ತಾಜಾ ಸುದ್ದಿ

ಕುಂದಾಪುರ : ಭೀಕರ ಅಪಘಾತ -ಮೂವರ ಸ್ಥಿತಿ ಗಂಭೀರ

ಕುಂದಾಪುರ :ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡ ಘಟನೆ ಕುಂದಾಪುರದ ಕೆ ಎಸ್ ಆರ್ ಟಿ ಸಿ ಡಿಪೋ ಎದುರುಗಡೆ ನಡೆದಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ಕೇರಳ ರಾಜ್ಯದ ಪಾಂಡಿಚೇರಿ ಮಾಹಿತಿ ಎಂಬಲ್ಲಿಗೆ ಹಿಂತಿರುಗುತ್ತಿದ್ದ ಮೂವರು ಭಕ್ತರು ಪ್ರಯಾಣಿಸುತ್ತಿದ್ದ ಟೊಯೋಟೊ ಇನ್ನೋವಾ ಕಾರು ಅಪಘಾತಗೀಡಾಗಿದೆ. ಕುಂದಾಪುರ ಉಡುಪಿ ನಡುವಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಂದಾಪುರ ಸಮೀಪದ ಕೆ ಎಸ್ ಆರ್ ಟಿ ಸಿ ಡಿಪೋ ಎದುರುಗಡೆ ಫ್ಲೈ …

Read More »

ಮಂಗಳೂರು: ಇಂದಿನಿಂದ 3 ದಿನ ರೈಲು ಸಂಚಾರ ಸೇವೆಗಳಲ್ಲಿ ಬದಲಾವಣೆ

ಮಂಗಳೂರು: ಪಾಲಕ್ಕಾಡ್ ವಿಭಾಗದ ವಿವಿಧ ಸ್ಥಳಗಳಲ್ಲಿ ಟ್ರ್ಯಾಕ್ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಎ.9ರಿಂದ 11ರ ತನಕ ರೈಲು ಸಂಚಾರ ಸೇವೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಹರ್ಝತ್ ನಿಝಾಮುದ್ದೀನ್ ಜಂಕ್ಷನ್-ಎರ್ನಾಕುಲಂ ಜಂಕ್ಷನ್ ಮಂಗಳಾ ಲಕ್ಷದ್ವೀಪ್ ಸೂಪರ್ ಫಾಸ್ಟ್ ಎಕ್ಸ್‌ ಪ್ರೆಸ್‌(ರೈಲು ಸಂಖ್ಯೆ 12618 ) ಪ್ರಯಾಣವು ಎ.9ರಂದು ಹರ್ಝತ್ ನಿಝಾಮುದ್ದೀನ್ ಜಂಕ್ಷನ್‌ನಿಂದ 50 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ. ಹರ್ಝತ್ ನಿಝಾಮುದ್ದೀನ್ ಜಂಕ್ಷನ್-ಎರ್ನಾಕುಲಂ ಜಂಕ್ಷನ್ ಮಂಗಳಾ ಲಕ್ಷದ್ವೀಪ್ ಸೂಪರ್‌ಫಾಸ್ಟ್ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 12618) ಎಪ್ರಿಲ್ 10ರಂದು ಹರ್ಝತ್ ನಿಝಾಮುದ್ದೀನ್ ಜಂಕ್ಷನ್‌ ನಿಂದ 40 …

Read More »

