ತಾಜಾ ಸುದ್ದಿ

ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ 21 ನಾಮಪತ್ರ ಸಲ್ಲಿಕೆ- ಒಟ್ಟು 11 ಅಭ್ಯರ್ಥಿಗಳಿಂದ ನಾಮಪತ್ರ

ಮಂಗಳೂರು: ಏ.26ರಂದು ನಡೆಯಲಿರುವ ದ.ಕ. ಲೋಕಸಭಾ ಹಿನ್ನಲೆಯಲ್ಲಿ ದ.ಕ.ಜಿಲ್ಲೆಯಿಂದ ಒಟ್ಟು 11 ಅಭ್ಯರ್ಥಿಗಳಿಂದ 21 ನಾಮಪತ್ರ ಸಲ್ಲಿಕೆಯಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಕ್ಯಾ.ಬ್ರಿಜೇಶ್ ಚೌಟ(42), ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ಆರ್. (53),ಜನತಾ ಪಕ್ಷ ಹಾಗೂ ಜನತಾದಳ (ಯು) ಎರಡಕ್ಕೂ ಸುಪ್ರೀತ್ ಕುಮಾ‌ರ್ ಪೂಜಾರಿ (47), ಬಹುಜನ್ ಸಮಾಜ್ ಪಾರ್ಟಿ (ಬಿಎಸ್ಪಿ)ಯಿಂದ ಕಾಂತಪ್ಪ (63), ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಕೆ.ಇ.ಮನೋಹರ (47), ಕರ್ನಾಟಕ ರಾಷ್ಟ್ರ ಸಮಿತಿಯಿಂದ ರಂಜಿನಿ ಎಂ.(39) ಮತ್ತು ಕರುನಾಡ ಸೇವಕರ ಪಾರ್ಟಿಯಿಂದ ದುರ್ಗಾಪ್ರಸಾದ್ (33) ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಫ್ರಾನ್ಸಿಸ್ ಲ್ಯಾನ್ಸಿ ಮಾಡ್ತಾ (60), …

Read More »

ಪಡುಬಿದ್ರಿ: ಟೈಮಿಂಗ್ ಕುರಿತಾಗಿ ವಾಗ್ವಾದ- ಬಸ್ಸನ್ನು ಹೆದ್ದಾರಿಗೆ ಅಡ್ಡಲಾಗಿ ನಿಲ್ಲಿಸಿ ಬಸ್ ಸ್ಟ್ಯಾಂಡ್ ನಲ್ಲಿ ಕುಳಿತ ಡ್ರೈವರ್

ಪಡುಬಿದ್ರಿ : ಖಾಸಗಿ ಬಸ್ ಡ್ರೈವರ್ ಬಸ್ ನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಸೀದ ಹೋಗಿ ಬಸ್ ಸ್ಟ್ಯಾಂಡ್ ನಲ್ಲಿ ಕುಳಿತಿದ್ದಾನೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಪುವಿನ ಟೈಂ ಕೀಪರ್ ಶರತ್ ಹಾಗೂ ಖಾಸಗಿ ಬಸ್ ಚಾಲಕ ಅಜೀಜ್ ಮಧ್ಯೆ ಈ ಗಲಾಟೆ ನಡೆದಿದೆ. ಟೈಮಿಂಗ್ ಕುರಿತಾಗಿ ನಡೆದಿದ್ದ ಗಲಾಟೆ ಪಡುಬಿದ್ರಿ ತಲುಪಿದ ವೇಳೆ ಜೋರಾಗಿದೆ. ಸರ್ವಿಸ್ ಬಸ್ ಎಂಎಂಎಸ್‌ಗೆ ಟೈಂ ಕೀಪರ್ ಶರತ್ ಅಡ್ಡ ನಿಂತಾಗ ಕುಪಿತಗೊಂಡ ಚಾಲಕ ಅಜೀಜ್ ಬಸ್ ನ್ನು ರಸ್ತೆ ಅಡ್ಡಲಾಗಿ …

Read More »

ರೈಲಿನಲ್ಲಿ ಯುವಕನನ್ನು ಬಾತ್​ರೂಮ್​ ಒಳಗಡೆ ಎಳೆದೊಯ್ದು ಲಾಕ್​ ಮಾಡಿಕೊಂಡ ಮಂಗಳಮುಖಿ!

