ರಾಷ್ಟ್ರೀಯ ಸುದ್ದಿ

ಪತ್ನಿಯ ಹುಟ್ಟುಹಬ್ಬಕ್ಕೆ ಚಂದ್ರನ ಮೇಲಿನ ಜಾಗವನ್ನು ಉಡುಗೊರೆಯಾಗಿ ನೀಡಿದ ಪತಿ

ಕೋಲ್ಕತ್ತಾ: ಭಾರತ ಚಂದ್ರಯಾನ-3 ಯಶಸ್ಸಿನ ಬಳಿಕ ಬಾಹ್ಯಾಕಾಶ ಜಗತ್ತಿನಲ್ಲಿ ಹೊಸ ಇತಿಹಾಸವನ್ನು ಬರೆದಿದೆ. ಇಲ್ಲೊಬ್ಬರು ಚಂದ್ರನ ಮೇಲಿನ ತುಂಡು ಜಾಗವನ್ನು ತನ್ನ ಪತ್ನಿಗೆ ಉಡುಗೊರೆಯಾಗಿ ನೀಡಿ ಸುದ್ದಿಯಾಗಿದ್ದಾರೆ.! ಪಶ್ಚಿಮ ಬಂಗಾಳದ ಜಾರ್‌ಗ್ರಾಮ್ ಜಿಲ್ಲೆಯ ಸಂಜಯ್ ಮಹತೋ ಎಂಬ ವ್ಯಕ್ತಿ ತನ್ನ ಪತ್ನಿಯ ಹುಟ್ಟುಹಬ್ಬಕ್ಕೆ ಚಂದ್ರನ ಮೇಲಿನ ತುಂಡು ಜಾಗವನ್ನು ಉಡುಗೊರೆಯಾಗಿ ನೀಡಿದ್ದಾರೆ. “ಮದುವೆಯ ವೇಳೆ ನಾನು ಪತ್ನಿಗೆ ಚಂದ್ರನನ್ನು ತಂದುಕೊಡುತ್ತೇನೆ ಎಂದು ಪ್ರಾಮಿಸ್ ಮಾಡಿದ್ದೆ. ಈ ಮಾತು ಕೊಟ್ಟ ದಿನದಿಂದ ಅದನ್ನು ಪೂರ್ಣ ಮಾಡದೆ ಸುಮ್ಮನೆ ಇರಲು ನನಗೆ ಆಗುತ್ತಿರಲಿಲ್ಲ. ಈಗ ಮದುವೆಯ ಬಳಿಕ ಅವರ …

Read More »

ಮಗಳ ಅಂತ್ಯಸಂಸ್ಕಾರದ ನಂತರ ತಂದೆಗೆ ಶಾಕ್ – ನಾನಿನ್ನೂ ಬದುಕಿದ್ದೇನೆ ಅಪ್ಪಾ ಎಂದು ಕರೆ ಮಾಡಿದ ಪುತ್ರಿ

ಪಾಟ್ನಾ: ಬಿಹಾರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಗಳ ಅಂತ್ಯಸಂಸ್ಕಾರದ ಬಳಿಕ ಸ್ವತಃ ಮಗಳೇ ವಿಡಿಯೋ ಕಾಲ ಮಾಡಿ ‘ಅಪ್ಪಾ ನಾನಿನ್ನೂ ಬದುಕಿದ್ದೇನೆ’ ಎಂದು ಹೇಳಿದ್ದಾಳೆ. ಬಿಹಾರದ ಪುರ್ನಿಯಾದ ಅಕ್ಬರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಂಶು ಕುಮಾರಿ ಎಂಬ ಯುವತಿ ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದಳು. ಕುಟುಂಬಸ್ಥರು, ಪೊಲೀಸರು ಎಲ್ಲೆಡೆ ಹುಡುಕಾಡಿದ್ದರೂ ಅಂಶು ಕುಮಾರಿಯ ಪತ್ತೆಯೇ ಇರಲಿಲ್ಲ. ಕೆಲವು ದಿನಗಳ ಹಿಂದೆ ಕಾಲುವೆ ಒಂದರಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಮುಖವು ಗುರುತಿಸಲಾಗದಷ್ಟು ಉಬ್ಬಿಕೊಂಡಿತ್ತು. ಅದು ಕಾಣೆಯಾದ ಅಂಶು ಕುಮಾರಿಯದ್ದೇ ದೇಹ ಎಂದು …

Read More »

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ರೇ ಗಲ್ಲು, ಗ್ಯಾಂಗ್ ರೇಪ್ ಮಾಡಿದವರಿಗೆ 20 ವರ್ಷ ಶಿಕ್ಷೆ – ಅಮಿತ್ ಶಾ

