ತಾಜಾ ಸುದ್ದಿ

ಉಡುಪಿ : ನಡುರಸ್ತೆಯಲ್ಲೇ ಹೊತ್ತಿ ಉರಿದ ಎಲೆಕ್ಟ್ರಿಕ್ ಸ್ಕೂಟರ್

ಉಡುಪಿ : ಎಲೆಕ್ಟ್ರಿಕ್ ಸ್ಕೂಟರ್ ಒಂದು ನಡು ರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ಬ್ರಹ್ಮಾವರದ ಆಕಾಶವಾಣಿ ಜಂಕ್ಷನ್ ಬಳಿಯಲ್ಲಿ ಈ ಘಟನೆ ನಡೆದಿದ್ದು ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.ಘಟನೆಯಿಂದಾಗಿ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ. ಎಲೆಕ್ಟ್ರಿಕ್ ಸ್ಕೂಟರ್ ಗಳು ಬೆಂಕಿಗಾಹುತಿಯಾಗುತ್ತಿರುವ ಪ್ರಕರಣಗಳು ಏರಿಕೆಯಲ್ಲೇ ಇದ್ದು, ಕೇಂದ್ರ ಸರಕಾರ ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದೇ ಇರುವುದು ವಿಪರ್ಯಾಸವಾಗಿದೆ.

Read More »

ಕೋಟ: ಅನ್ನಭಾಗ್ಯದ ಅಕ್ಕಿ ಅಕ್ರಮ ದಾಸ್ತಾನು ಕೇಂದ್ರಕ್ಕೆ ದಾಳಿ – 540 ಕೆ.ಜಿ. ಅಕ್ಕಿ ವಶ

ಕೋಟ: ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ದಾಸ್ತಾನಿರಿಸಿದ ಶಿರಿಯಾರ ಗ್ರಾಮದ ದೇವ ರೈಸ್‌ ಇಂಡಸ್ಟ್ರೀಸ್‌ಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಿಬಂದಿ ಮತ್ತು ತಹಶೀಲ್ದಾರರು ರವಿವಾರ ದಾಳಿ ನಡೆಸಿ 540 ಕೆ.ಜಿ. ಅಕ್ಕಿ ವಶ ಪಡಿಸಿಕೊಂಡಿದ್ದಾರೆ. ಉಡುಪಿ ಆಹಾರ ಉಪನಿರೀಕ್ಷಕರಾದ ಜಯಮಾಧವ ಹಾಗೂ ಬ್ರಹ್ಮಾವರ ತಹಶೀಲ್ದಾರ್‌ ಶ್ರೀಕಾಂತ್‌ ಹೆಗ್ಡೆ, ಕೋಟ ಠಾಣೆ ಉಪನಿರೀಕ್ಷಕ ತೇಜಸ್ವಿ ಜತೆಯಾಗಿ ದಾಳಿ ನಡೆಸಿದರು. ದಾಳಿಯ ಸಂದರ್ಭ ಆಹಾರ ನಿರೀಕ್ಷಕರಾದ ಶಿವರಾಜ್‌, ಸುರೇಶ್‌, ಲೀಲಾನಂದ ಹಾಗೂ ಸಿಬಂದಿ ಜತೆಗಿದ್ದರು. ಇಂಡಸ್ಟ್ರೀಸ್‌ ಮಾಲಕ‌ನ ಮೇಲೆ ಪ್ರಕರಣ ದಾಖಲಾಗಿದೆ. ಕೋಟ ಕಂದಾಯ …

Read More »

BREAKING: ಗ್ಯಾಸ್‌ ಸಿಲಿಂಡರ್‌ ದರ ಇಳಿಕೆ

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳು ಮತ್ತು 5 ಕೆಜಿ ಎಫ್‌ಟಿಎಲ್ (ಫ್ರೀ ಟ್ರೇಡ್ ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. 19 ಕೆ.ಜಿ ವಾಣಿಜ್ಯ ಸಿಲಿಂಡರ್‌ಗೆ 30.50 ರೂಪಾಯಿ ಇಳಿಕೆಯಾಗಿದೆ. ಏಪ್ರಿಲ್ 1ರಿಂದ ದೆಹಲಿಯಲ್ಲಿ ಬೆಲೆ 1764.50 ಕ್ಕೆ ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 5 ಕೆಜಿ ಎಫ್‌ಟಿಎಲ್ ಸಿಲಿಂಡರ್ ಬೆಲೆ 7.50 ರೂಪಾಯಿ ಇಳಿಕೆಯಾಗಿದೆ. ಮಾರ್ಚ್ 1ರಂದು, ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳಲ್ಲಿ …

Read More »

ಪತಿಯ ಹತ್ಯೆಗೆ ವಾಟ್ಸಾಪ್ ಸ್ಟೇಟಸ್‌ನಲ್ಲಿ 50 ಸಾವಿರ ರೂ ಬಹುಮಾನ ಘೋಷಿಸಿದ ಪತ್ನಿ.!

