ತಾಜಾ ಸುದ್ದಿ

ಮೂಡುಬಿದಿರೆ : ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು..!

ಮೂಡುಬಿದಿರೆ: ನಿರ್ಮಾಣ ಹಂತದ ಕಟ್ಟಡದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಯುವಕ ಆಕಸ್ಮಿಕವಾಗಿ ಕಾಲುಜಾರಿ ಕೆಳಗೆ ಬಿದ್ದು ಗಂಭೀರವಾಗಿರುವ ಮೃತಪಟ್ಟ ಘಟನೆ ಮಂಗಳವಾರ ಸಂಜೆ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಸಾಂಬಾಲ್ ಜಿಲ್ಲೆಯ ರಾಯೀಸ್ ಅಹಮ್ಮದ್ ಎಂಬವರ ಪುತ್ರ ಸಮೀರ್ (19) ಮೃತಪಟ್ಟ ಯುವಕ. ಸಮೀ‌ರ್ ಕಳೆದ ಎರಡು ತಿಂಗಳ ಹಿಂದೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ವೆಲ್ಡಿಂಗ್‌ ಕೆಲಸಕ್ಕೆ ಸೇರಿಕೊಂಡಿದ್ದ. ಮಂಗಳವಾರ ಶಾಂಭವಿ ಹಾಸ್ಟೆಲ್‌ನ 5ನೇ ಮಹಡಿಯ ರೋಪ್ ಮೇಲೆ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಆತ …

Read More »

ಸುರತ್ಕಲ್ ಎನ್ ಐ.ಟಿ.ಕೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಧಗಧಗನೆ ಹೊತ್ತಿ ಉರಿದ ಕಾರು

ಸುರತ್ಕಲ್: ಹಠಾತ್ ಬೆಂಕಿ ಕಾಣಿಸಿಕೊಂಡ ಪರಿಣಾಮ ಸಂಚಾರದಲ್ಲಿದ್ದ ಐಷಾರಾಮಿ ಕಾರು ಸುಟ್ಟು ಕರಕಲಾದ ಘಟನೆ ಸುರತ್ಕಲ್ ಎನ್ಐಟಿಕೆ ಹಳೆ ಟೋಲ್‌ ಗೇಟ್ ಬಳಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಸುಟ್ಟು ಕರಕಲಾಗಿದ್ದು ಬಿಎಂಡಬ್ಲ್ಯೂ ಕಾರೆಂದು ಹೇಳಲಾಗುತ್ತಿದ್ದು, ಕಾರು ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮಂಗಳೂರು ಕಡೆ ತೆರಳುತ್ತಿತ್ತು ಎನ್ನಲಾಗಿದೆ. ಎನ್ಐಟಿಕೆ ಬಳಿ ಬರುತ್ತಿದ್ದಾಗ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ ಎನ್ನಲಾಗಿದೆ. ಬೆಂಕಿ ಅವಘಡದಲ್ಲಿ ಸಾವು ನೋವು ಸಂಭವಿಸಿರುವ ಮಾಹಿತಿ ಲಭ್ಯವಾಗಿಲ್ಲ. ಮಂಗಳೂರು ಉತ್ತರ ಸಂಚಾರ ಪೊಲೀಸರು, ಸುರತ್ಕಲ್ ಠಾಣೆಯ ಪೊಲಿಸರು …

Read More »