ಕೆಲವು ಮಂಗಳಮುಖಿಯರು ರೈಲಿನಲ್ಲಿ ಬಂದು ಪ್ರಯಾಣಿಕರಿಂದ ಹಣ ಕೇಳುವುದು ಸಾಮಾನ್ಯವಾಗಿದೆ. ಯಾರೂ ಕೆಲಸ ಕೊಡುವುದಿಲ್ಲ ಅಂತಾ ಬದುಕಲು ಬೇರೆ ದಾರಿ ಇಲ್ಲದೆ ಹಣ ಕೇಳುತ್ತಾರೆ. ಕೆಲವೊಮ್ಮೆ ಹಣ ಕೊಡದಿದ್ದರೆ ಅಸಭ್ಯವಾಗಿಯೂ ವರ್ತಿಸುವ ಮೂಲಕ ಟೀಕೆಗು ಗುರಿಯಾಗುತ್ತಾರೆ. ರೈಲುಗಳಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿವೆ. ಆದರೆ, ಇಂತಹ ಘಟನೆ ನಗೆಪಾಟಲಿಗೀಡಾದರೂ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಇದನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯೂ ಇದೆ. ವಿಡಿಯೋದಲ್ಲಿ ಏನಿದೆ? ವಿಡಿಯೋದಲ್ಲಿ ರೈಲಿನ ಒಳಗೆ ಕೆಲವು ಯುವಕರು ಬಾತ್​ರೂಮ್​ ಬಾಗಿಲಿನ ಬಳಿ ನಿಂತಿದ್ದಾರೆ. ಅಲ್ಲಿ ಓರ್ವ ಮಂಗಳಮುಖಿ ಕೈ ಚಪ್ಪಾಳೆ ತಟ್ಟುತ್ತಾ ಯುವಕರ ಬಳಿಕ …

Read More »

ಉಡುಪಿ: ಬಟ್ಟೆ ಅಂಗಡಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಗಳ ಬಂಧನ

ಬಟ್ಟೆ ಅಂಗಡಿಯೊಂದರಲ್ಲಿ ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಗಂಗೊಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಗಂಗೊಳ್ಳಿಯ ಸುಲ್ತಾನ್ ಮೊಹಲ್ಲಾ ನಿವಾಸಿ ನದೀಮ್ (27), ಗಂಗೊಳ್ಳಿಯ ಜಾಮೀಯಾ ಮೊಹಲ್ಲಾ ನಿವಾಸಿ ಮೊಹಮ್ಮದ್ ಆರೀಫ್(18), ಭಟ್ಕಳದ ಚೌಥನಿ ರಸ್ತೆ ಸಮೀಪದ ನಿವಾಸಿ ಮೊಹಮ್ಮದ್ ರಯ್ಯಾನ್ (18) ಬಂಧಿತ ಆರೋಪಿಗಳು. ಇನ್ನು ಕಳ್ಳತನ ಕೃತ್ಯದಲ್ಲಿ ಭಾಗಿಯಾದ ಕಾನೂನು ಸಂಘರ್ಷಕ್ಕೊಳಗಾದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದು ಬಾಲನ್ಯಾಯ ಮಂಡಳಿ ಎದುರು ಪೊಲೀಸರು ಹಾಜರು ಪಡಿಸಿದ್ದಾರೆ. ಬಂಧಿತರಿಂದ ಮೊಬೈಲ್ ಫೋನ್, 52,000 ರೂ. ಹಣ ಹಾಗೂ 1 ಬೈಕ್ ಹಾಗೂ 1 …

Read More »

ಮಂಗಳೂರು: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ

ಮಂಗಳೂರು:  ಇಂದು ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಲು ಬಂಟ್ಸ್ ಹಾಸ್ಟೆಲ್ ಪಕ್ಕದ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಕಚೇರಿಯಿಂದ ಮೆರವಣಿಗೆಯಲ್ಲಿ ದ.ಕ ಜಿಲ್ಲಾಧಿಕಾರಿ ಕಚೇರಿಗೆ ಬ್ರಿಜೇಶ್ ಚೌಟ ಆಗಮಿಸಿದರು. ಇನ್ನು ನಾಮಪತ್ರವನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಅವರು ಸ್ವೀಕರಿಸಿದರು. ಚೌಟ ಅವರು ನಾಮಪತ್ರ ಸಲ್ಲಿಸುವ ವೇಳೆ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, …