ನವದೆಹಲಿ: ಕೇಂದ್ರ ಸರ್ಕಾರದಿಂದ ದೇಶದಲ್ಲಿನ ಗ್ಯಾಂಗ್ ರೇಪ್ ನಂತಹ ಪ್ರಕರಣ ತಡೆಗಟ್ಟೋದಕ್ಕಾಗಿ ಮಹತ್ವದ ಹೆಜ್ಜೆಯನ್ನು ಇರಿಸಲಾಗಿದೆ. ಈ ನಿಟ್ಟಿನಲ್ಲಿ ಲೋಕಸಭೆಯಲ್ಲಿ ತಿದ್ದುಪಡಿ ಮಸೂಧೆಯನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದ್ದಾರೆ. ಈ ತಿದ್ದುಪಡಿ ಮಸೂದೆಯಂತೆ ಇನ್ಮುಂದೆ ಗ್ಯಾಂಗ್ ರೇಪ್ ಮಾಡಿದವರಿಗೆ 20 ವರ್ಷ ಶಿಕ್ಷೆ ವಿಧಿಸುವಂತ ಕಾನೂನು ಜಾರಿಯಾಗಲಿದೆ.   ಈ ಸಂಬಂಧ ಸಂಸತ್ ಮುಂಗಾರು ಅಧಿವೇಶನದ ಕೊನೆಯ ದಿನದಂದು ಲೋಕಸಭೆಯಲ್ಲಿ ಅಪರಾಧ ಕಾನೂನು ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದರು. ಈ ವೇಳೆ ಮಾತನಾಡಿದ ಅವರು, ನಾನು …

Read More »

ಮಗನ ಅಂತಿಮ ದರ್ಶನಕ್ಕೆ ಬಿಡದ ಅಧಿಕಾರಿಗಳು- ತಂದೆ ಸಾವು

ಚಂಡೀಗಢ: ವಿದ್ಯುತ್ ಅವಘಡದಿಂದ ಮೃತಪಟ್ಟ ಮಗನ ಅಂತಿಮ ದರ್ಶನಕ್ಕೆ ಅವಕಾಶ ನೀಡ ಜಿಎಸ್‌ಟಿ ಅಧಿಕಾರಿಗಳು ತಂದೆಯ ಸಾವಿಗೆ ಕಾರಣರಾಗಿದ್ದಾರೆ! ಬಲ್‌ಬೀರ್ ಸಿಂಗ್ ಎಂಬಾತರೇ ಮೃತಪಟ್ಟ ದುರ್ದೈವಿ. ಟ್ರಕ್ ಚಾಲಕರಾದ ಇವರು ಸರಕುಗಳನ್ನು ತಲುಪಿಸಲು ಕಾನ್‌ಪುರ ನಗರಕ್ಕೆ ತೆರಳಿದ್ದಾರೆ. ವಾಪಸ್ ಬರುವಾಗ ಅವರ ಮಗ ಮಹೇಶ್ ಎಂಬಾತ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಸುದ್ದಿ ಬಂದಿದೆ. ಸುದ್ದಿ ತಿಳಿದು ಕೂಡಲೇ ಅವರು ತಮ್ಮ ಊರು ಪಂಜಾಬ್‌ನ ಲೂಧಿಯಾನ ಸಮೀಪದ ಅಸ್ಲಾಮ್‌ಗಂಜ್‌ಗೆ ತೆರಳಲು ಮುಂದಾಗಿದ್ದಾರೆ. ಆದರೆ ಇದೇ ವೇಳೆ ಅವರನ್ನು ಟ್ರಕ್ ಸಮೇತ ತಡೆದ ರಾಜ್ಯ ಜಿಎಸ್‌ಟಿ ಅಧಿಕಾರಿಗಳು …

Read More »