ಕಡಬ : ವಿದ್ಯಾರ್ಥಿನಿಯರ ಮೇಲಿನ ಆ್ಯಸಿಡ್ ದಾಳಿ ಪ್ರಕರಣ : ಆರೋಪಿಯ ಜಾಮೀನು ಅರ್ಜಿ ವಜಾ

ಕಡಬ: ನಾಡಿನಲ್ಲಿ ಸಂಚಲನ ಉಂಟುಮಾಡಿದ್ದ ದಕ್ಷಿಣ ಕನ್ನಡದ ಕಡಬ ವಿದ್ಯಾರ್ಥಿನಿಯರ ಮೇಲಿನ ಆ್ಯಸಿಡ್ ದಾಳಿ ಪ್ರಕರಣದಲ್ಲಿ ಆರೋಪಿಯ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ ಆರೋಪದಡಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಯುವಕನ ಜಾಮೀನು ಅರ್ಜಿಯನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸರಿತಾ.ಡಿ. ಅವರು ವಜಾಗೊಳಿಸಿದ್ದಾರೆ. ಕೇರಳ ಮಲ್ಲಾಪುರದ ಅಬಿನ್  ಎಂಬಾತ ತನ್ನನ್ನು ನಿರ್ಲಕ್ಷಿಸುತ್ತಿದ್ದಾಳೆ ಎಂಬ ಕಾರಣದಿಂದ ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ …

Read More »

ಉಡುಪಿ: ಹಿಜಾಬ್ ಕಾರಣಕ್ಕೆ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ತಡೆ..? ಏನಿದು ವಿವಾದ

ಕುಂದಾಪುರ : ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ 2023-2024ನೇ ಸಾಲಿನ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ಪ್ರಕಟವಾಗಿದ್ದು, ಈ ಬಾರಿಯ ಪ್ರಶಸ್ತಿಗೆ ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಆಯ್ಕೆಯಾಗಿದ್ದರು.ಆದರೆ ಎರಡು ವರ್ಷಗಳ ಹಿಂದೆ ನಡೆದಿದ್ದ “ಹಿಜಾಬ್ ವಿವಾದ” ದಿಂದಾಗಿ ಇವರ ಆಯ್ಕೆಗೆ ಸರಕಾರ ತಡೆ ನೀಡಿದೆ. ಎರಡು ವರ್ಷಗಳ ಹಿಂದೆ ಹಿಜಾಬ್‌ ವಿವಾದದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರನ್ನು ಕಾಲೇಜಿನ ಗೇಟಿನಲ್ಲಿ ತಡೆದು ನಿಲ್ಲಿಸಿದ್ದ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಅವರನ್ನು 2024-25ನೇ ಶೈಕ್ಷಣಿಕ ಸಾಲಿಗೆ ರಾಜ್ಯಮಟ್ಟದ ‘ಉತ್ತಮ …

Read More »

ಉಡುಪಿ: ಕಾರ್ಕಳ ಅತ್ಯಾಚಾರ ಪ್ರಕರಣ, ಡ್ರಗ್ಸ್ ಜಾಲದ ಬಗ್ಗೆ ಎಲ್ಲ ಆಯಾಮಗಳಲ್ಲಿ ತನಿಖೆ – ಉಡುಪಿ ಎಸ್ಪಿ ಮಾಹಿತಿ

ಉಡುಪಿ : ಕಾರ್ಕಳ ಯುವತಿಯ ಅತ್ಯಾಚಾರ ಪ್ರಕರಣದ ತನಿಖೆ ಒಂದು ಆಯಾಮದಲ್ಲಿ ನಡೆದರೆ ,ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿರುವುದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ.ಪ್ರಮುಖ ಆರೋಪಿ ಅಲ್ತಾಫ್ ಅತ್ಯಾಚಾರ ಎಸಗಿದ್ದರೆ ಅಭಯ್ ಎಂಬಾತ ಕೃತ್ಯ ನಡೆದ ಸ್ಥಳಕ್ಕೆ ಡ್ರಗ್ಸ್ ತಂದು ಕೊಟ್ಟಿದ್ದ. ಡ್ರಗ್ಸ್ ತಂದು ಕೊಟ್ಟವರಿಗೆ ತಿರುಪತಿ, ಬೆಂಗಳೂರು ತನಕ ಸಂಪರ್ಕ ಇತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಿಂದೂ ಯುವತಿಯನ್ನು ಆಗಸ್ಟ್ 24 ರಂದು ಅಪಹರಿಸಿ ಕೌಡೂರು ಬಳಿಯ ರಂಗನಪಲ್ಕೆಯ ಕಾಡಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಅಲ್ತಾಫ್, ರಿಚರ್ಡ್ …

Read More »

ಉಡುಪಿ: ಆನ್ ಲೈನ್ ವಂಚನೆ ಪ್ರಕರಣ- ಆರೋಪಿಯ ಬಂಧನ..!