ಲಕ್ನೋ: ಪತ್ನಿಯೊಬ್ಬಳು ಪತಿಯ ಹತ್ಯೆಗೆ ವಾಟ್ಸಾಪ್ ಸ್ಟೇಟಸ್‌ನಲ್ಲಿ 50 ಸಾವಿರ ರೂ ಬಹುಮಾನ ಘೋಷಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಘಟನೆಯು ಬಹ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಕ್ಕೆ ಸಂಬಂಧಿಸಿದೆ. ಪತ್ನಿಯ ವಾಟ್ಸಾಪ್ ಸ್ಟೇಟಸ್ ನೋಡಿ ಗಾಬರಿಗೊಂಡ ಪತಿ ಪೊಲೀಸರಿಗೆ ದೂರು ನೀಡಿದ್ದು, ಆತನ ವಿರುದ್ಧ ಬೆದರಿಕೆ ಹಾಕಿದ್ದಲ್ಲದೆ ಪತ್ನಿಯ ಸ್ನೇಹಿತನ ಮೇಲೂ ಆರೋಪ ಮಾಡಿದ್ದಾರೆ. ಪತಿಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಪತಿ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಜುಲೈ 9, 2022 ರಂದು ಭಿಂಡ್‌ನ …

Read More »

ಬ್ರಹ್ಮಾವರ: ನಾಪತ್ತೆಯಾಗಿದ್ದ ರಿಕ್ಷಾ ಚಾಲಕ ಸಂಶಯಾಸ್ಪದ ಸಾವು- ದೂರು ದಾಖಲು

ಬ್ರಹ್ಮಾವರ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮೂಡು ತೋನ್ಸೆ ಗ್ರಾಮದ ಮುಹಮ್ಮದ್ ಫೈಝಲ್(36) ಎಂಬವರ ಮೃತದೇಹವು ಮಾಯಾಡಿ ಎಂಬಲ್ಲಿರುವ ಸ್ವರ್ಣ ನದಿಯಲ್ಲಿ ಪತ್ತೆಯಾಗಿದೆ. ರಿಕ್ಷಾ ಚಾಲಕ ವೃತ್ತಿ ಹಾಗೂ ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಇವರು ಮಾ.27ರಂದು ರಾತ್ರಿ ಮನೆಯಿಂದ ರಿಕ್ಷಾದಲ್ಲಿ ಹೋಗಿದ್ದರು. ಬಳಿಕ ಹುಡುಕಾಡಿದಾಗ ಮನೆ ಬಳಿಯ ಮೈದಾನದ ಸಮೀಪ ಇವರ ರಿಕ್ಷಾ ಪತ್ತೆಯಾಗಿತ್ತು. ಆದರೆ ಮುಹಮ್ಮದ್ ಫೈಝಲ್ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಇವರ ಮೃತದೇಹವು ನದಿಯಲ್ಲಿ ಪತ್ತೆಯಾಗಿದ್ದು, ಅವರ ಸಾವಿನಲ್ಲಿ ಸಂಶಯವಿರುವುದಾಗಿ …

Read More »