Read More »

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿಒಟ್ಟು 1.95 ಕೋಟಿ ರೂ ಮದ್ಯ ವಶ

ಮಂಗಳೂರು: 2024ರ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಎ. 3ರ ವರೆಗೆ ಜಿಲ್ಲೆಯಲ್ಲಿ 1.95 ಕೋಟಿ ರೂ. ಮೌಲ್ಯದ 90.4 ಸಾವಿರ ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ. ಹಾಗೂ 8.69 ಲಕ್ಷ ರೂ. ಮೌಲ್ಯದ 15.5 ಕೆ.ಜಿ. ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ನಿಯಮ ಉಲ್ಲಂಘನೆ ಸೇರಿದಂತೆ ಒಟ್ಟು 278 ಎಫ್‌ಐಆರ್ ದಾಖಲಾಗಿದೆ. ದೂರವಾಣಿ ಮೂಲಕ 157 ಸಾರ್ವಜನಿಕರಿಂದ ಮಾಹಿತಿ ಸ್ವೀಕರಿಸಿ ವಿಲೇವಾರಿ ಮಾಡಲಾಗಿದೆ. ಸಿ-ವಿಸಿಲ್ ಆ್ಯಪ್ ಮೂಲಕ 59 ದೂರುಗಳು ಸ್ವೀಕೃತಗೊಂಡಿದ್ದು ಎಲ್ಲ ದೂರುಗಳನ್ನು ವಿಲೇವಾರಿ ಮಾಡಲಾಗಿದೆ. ಎನ್‌ಜಿಆರ್‌ಎಸ್‌ ಪೋರ್ಟಲ್ (ರಾಷ್ಟ್ರೀಯ …

Read More »

ಹಿರಿಯಡ್ಕ : ಪೊಲೀಸರಿಂದ ರೌಡಿ ಶೀಟರ್ ಮನೆಯ ಮೇಲೆ ದಾಳಿ…!!

ಬ್ರಹ್ಮಾವರ: ಉಡುಪಿ ಸಮೀಪದ ರೌಡಿ ಶೀಟರ್ ದಿವಾಕರ್ ಆಚಾರ್ಯ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿ ಸಜೀವ ಗುಂಡುಗಳು ಸೇರಿದಂತೆ ಅಕ್ರಮ ವಸ್ತುಗಳನ್ನು ವಶಕ್ಕೆ ಪಡೆದ ಘಟನೆ ಉಡುಪಿಯ ಹಿರಿಯಡ್ಕದಲ್ಲಿ ಸಂಭವಿಸಿದೆ ಬ್ರಹ್ಮಾವರ ಪೊಲೀಸ್‌ ಠಾಣೆಯ ಉಪನಿರೀಕ್ಷಕ ಮಧು ಬಿ.ಇ ಅವರಿಗೆ ಹಿರಿಯಡ್ಕ ಠಾಣಾ ವ್ಯಾಪ್ತಿಯ ರೌಡಿ ದಿವಾಕರ ಎಂಬಾತನು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಮಾಹಿತಿ ಬಂದಿದೆ. ಈ ಹಿನ್ನೆಲೆ ಸಿಬ್ಬಂದಿಯವರೊಂದಿಗೆ ಆತನ ಮನೆಗೆ ತೆರಳಿ ಪರಿಶೀಲಿಸಿದಾಗ ಕಪ್ಪು ಬಣ್ಣದ ಬಟ್ಟೆ ಪೌಚ್‌, ಸಜೀವ ಮದ್ದು ಗುಂಡುಗಳು, ಮಸಿ ಕೋವಿಗೆ ಬಳಸುವ ಮದ್ದುಗುಂಡುಗಳು, …

Read More »