ಉಡುಪಿ: ಪ್ರಶಾಂತ್‌ ಶೆಟ್ಟಿ ಎಂಬವರ ಬ್ಯಾಂಕ್ ಖಾತೆಯಿಂದ,ಅವರ ಗಮನಕ್ಕೆ ಬಾರದೇ ಹಣ ವರ್ಗಾಯಿಸಿ ವಂಚಿಸಿದ್ದ ಸೈಬರ್ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಒರಿಸ್ಸಾ ರಾಜ್ಯದ ಬೈರಂಪುರದ ವಿಶಾಲ್‌‌ ಕೋನಪಾಲ(30) ಬಂಧಿತ ಆರೋಪಿ. ಪ್ರಶಾಂತ್ ಶೆಟ್ಟಿ ವಿದೇಶದಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಯೂನಿಯನ್ ಬ್ಯಾಂಕ್ ಬೆಳ್ಮಣ್‌‌ ಶಾಖೆಯಲ್ಲಿ ಎರಡು ಖಾತೆಯನ್ನು ಹೊಂದಿರುತ್ತಾರೆ. ಎರಡು ಖಾತೆಗಳಲ್ಲಿ Paytm ಆನ್‌ಲೈನ್ ಪೆಮೆಂಟ್ ಸಿಸ್ಟ್ಂ ಅನ್ನು ಹೊಂದಿದ್ದು ಯಾರೋ ಅಪರಿಚಿತರು ಆನ್‌ಲೈನ್ ಮೂಲಕ ಅವರ ಖಾತೆಗಳಿಂದ ಹಂತ ಹಂತವಾಗಿ ಒಟ್ಟು ರೂ. 1,56,100ರೂ. ವನ್ನು ವರ್ಗಾಯಿಸಿಕೊಂಡಿದ್ದರು.ಇದೀಗ ಆರೋಪಿಯನ್ನು ಬಂಧಿಸಿ ಆತನಿಂದ 1,56,100 ರೂ. ವಶಪಡಿಸಿ …

Read More »

ಬಂಟ್ವಾಳ: ಗ್ಯಾಸ್ ಸಿಲಿಂಡರ್ ಕಳವು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

ಬಂಟ್ವಾಳ: ಗ್ಯಾಸ್ ಸಿಲಿಂಡರ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಶಿಕ್ಷೆಗೊಪಟ್ಟು ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಟೆರ್ಕಾ ನಿವಾಸಿ ಶರೀಫ್ ಸಿ.ಅಬ್ಟಾಸ್ ಬಂಧಿತ ಆರೋಪಿ. ಆರೋಪಿ ಶರೀಫ್ ಸಿ.ಅಬ್ಟಾಸ್ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಈ ವೇಳೆ ನ್ಯಾಯಾಲಯ 1 ವರ್ಷ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಆರೋಪಿಯು ಸುಮಾರು 22 ವರ್ಷಗಳ ಹಿಂದೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ, ಬಿ.ಸಿ.ರೋಡಿನ ಗ್ಯಾಸ್ ಏಜನ್ಸಿಯೊಂದರಿಂದ ಗ್ಯಾಸ್ ಸಿಲಿಂಡರ್ ಗಳನ್ನು ಕಳವು ಮಾಡಿದ …

Read More »