ಅಸ್ವಸ್ಥಳಾಗಿದ್ರೂ ಎಕ್ಸಾಂ ಬರೆಸಿದ ಶಾಲೆ ಶಿಕ್ಷಕರು: ಮರುದಿನ ಬಾಲಕಿ ಸಾವು

ಫರಿದಾಬಾದ್: ಹರ್ಯಾಣದ ಫರಿದಾಬಾದ್‌ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಅಸ್ವಸ್ಥಳಾಗಿದ್ದರೂ ಪರೀಕ್ಷೆಗಾಗಿ ಶಾಲೆಗೆ ಕುಳಿತುಕೊಳ್ಳುವಂತೆ ಒತ್ತಾಯಿಸಿದ ಮರುದಿನದ ನಂತರ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಾಲಕಿಯನ್ನು 11 ವರ್ಷದ ಆರಾಧ್ಯ ಖಂಡೇಲ್ವಾಲ್ ಎಂದು ಗುರುತಿಸಲಾಗಿದ್ದು, ಫರಿದಾಬಾದ್‌ನ ಸಿಬಿಎಸ್‌ಇ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಳು. ಜುಲೈ 13 ರಂದು ಆಕೆ ಸಾವನ್ನಪ್ಪಿದ್ದಾಳೆ. ಜುಲೈ 12 ರಂದು ಶಾಲೆಯಲ್ಲಿ ಆರೋಗ್ಯ ಸರಿಯಿಲ್ಲ ಎಂದು ತನ್ನ ತರಗತಿಯ ಶಿಕ್ಷಕರಿಗೆ ತಿಳಿಸಿದ್ದರೂ, ಇದರ ಬಗ್ಗೆ ತಲೆ ಕೆಡಿಸಿಕೊಳ್ಳದ ಶಾಲೆಯು ಎಕ್ಲಸಾಂ ಬರೆಸಿದೆ ಎಂದು ಆರಾಧ್ಯ ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಆರಾಧ್ಯ ಸಹಪಾಠಿಯ …

Read More »

ಚಂದ್ರಯಾನ-3 ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಸೃಷ್ಟಿಸಲಿದೆ : ಪ್ರಧಾನಿ ಮೋದಿ

ನವದೆಹಲಿ : ಭಾರತದ ಚಂದ್ರಯಾನ -3 ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಗೊಂಡಿದ್ದು, ಇಡೀ ರಾಷ್ಟ್ರದ ಭರವಸೆಗಳನ್ನು ಹೊತ್ತಿದೆ. ಈ ಯೋಜನೆ ಯಶಸ್ವಿಯಾದರೆ, ರಷ್ಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾದ ನಂತರ ಚಂದ್ರನ ಮೇಲೆ ನಿಯಂತ್ರಿತ ಲ್ಯಾಂಡಿಂಗ್ ಸಾಧಿಸಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಲಿದೆ. ಸಧ್ಯ ಪ್ರಧಾನಿ ಮೋದಿಯವ್ರು ಟ್ವೀಟ್ ಮೂಲ ಸಂತೋಷ ಹಂಚಿಕೊಂಡಿದ್ದು, “ಚಂದ್ರಯಾನ -3 ಭಾರತದ ಬಾಹ್ಯಾಕಾಶದಲ್ಲಿ ಹೊಸ ಅಧ್ಯಾಯವನ್ನ ಬರೆಯುತ್ತದೆ. ಇದು ಎತ್ತರಕ್ಕೆ ಏರುತ್ತದೆ, ಪ್ರತಿಯೊಬ್ಬ ಭಾರತೀಯನ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳನ್ನ ಹೆಚ್ಚಿಸುತ್ತದೆ. ಈ ಮಹತ್ವದ ಸಾಧನೆಯು ನಮ್ಮ ವಿಜ್ಞಾನಿಗಳ ಅವಿರತ ಸಮರ್ಪಣೆಗೆ …

Read More »

ಪ್ರಧಾನಿಯ ಪತ್ನಿ ಹೃದಯಾಘಾತದಿಂದ ಮೃತ್ಯು

ಕಾಠ್ಮಂಡು: ನೇಪಾಳದ ಪ್ರಧಾನಿ ಪುಷ್ಪ ಕಮಲ್‌ ದಹಾಲ್‌ ಅವರ ಪತ್ನಿ ಸೀತಾ ದಹಾಲ್‌ (69) ಹೃದಯಾಘಾತದಿಂದ ನಿಧನರಾಗಿದ್ದಾರೆ. ಸೀತಾ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಸೀತಾ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಕಠ್ಮಂಡುವಿನಲ್ಲಿ ನಾರ್ವಿಕ್ ಇಂಟರ್ನ್ಯಾಷನಲ್ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

Read More »

ಶಿಕ್ಷೆ ತಡೆ ಕೋರಿ ರಾಹುಲ್‌ ಗಾಂಧಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಗುಜರಾತ್ ಹೈಕೋರ್ಟ್

ನವದೆಹಲಿ:ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ಶಿಕ್ಷೆಗೆ ತಡೆಯಾಜ್ಞೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದ್ದರಿಂದ ರಾಹುಲ್ ಗಾಂಧಿಗೆ ಭಾರಿ ಹಿನ್ನಡೆಯಾಗಿದೆ. ‘ಮೋದಿ ಉಪನಾಮ(Modi surname)’ ಹೇಳಿಕೆಗೆ ಸಂಬಂಧಿಸಿದಂತೆ ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೆ ತಡೆಯಾಜ್ಞೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನ ಗುಜರಾತ್ ಹೈಕೋರ್ಟ್ ಆಲಿಸಿತ್ತು.   ರಾಹುಲ್ ಗಾಂಧಿ ವಿರುದ್ಧ ಕನಿಷ್ಠ 8 ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗಳು ಬಾಕಿ ಉಳಿದಿವೆ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶವು ಯಾವುದೇ ಹಸ್ತಕ್ಷೇಪವನ್ನು ಬಯಸುವುದಿಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ. ಮಾನನಷ್ಟ ಮೊಕದ್ದಮೆಯಲ್ಲಿ ಎರಡು …

Read More »

500 ರೂ. ನೋಟುಗಳ ರಾಶಿ, ರಾಶಿ ಹಣದ ಜತೆ ಪೊಲೀಸ್‌ ಅಧಿಕಾರಿಯ ಹೆಂಡತಿ, ಮಕ್ಕಳ ಸೆಲ್ಫಿ!

