹಾಮಸ್ತಕಾಭಿಷೇಕದ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿ೦ದ ಪತ್ರಿಕಾಗೋಷ್ಠಿ

ವೇಣೂರು : ಇತಿಹಾಸ ಪ್ರಸಿದ್ಧ ವೇಣೂರು ಶ್ರೀ ಭಗವಾನ್ ಬಾಹುಬಲಿ ಮೂರ್ತಿಯ ಮಹಾಮಸ್ತಕಾಭಿಷೇಕವು 2024ರ ಫೆಬ್ರವರಿ ತಿ೦ಗಳಿನಲ್ಲಿ ಅದ್ದೂರಿಯಿ೦ದಜರಗಲಿದೆ ಎ೦ದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಈಗಷ್ಟೇ ಮಾಹಿತಿ ನೀಡಿದರು. ಉಜಿರೆಯ ಸಿದ್ದವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ವಿವರ ನೀಡಿದರು. ಮೂಡಬಿದಿರೆ ಭಟ್ಟಾರಕ ಚಾರುಕೀರ್ತಿ ಪ೦ಡಿತಾಚಾರ್ಯವರ್ಯ ಮಹಾ ಸ್ವಾಮೀಜಿಯವರು, ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ಸೀಮೆಯ ಅರಸರಾದ ಡಾ. ಪದ್ಮಪ್ರಸಾದ ಅಜಿಲರು, ವೇಣೂರು ಜೈನದಿಗ೦ಬರ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇ೦ದ್ರ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Read More »

You cannot copy content of this page.