ಮಂಗಳೂರು: ಅತ್ಯಾಚಾರ ಆರೋಪ ಪ್ರಕರಣ – ಖುಲಾಸೆ

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ ಆರೋಪ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. 2019ರಲ್ಲಿ ಆರೋಪಿ ಚಾಲಕ ಉಮೇಶ್ ಸಾಲ್ಯಾನ್ ಯುವತಿಯೊಂದಿಗೆ ಆತ್ಮೀಯತೆಯಿಂದಿದ್ದು, ತಂದೆಯ ಶಸ್ತ್ರಚಿಕಿತ್ಸೆಗೆ 1 ಲ.ರೂ. ಪಡೆದುಕೊಂಡು ಅದನ್ನು 2 ತಿಂಗಳಲ್ಲಿ ನೀಡುವುದಾಗಿ ಹೇಳಿದ್ದ ಯುವತಿ ಆ ಹಣವನ್ನು ಕೇಳಿದಾಗ + ಕೊಡದೆ ಸತಾಯಿಸುತ್ತಿದ್ದ ನ. 20ರಂದು ಹಣ ನೀಡುವುದಾಗಿ ತನ್ನ ಮನೆಗೆ ಕರೆಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ. ಆದರೆ ಅನಂತರ ಮದುವೆಯಾಗಲು ಒಪ್ಪಿರಲಿಲ್ಲ. ಯುವತಿ ಮಗುವಿಗೆ ಜನ್ಮ ನೀಡಿದ್ದಳು. ಈ …

Read More »

ನಿಶ್ಚಿತಾರ್ಥವಾಗಬೇಕಿದ್ದ ಬೆಳ್ತಂಗಡಿಯ ಯುವಕ ವೇಶ್ಯಾವಾಟಿಕೆ ದಂಧೆಯಲ್ಲಿ ಅರೆಸ್ಟ್..!

ಕೆಲವೇ ದಿನಗಳಲ್ಲಿ ಮದುವೆ ನಿಶ್ಚಿತಾರ್ಥವಾಗಬೇಕಿದ್ದ ಬೆಳ್ತಂಗಡಿಯ ಟೆಕ್ಕಿಯೊಬ್ಬ ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ವಾಸವಿದ್ದ ಟೆಕ್ಕಿ ಸುಬ್ರಮಣ್ಯ ಶಾಸ್ತ್ರಿ ಬಂಧಿತ ಆರೋಪಿ. ಈತ ಹೊಂಗಸಂದ್ರದ ಮನೆಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಗೆ ಗ್ರಾಹಕನಾಗಿ ತೆರಳಿದ್ದಾಗ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಶಾಸ್ತ್ರಿಯ ನಿಜಬಣ್ಣ ಬಯಲಾಗುತ್ತಿದ್ದಂತೆ ಶೀಘ್ರ ನಡೆಯಬೇಕಿದ್ದ ಈತನ ನಿಶ್ಚಿತಾರ್ಥ ರದ್ದುಗೊಂಡಿದೆ. ಪೊಲೀಸರು ಬಾಂಗ್ಲಾ ಮೂಲದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿದ್ದಾರೆ.

Read More »

ಗುಡ್ ನ್ಯೂಸ್ : ಕೇಂದ್ರ ಸರ್ಕಾರದಿಂದ ಇನ್ಮುಂದೆ ಬಡವರಿಗೆ ಅಕ್ಕಿ ಜೊತೆ ಸಿಗಲಿದೆ 9 ವಸ್ತುಗಳು!

ನವದೆಹಲಿ- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವವರಿಗೆ ಪಡಿತರ ಚೀಟಿ ನೀಡುತ್ತವೆ. ಲಾನುಭವಿಗಳ ಆಹಾರ ಭದ್ರತೆಗಾಗಿ ಉಚಿತ ಪಡಿತರವನ್ನು ಒದಗಿಸುತ್ತದೆ. ಆದರೆ ಈಗ ಭಾರತ ಸರ್ಕಾರ ಈ ಯೋಜನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಹೊರಟಿದೆ. ಈ ಹಿಂದೆ ಕೇಂದ್ರವು ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ನೀಡುತ್ತಿತ್ತು. ಆದರೆ ಇದೀಗ ಉಚಿತ ಅಕ್ಕಿ ಬದಲಿಗೆ 9 ಅಗತ್ಯ ವಸ್ತುಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ. ಭಾರತ ಸರ್ಕಾರದ ಉಚಿತ ಪಡಿತರ ಯೋಜನೆಯಡಿ ದೇಶದ 90 ಕೋಟಿ ಜನರಿಗೆ ಉಚಿತ ಪಡಿತರವನ್ನು ನೀಡಲಾಗುತ್ತಿದೆ. …

Read More »

You cannot copy content of this page.