ಲಕ್ನೋ : ಅಧಿಕಾರ, ಹಣದ ದಾಹ ಹೇಗಿರುತ್ತದೆ ಎಂಬುದಕ್ಕೆ ಆಗಾಗ ನಡೆಯುತ್ತಿರುವ ಇ.ಡಿ, ಲೋಕಾಯುಕ್ತ ಸಂಸ್ಥೆಗಳ ದಾಳಿಯಿಂದ ಬೆಳಕಿಗೆ ಬರುತ್ತದೆ. ಆದರೆ ಉತ್ತರ ಪ್ರದೇಶದ ಉನ್ನಾವೊದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರ ಹೆಂಡತಿ ಮತ್ತು ಮಕ್ಕಳು 500 ರೂ. ಮುಖಬೆಲೆಯ ಕಂತೆ, ಕಂತೆ ನೋಟುಗಳ ರಾಶಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ವೈರಲ್‌ ಆದ ನಂತರ ಪೊಲೀಸ್‌ ಅಧಿಕಾರಿ ಸಂಕಷ್ಟ ಸಿಲುಕಿರುವ ಘಟನೆ ನಡೆದಿದೆ. ಪೊಲೀಸ್‌ ಅಧಿಕಾರಿಯ ಹೆಂಡತಿ ಮತ್ತು ಮಕ್ಕಳು 500 ರೂ. ನೋಟುಗಳ ಬಂಡಲ್‌ಗಳ ಜೊತೆ ಸೆಲ್ಫಿ ತೆಗೆದುಕೊಂಡ ಫೋಟೋ ಸಾಮಾಜಿಕ …

Read More »

ಅಪ್ರಾಪ್ತೆ ಮೇಲೆ ಹಲವು ತಿಂಗಳಿನಿಂದ ಆಶ್ರಮದಲ್ಲೇ ಅತ್ಯಾಚಾರ: ಸ್ವಾಮೀಜಿ ಅರೆಸ್ಟ್!

ತಾನೇ ನಡೆಸುತ್ತಿದ್ದ ಆಶ್ರಮದಲ್ಲಿ 15 ವರ್ಷದ ಅನಾಥ ಬಾಲಕಿ ಮೇಲೆ ಹಲವು ತಿಂಗಳುಗಳಿಂದ ಅತ್ಯಾಚಾರ  ಎಸಗಿರುವ ಆರೋಪದ ಮೇಲೆ ಆಂಧ್ರಪ್ರದೇಶದಲ್ಲಿ ಸ್ವಾಮೀಜಿಯೊಬ್ಬರನ್ನು ಬಂಧಿಸಲಾಗಿದೆ. ಘಟನೆ ವಿಶಾಖಪಟ್ಟಣದಲ್ಲಿನ ಆಶ್ರಮದಲ್ಲಿ ನಡೆದಿದೆ. ಬಾಲಕಿ ಜೂನ್ 13ರಂದು ಆಶ್ರಮದಿಂದ ತಪ್ಪಿಸಿಕೊಂಡು ಹೋಗಿದ್ದು, ಈ ಬಗ್ಗೆ ಪೊಲೀಸರು ನಾಪತ್ತೆಯ ದೂರನ್ನು ದಾಖಲಿಸಿಕೊಂಡಿದ್ದರು. ಬಳಿಕ ಬಾಲಕಿ ವಿಜಯವಾಡ ತಲುಪಿ ಆಶ್ರಮದ ಸ್ವಾಮೀಜಿ ಪೂರ್ಣಾನಂದ ಸರಸ್ವತಿ ವಿರುದ್ಧ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಪೋಷಕರು ಆಕೆ ಚಿಕ್ಕವಳಿದ್ದಾಗಲೇ ನಿಧನರಾಗಿದ್ದಾರೆ. ಬಳಿಕ ಆಕೆಯ ಅಜ್ಜಿ 2 ವರ್ಷಗಳ ಹಿಂದೆ ಆಶ್ರಮದಲ್ಲಿ ಅವಳನ್ನು ಬಿಟ್ಟು …

Read More »

You cannot copy content of this page.