ಉಡುಪಿ: ರೈಲಿನಲ್ಲಿ ಅಕ್ರಮ ಹಣ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

ಉಡುಪಿ: ಮುಂಬಯಿಯಿಂದ ತಿರುವನಂತಪುರಕ್ಕೆ ಹೋಗುತ್ತಿದ್ದ ನೇತ್ರಾವತಿ ಎಕ್‌ಪ್ರಸ್‌ ರೈಲಿನಲ್ಲಿ ಪ್ರಯಾಣಿಕನೊಬ್ಬ ಸಾಗಿಸುತ್ತಿದ್ದ 24,99,500 ರೂ. ಹಣ ವನ್ನು ಉಡುಪಿ ರೈಲ್ವೇ ರಕ್ಷಣಾ ದಳ ಪೊಲೀಸರು ಪತ್ತೆಹಚ್ಚಿದ್ದಾರೆ. ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ.ಭಟ್ಕಳ ನಿವಾಸಿ ಫಹಾದ್‌ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ‌. ಮುಂಜಾನೆ ಕರ್ತವ್ಯದಲ್ಲಿದ್ದ ಆರ್‌ಎಎಫ್ಒ ಎಎಸ್‌ಐ ಯು.ಡಿ. ಸುಧೀರ್‌ ಶೆಟ್ಟಿ ಜನರಲ್‌ ಕೋಚ್‌ ತಪಾಸಣೆ ಮಾಡುತ್ತಿದ್ದಾಗ ಹಣ ಪತ್ತೆಯಾಯಿತು ಎನ್ನಲಾಗಿದೆ‌ ಇಂದ್ರಾಳಿ ನಿಲ್ದಾಣಕ್ಕೆ ರೈಲು ತಲುಪಿದ ಬಳಿಕ ಚುನಾವಣ ನೀತಿಸಂಹಿತೆ ಹಿನ್ನೆಲೆಯಲ್ಲಿ ಚುನಾವಣ ಕೋಶಕ್ಕೆ ಮಾಹಿತಿ ನೀಡಲಾಯಿತು. ಫ್ಲೈಯಿಂಗ್ ಸ್ಕ್ವಾಡ್‌ ಎಫ್‌ಎಸ್ಟಿ …

Read More »

ವೇಣೂರಿನಲ್ಲಿ ಅಕ್ರಮ ಮರಳು ಸಾಗಾಟ – 2 ವಾಹನ ಸಹಿತ ಆರೋಪಿಗಳು ಪೊಲೀಸ್ ವಶಕ್ಕೆ

ಬೆಳ್ತಂಗಡಿ: ಅಕ್ರಮ ಮರಳು ಸಾಗಾಟದ ಪ್ರಕರಣವನ್ನು ಪತ್ತೆಹಚ್ಚಿದ ವೇಣೂರು ಪೊಲೀಸರು, ಎರಡು ಪಿಕಪ್ ಹಾಗೂ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವೇಣೂರಿನ ಪಲ್ಗುಣಿ ನದಿಯಲ್ಲಿ ಅಕ್ರಮವಾಗಿ, ಮರಳು ಕಳ್ಳತನ ಮಾಡಿ ಸಾಗಾಟ ಮಾಡುತ್ತಿರುವುದಾಗಿ ಎ.7ರಂದು ರಾತ್ರಿ ಮಾಹಿತಿ ಬಂದ ಮೇರೆಗೆ, ಪಿಎಸ್‌ಐ ಶ್ರೀಶೈಲ್ ಡಿ. ಮುರಗೋಡ್, ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ, ವೇಣೂರು ಡ್ಯಾಂ ಬಳಿ ಕರಿಮಣೇಲು ಗ್ರಾಮದ ನಿವಾಸಿ ಸತೀಶ್ (44) ಮತ್ತು ಮೂಡುಕೋಡಿ ಗ್ರಾಮದ ನವೀನ್ (35) ಎಂಬವರು, ಎರಡು ಪಿಕಪ್ ಗಳಲ್ಲಿ ತಲಾ 30 ಬುಟ್ಟಿ – ಗಳಷ್ಟು …

Read More »

ಯುಗಾದಿ ದಿನ ಬೇವು ಬೆಲ್ಲ ಸೇವನೆ ಮಾಡೋದು ಯಾಕೆ?

ಯುಗಾದಿ ಹಬ್ಬದ ದಿನ ಮುಂಜಾನೆ ಎದ್ದು ಅಭ್ಯಂಜನ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಮನೆಯನ್ನು ತಳಿರು ತೋರಣಗಳಿಂದ ಸಿಂಗಾರ ಮಾಡಲಾಗುತ್ತದೆ. ಈ ದಿನ ದೇವರಿಗೆ ಪೂಜೆ ಮಾಡಿ ಹಬ್ಬದ ತಿನಿಸು ತಿನ್ನುವ ಮುನ್ನ ಬೇವು ಬೆಲ್ಲ ಸೇವನೆ ಮಾಡಲಾಗುತ್ತದೆ. ಬೇವು ಬೆಲ್ಲದ ಸೇವನೆ ಯಾಕೆ ಮಾಡಬೇಕು ಅನ್ನೋದಕ್ಕೆ ಒಂದಿಷ್ಟು ಮಾಹಿತಿ ಇಲ್ಲಿದೆ.   ಬೇವು ಬೆಲ್ಲವನ್ನು ಮಿಕ್ಸ್ ಮಾಡಿಕೊಂಡು ಎರಡನ್ನೂ ಸೇವನೆ ಮಾಡಬೇಕು. ಯಾಕೆ ಗೊತ್ತ. ಬೇವು-ಬೆಲ್ಲವು ಸುಖ-ದುಃಖ, ರಾತ್ರಿ-ಹಗಲು ಇವುಗಳ ಸಂಕೇತಗಳಾಗಿವೆ. ಮಾನವರ ಬದುಕಿನಲ್ಲಿ ಸುಖ-ದುಃಖಗಳು ಅವಿಭಾಜ್ಯ ಅಂಶಗಳು. ಇವೆಲ್ಲವುಗಳೊಂದಿಗೆ ಸಮತೋಲನ …