ಬೆಳ್ತಂಗಡಿ : ಆಹಾರದಲ್ಲಿ ವಿಷವಿಕ್ಕಿರುವ ಪರಿಣಾಮ ಹತ್ತಕ್ಕೂ ಅಧಿಕ ಶ್ವಾನಗಳ ಮಾರಣ ಹೋಮ

ಬೆಳ್ತಂಗಡಿ : ಇಲ್ಲಿನ ಮುಂಡಾಜೆ ಗ್ರಾಮದ ಸೋಮಂತಡ್ಕದ ಅಗರಿ- ಹುರ್ತಾಜೆ ರಸ್ತೆಯಲ್ಲಿ ಕಟುಕರು ಆಹಾರದಲ್ಲಿ ವಿಷವಿಕ್ಕಿರುವ ಪರಿಣಾಮ ಅದನ್ನು ಸೇವಿಸಿದ 10ಕ್ಕಿಂತಲೂ ಅಧಿಕ ಸಾಕುನಾಯಿಗಳು ಹಾಗೂ ಬೀದಿನಾಯಿಗಳು ಮೃತಪಟ್ಟಿವೆ. ಇಲ್ಲಿನ ರಸ್ತೆಯುದ್ದಕ್ಕೂ ವಿಷ ಬೆರೆಸಿರುವ ಆಹಾರವನ್ನು ಅಲ್ಲಲ್ಲಿ ಹಾಕಲಾಗಿತ್ತು. ಇದನ್ನು ಸೇವಿಸಿರುವ ನಾಯಿಗಳು ಸತ್ತು ಬಿದ್ದಿವೆ. ತಡರಾತ್ರಿ ಈಸ್ಟರ್ ಹಬ್ಬದಿಂದ ತೆರಳುತ್ತಿದ್ದವರು ಇದನ್ನು ಗಮನಿಸಿ ತಕ್ಷಣ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರವರ ಗಮನಕ್ಕೆ ತಂದಿದ್ದಾರೆ. ಪರಿಶೀಲನೆ ನಡೆಸಿದಾಗ ಅಲ್ಲಿನ ಕೆಲ ಮನೆಗಳ ಶ್ವಾನಗಳು ಸತ್ತಿರುವುದು ಕಂಡು ಬಂದಿದೆ. ಮೃತ ಶ್ವಾನಗಳ ಕಳೇಬರವನ್ನು ಪಂಚಾಯತ್ ವತಿಯಿಂದ …

Read More »

ಕಡಬ: ಟೂರಿಸ್ಟ್ ಟೆಂಪೋ ಹಾಗು ಸಿಎನ್ ಜಿ ಸಾಗಾಟದ ವಾಹನದ ನಡುವೆ ಅಪಘಾತ- ಇಬ್ಬರಿಗೆ ಗಂಭೀರ ಗಾಯ

ಕಡಬ : ಆಲಂಕಾರು- ಶಾಂತಿಮೊಗರು ರಸ್ತೆಯ ಕಯ್ಯಾಪ್ಪೆ ಎಂಬಲ್ಲಿ ಟೂರಿಸ್ಟ್ ಟೆಂಪೋ ಹಾಗು ಸಿಎನ್ ಜಿ ಸಾಗಾಟದ ವಾಹನದ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಅಪಘಾತದಲ್ಲಿ ಕೆಪುಳು ನಿವಾಸಿ ದಿನೇಶ ಹಾಗೂ ಕಾಣಿಯೂರು ನಿವಾಸಿ ಸುನೀಲ್ ಅವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳು ದಿನೇಶ್ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಸುನೀಲ್ ಎಂಬವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ. ಘಟನೆಯಿಂದ ಆಲಂಕಾರು – ಶಾಂತಿಮೊಗರು ರಸ್ತೆಯು ಎರಡು ಗಂಟೆ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಪುತ್ತೂರು ಅಗ್ನಿಶಾಮಕ ದಳ …

Read More »

ಪುತ್ತೂರು : ಅಕ್ರಮ ದನ ಸಾಗಾಟದ ಕಾರು ಡಿಕ್ಕಿ ಹೊಡೆದು ಪಾದಚಾರಿ ಸಾವು – ಆರೋಪಿಯ ಬಂಧನಕ್ಕೆ ಹಿಂದೂ ಸಂಘಟನೆಗಳ ಪ್ರತಿಭಟನೆ

ಪುತ್ತೂರು : ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಕಾರೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಘಟನೆ ಕಡಬದ ಮರ್ಧಾಳ ಎಂಬಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಪಾದಚಾರಿ ಸಾವನಪ್ಪಿದ್ದಾರೆ. ಮೃತರನ್ನು ಮರ್ಧಾಳ ನಿವಾಸಿ ವಿಠಲ ರೈ ಎಂದು ಗುರುತಿಸಲಾಗಿದೆ. ಮರ್ದಾಳ ಪೇಟೆಯಲ್ಲಿ ವಿಠಲ ರೈ ಯವರು ತನ್ನ ಕಾರನ್ನು ನಿಲ್ಲಿಸಿ ರಸ್ತೆ ದಾಟುತ್ತಿದ್ದ ವೇಳೆ ಸುಬ್ರಹ್ಮಣ್ಯ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದು ಅವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.  ಬಳಿಕ ಕಾರನ್ನು ಮರ್ಧಾಳದ ಮನೆಯೊಂದರ ಮುಂದೆ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ಘಟನೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳ ಕಡಬ …