ವಿಟ್ಲ: ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆ ಆತ್ಮಹತ್ಯೆ

ವಿಟ್ಲ: ಮಹಿಳೆಯೋರ್ವರು ಮನೆ ಸಮೀಪದ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಪಡ್ನೂರು ಗ್ರಾಮದ ಕುಂಟುಕುಡೇಲು ಕಾಪಿಕಾಡ್ ಎಂಬಲ್ಲಿ ನಡೆದಿದೆ. ವಿಟ್ಲ ಪಡ್ನೂರು ಗ್ರಾಮದ ಕುಂಟುಕುಡೇಲು ಕಾಪಿಕಾಡ್ ನಿವಾಸಿ ಸುಶೀಲಾ(60) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಸುಶೀಲಾ ಅವರ ಪತಿ ಮೂರು ತಿಂಗಳ ಹಿಂದಷ್ಟೇ ಹೃದಯಾಘಾತದಿಂದ ಮೃತಪಟ್ಟಿದ್ದರು‌. ಬಳಿಕ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಅವರು ಇಂದು ತನ್ನ ಮನೆ ಸಮೀಪದ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಕಡಬ: ಖಾಸಗಿ ಬಸ್ ಹಾಗೂ ಕಂಟೆನರ್ ನಡುವೆ ಭೀಕರ ಅಪಘಾತ..!

ಕಡಬ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಉದನೆ ಎಂಬಲ್ಲಿ ಖಾಸಗಿ ಬಸ್ ಹಾಗೂ ಕಂಟೆನರ್ ನಡುವೆ ಭೀಕರ ಅಪಘಾತ ಸಂಭವಿದೆ. ಅಪಘಾತದಲ್ಲಿ ಹಲವರು ಗಂಭೀರ  ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗಿದೆ. ಮೈಸೂರು ಪಿರಿಯಾಪಟ್ಟಣ ದಿಂದ ಧರ್ಮಸ್ಥಳಕ್ಕೆ ಮದುವೆ ಕಾರ್ಯಕ್ಕೆ ಹೊರಟ ಬಸ್ ಇದಾಗಿದ್ದು ಇನ್ನೊಂದು ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಈ ಅಪಘಾತ ಸಂಭವಿಸಿದೆ. ವರನ ಕಡೆಯವರ ಬಸ್ ಎಂದು ಹೇಳಲಾಗುತ್ತಿದ್ದು ಸ್ಥಳದಲ್ಲಿ ಹಲವು ಮಂದಿ ಸೇರಿದ್ದಾರೆ.ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದು …

Read More »

ಉಡುಪಿ: ರೌಡಿಶೀಟರ್ ನಿವಾಸದ ಮೇಲೆ ಪೊಲೀಸರ ದಾಳಿ..!

ಉಡುಪಿ: ರೌಡಿ ದಿವಾಕರ್ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿ ಸಜೀವ ಗುಂಡುಗಳು ಸೇರಿದಂತೆ ಅಕ್ರಮ ವಸ್ತುಗಳನ್ನು ವಶಕ್ಕೆ ಪಡೆದ ಘಟನೆ ಉಡುಪಿಯ ಹಿರಿಯಡ್ಕದಲ್ಲಿ ನಡೆದಿದೆ. ಬ್ರಹ್ಮಾವರ ಪೊಲೀಸ್‌ ಠಾಣೆಯ ಉಪನಿರೀಕ್ಷಕರಾದ ಮಧು ಬಿ.ಇ ಅವರಿಗೆ ಹಿರಿಯಡ್ಕ ಠಾಣಾ ವ್ಯಾಪ್ತಿಯ ರೌಡಿ ದಿವಾಕರ ಎಂಬಾತನು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಮಾಹಿತಿ ಬಂದಿದೆ. ಈ ಹಿನ್ನೆಲೆ ಮಂಗಳವಾರ ಸಿಬ್ಬಂದಿಯವರೊಂದಿಗೆ ಆತನ ಮನೆಗೆ ತೆರಳಿ ಪರಿಶೀಲಿಸಿದಾಗ ಕಪ್ಪು ಬಣ್ಣದ ಬಟ್ಟೆ ಪೌಚ್‌, ಸಜೀವ ಮದ್ದು ಗುಂಡುಗಳು, ಮಸಿ ಕೋವಿಗೆ ಬಳಸುವ ಮದ್ದುಗುಂಡುಗಳು, ಪ್ಲಾಸ್ಟಿಕ್‌ ಪೌಚ್‌ ನಲ್ಲಿ …

Read More »

You cannot copy content of this page.