Read More »

ಉಡುಪಿ: ಹೋಟೆಲ್ ಕಾರ್ಮಿಕ ನೇಣು ಬಿಗಿದು ಆತ್ಮಹತ್ಯೆ

ಉಡುಪಿ: ಹೋಟೆಲೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನೊಬ್ಬ, ತಾನಿರುವ ವಿಶ್ರಾಂತಿ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ರಾತ್ರಿ ಉಡುಪಿಯಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡಿರುವ ಕಾರ್ಮಿಕನನ್ನು ಹೇರೂರಿನ ಸಂತೋಷ ರಘುರಾಮ ಶೆಟ್ಟಿ ಎಂದು ಗುರುತಿಸಲಾಗಿದೆ. ಇನ್ನು ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ನಗರ ಪೋಲಿಸ್ ಠಾಣಾಧಿಕಾರಿ ಪುನೀತ್ ಕುಮಾರ್, ತನಿಖಾ ಸಹಾಯಕ ಮರಿ ಗೌಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಮೃತದೇಹವನ್ನು ಅಜ್ಜರಕಾಡಿನ ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ರವಾನಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಸಹಕರಿಸಿದರು.

Read More »

ವಾಹನ ಸವಾರರ ಗಮನಕ್ಕೆ: ಮೇ 31 ರೊಳಗೆ ‘HSRP’ ನಂಬರ್ ಪ್ಲೇಟ್ ಹಾಕಿಸದಿದ್ರೆ ದಂಡ ಫಿಕ್ಸ್..!

ಬೆಂಗಳೂರು: ಕರ್ನಾಟಕದಲ್ಲಿ 2019 ರ ಏಪ್ರಿಲ್ 1ಕ್ಕಿಂತ ಹಿಂದೆ ನೋಂದಾಯಿಸಿದ ದ್ವಿಚಕ್ರ, ತ್ರಿಚಕ್ರ, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರು, ಮಧ್ಯಮ, ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್‌ & ಟ್ರ್ಯಾಕ್ಟರ್‌ಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸುವುದು ಕಡ್ಡಾಯ. ರಾಜ್ಯ ಸರ್ಕಾರವು ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಲು ಮೇ.31ರವರೆಗೆ ಅವಕಾಶ ನೀಡಿದೆ. ರಾಜ್ಯ ಸಾರಿಗೆ ಇಲಾಖೆ ಮೇ. 31ರವರೆಗೆ ಎಚ್ ಎಸ್ ಆರ್ ಪಿ ಪಡೆಯಲು ನೋಂದಣಿ ಮಾಡಿಕೊಳ್ಳಲು ಅವಕಾಸ ನೀಡಿದೆ. ಅದಾದನಂತರ ಜೂ. 1 ರಿಂದ ಪೊಲೀಸ್ ಇಲಾಖೆ …

Read More »

ಏ.14ರಂದು ಪ್ರಧಾನಿ ಮೋದಿ ಮಂಗಳೂರಿಗೆ..!

ಲೋಕಸಭೆ ಚುನಾವಣಾ ಕಣ ರಂಗೇರುತ್ತಿದ್ದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಪಕ್ಷಗಳ ಪ್ರಚಾರದ ಅಬ್ಬರ ಜೋರಾಗುತ್ತಿದೆ. ಇದೀಗ ಪ್ರಧಾನಿ ಮೋದಿ ಅವರು ಕೂಡ BJPಯ ಭದ್ರಕೋಟೆ ಕರಾವಳಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಲಿದ್ದಾರೆ. ಮೂಲಗಳ ಪ್ರಕಾರ, ಮೋದಿ ಅವರು ಏ.14ರಂದು ಬೆಂಗಳೂರು & ಚಿಕ್ಕಬಳ್ಳಾಪುರದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಅದೇದಿನ ಸಂಜೆ ಮೋದಿ ಮಂಗಳೂರಿಗೆ ಆಗಮಿಸುವ ನಿರೀಕ್ಷೆಯಿದ್ದು, ನಗರದಲ್ಲಿ ಸಾವರ್ಜನಿಕ ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಹಿಂದೆ 2022ರ ಸೆ.2ರಂದು ಮೋದಿ ಅವರು ಮಂಗಳೂರಿಗೆ ಬಂದಿದ್ದರು.