Read More »

ಸುಳ್ಯ : ಅಕ್ರಮ ಮರ ಸಾಗಾಟ ನಾಲ್ವರು ಆರೋಪಿಗಳ ಬಂಧನ – 15 ಲಕ್ಷ ರೂ. ಮೌಲ್ಯದ ಸೊತ್ತು ವಶ

ಸುಳ್ಯ: ಅಕ್ರಮವಾಗಿ ಮರಗಳನ್ನು ಕಡಿದು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ನಾಲ್ಕು ಮಂದಿಯನ್ನು ಬಂಧಿಸಿ, ಸೊತ್ತುಗಳನ್ನು ಸುಳ್ಯ ಕಸಬಾ ಗ್ರಾಮದ ಶಾಂತಿನಗರದಲ್ಲಿ ಅರಣ್ಯ ಇಲಾಖೆಯವರು ವಶಪಡಿಸಿಕೊಂಡಿದ್ದಾರೆ. ಸ್ಥಳದ ಮಾಲಕ ಕೆ.ವೆಂಕಪ್ಪ ನಾಯ್ಕ ಶಾಂತಿನಗರ, ಮರದ ವ್ಯಾಪಾರಿ ಹಳೆಗೇಟಿನ ರಿಫಾಯಿ ಬಿನ್ ಕುಂಞಪ್ಪ, ಕ್ರೇನ್‌ ಚಾಲಕ ಈಶ್ವರ್ ನಾಯ್ಕ ಜಯನಗರ, ಲಾರಿ ಚಾಲಕ ಹಾಸನದ ಚಂದ್ರೇಗೌಡ ಬಂಧಿತರು. ಆರೋಪಿಗಳಿಂದ ಮರ ಸಾಗಾಟ ಮಾಡಲು ಬಳಸಿದ ಲಾರಿ, ಕ್ರೇನ್ ಹಾಗೂ 7.946 ಘ.ಮೀ.ಮರವನ್ನು ವಶಪಡಿಸಿಕೊಳ್ಳಲಾಗಿದ್ದು ಒಟ್ಟು ಮೌಲ್ಯ 15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮರಗಳನ್ನು ಅಕ್ರಮವಾಗಿ ಕಡಿದು …

Read More »

ಕಾಪು: ಪೊಲೀಸ್ ಕ್ವಾಟ್ರಸ್ ನಲ್ಲೇ ನೇಣಿಗೆ ಶರಣಾದ ಮಹಿಳಾ ಕಾನ್‌ಸ್ಟೆಬಲ್

ಕಾಪು : ಕಾಪು ಪೊಲೀಸ್ ಠಾಣೆಯ ಮಹಿಳಾ ಪೇದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 29 ವರ್ಷದ ಜ್ಯೋತಿ ಆತ್ಮಹತ್ಯೆ ಮಾಡಿಕೊಂಡವರು. ಜ್ಯೋತಿ ಬಾಗಲಕೋಟೆ ಮೂಲದವರು.ಕಾಪು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಎಂದಿನಂತೆ ಕರ್ತವ್ಯ ನಿರ್ವಹಿಸಿದ್ದ ಅವರು ರಾತ್ರಿ ಕ್ವಾಟ್ರಸ್ ಗೆ ಮರಳಿದ್ದು ಶನಿವಾರ ಬೆಳಿಗ್ಗೆ ನೇಣಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.  ಜ್ಯೋತಿ ಪೊಲೀಸ್ ಕ್ವಾಟ್ರಸ್ ನಲ್ಲೇ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಮೃತ ಪೊಲೀಸ್ ಸಿಬಂದಿಯ ಪತಿ ಕೆ.ಎಸ್.ಆರ್.ಟಿ.ಸಿ ಸಿಬಂದಿಯಾಗಿದ್ದು ಪತಿ ಬೆಳಿಗ್ಗೆ ಕರ್ತವ್ಯಕ್ಕೆ ಹೋಗಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ, ಡಿವೈಎಸ್ಪಿ ಅರವಿಂದ ಕಲಗುಜ್ಹಿ, …

Read More »

You cannot copy content of this page.