ಮಣಿಪಾಲ: ನಗರಸಭೆ ಮಾಜಿ ಅಧ್ಯಕ್ಷೆ ಪತಿಗೆ ರಾಡ್‌ನಿಂದ ಹಲ್ಲೆ- ಸ್ಥಿತಿ ಚಿಂತಾಜನಕ

ಮಣಿಪಾಲ: ಉಡುಪಿ ನಗರ ಸಭೆಯ ಮಾಜಿ ಅಧ್ಯಕ್ಷೆ ಶಾಂತಾ ನಾಯ್ಕ್ ಅವರ ಮನೆಗೆ ನುಗ್ಗಿದ ಯುವಕನೋರ್ವ ಅವರ ಪತಿಗೆ ರಾಡ್‌ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಡೆದಿದೆ.

ಮಣಿಪಾಲ ಠಾಣೆ ವ್ಯಾಪ್ತಿಯ ಅಲೆವೂರು ಸಮೀಪದ ಮಂಚಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಕೃಷ್ಣ ನಾಯ್ಕ್ (54) ಹಲ್ಲೆಗೆ ಒಳಗಾದವರು. ಅರ್ಜುನ್ ಎಂಬ ಯುವಕ ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೃಷ್ಣ ನಾಯ್ಕ್ ಅವರ ಮನೆಗೆ ಬಂದಿದ್ದ. ಈ ವೇಳೆ ಗೇಟ್ ಮುಂದೆಯೇ ಕೃಷ್ಣ ನಾಯ್ಕ್ ಅವರ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಧಿಕ ರಕ್ತಸ್ರಾವವಾಗಿರುವ ಕಾರಣ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

Check Also

ಮುತ್ತೂರು: ಕೊಳವೂರು ಶಕ್ತಿ ಕೇಂದ್ರದ ಭಾರತೀಯ ಜನತಾ ಪಾರ್ಟಿಯ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳವೂರು ಶಕ್ತಿ ಕೇಂದ್ರದ ಭಾರತೀಯ ಜನತಾ ಪಾರ್ಟಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ …

Leave a Reply

Your email address will not be published. Required fields are marked *

You cannot copy content of this page.