Read More »

ಮುಲ್ಕಿ:ಬಳಕುಂಜೆ “ಕರಿಯ ದೇಸಿಂಗರಾಯ – ಬೊಳಿಯ ದೇಸಿಂಗರಾಯ” ಜೋಡುಕರೆ ಕಂಬಳದ ಫಲಿತಾಂಶ

ಮುಲ್ಕಿ : ಬಳಕುಂಜೆ “ಕರಿಯ ದೇಸಿಂಗರಾಯ – ಬೊಳಿಯ ದೇಸಿಂಗರಾಯ” ಜೋಡುಕರೆ ಕಂಬಳ ಸಮಾರಂಭಗೊಂಡಿತು ಸಮಾರೋಪ ಸಮಾರಂಭದಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ವಿರಾರ್ ಶಂಕರ್ ಶೆಟ್ಟಿ, ಕಣ್ಣೀರು ವಿಶ್ವನಾಥ ಶೆಟ್ಟಿ, ಅಧ್ಯಕ್ಷೆ ಮಲ್ಲಿಕಾ ಯಶವಂತ ಶೆಟ್ಟಿ, ಕಾರ್ಯಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ ಕೋಲ್ನಾಡು ಗುತ್ತು, ಉಪಾಧ್ಯಕ್ಷರಾದ ದಿನೇಶ್ ಸುವರ್ಣ ಬೆಳ್ಳಾಯರು, ಕಾರ್ಯದರ್ಶಿ ವೀರೇಂದ್ರ ಪೂಂಜ ಕೋಟ್ನಾಯ ಗುತ್ತು, ರಂಜನ್ ಶೆಟ್ಟಿ, ಕೆಂಪುಗುಡ್ಡೆ, ದಿನಕರ ಶೆಟ್ಟಿ, ಬಳಕುಂಜ, ಶರತ್ ಶೆಟ್ಟಿ ಸಂಕಲಕರಿಯ ಹಾಗೂ ವಿವಿಧ ಸೇವಾ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದು ಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. …

Read More »

ಕಾಸರಗೋಡು : ನಾಲ್ಕು ತಿಂಗಳ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ

ಕಾಸರಗೋಡು: ನಗರದ ಮುಳ್ಳೇರಿಯ ಸಮೀಪ ನಾಲ್ಕು ತಿಂಗಳ ಹೆಣ್ಣು ಮಗುವನ್ನು ಕೊಲೆ ಗೈದ ಬಳಿಕ ತಾಯಿ ಕೈಯ ನರ ಕತ್ತರಿಸಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಸಂಭವಿಸಿದೆ ‌ ಇಡುಕ್ಕಿ ತೊಡುಪುಳ ನಿವಾಸಿ ಶರತ್‌ ಅವರ ಪತ್ನಿ ಬಿಂದು (28) ಆತ್ಮಹತ್ಯೆ ಮಾಡಿಕೊಂಡವರು ಅವರ ನಾಲ್ಕು ತಿಂಗಳ ಹೆಣ್ಣು ಮಗುವಿನ ಹೆಸರು ಶ್ರೀನಂದಾ. ಶರತ್‌ ಇಸ್ರೇಲ್‌ನಲ್ಲಿ ಉದ್ಯೋಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಬಿಂದು ತೊಡುಪುಳದಲ್ಲಿರುವ ಪತಿಯ ಮನೆಯಿಂದ ಪುತ್ರಿ ಶ್ರೀನಂದ ಮತ್ತು ಪುತ್ರ ಶ್ರೀಹರಿಯೊಂದಿಗೆ ಕಳೆದ ಆದಿತ್ಯವಾರ ಮುಳಿಯಾರು ಬಳಿಯ ಕೋಪಾಳಕೊಚ್ಚಿಗೆ ಬಂದಿ ದ್ದರು. ಎ. …

Read More »

You cannot copy content of this page.