ತಾಜಾ ಸುದ್ದಿ

ಮಂಜೇಶ್ವರ: ಆರೋಗ್ಯ ಅಧಿಕಾರಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ವಸತಿ ಗೃಹದಲ್ಲಿ ಪತ್ತೆ

ಮಂಜೇಶ್ವರ: ಆರೋಗ್ಯ ಅಧಿಕಾರಿರೋರ್ವರು ವಾಸಸ್ಥಳದ ಶೌಚಾಲಯದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಮಂಗಳವಾರ ಸಂಜೆ ಬೆಳಕಿಗೆ ಬಂದಿದೆ. ಪತ್ತನಂತ್ತಿಟ್ಟದ ಮನೋಜ್ (45) ಮೃತಪಟ್ಟವರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಕುಟುಂಬ ಕಲ್ಯಾಣ ಕೇಂದ್ರದ ಆರೋಗ್ಯಾಧಿಕಾರಿ ಆಗಿದ್ದರು. ಮಂಜೇಶ್ವರ ಎಸ್ ಐ ಟಿ ಶಾಲಾ ಸಮೀಪದ ವಸತಿ ಗೃಹ ದಲ್ಲಿ ವಾಸವಾಗಿದ್ದರು ದುರ್ವಾಸನೆ ಕಂಡು ಬಂದ ಹಿನ್ನಲೆಯಲ್ಲಿ ಪರಿಸರ ವಾಸಿಗಳು ಗಮನಿಸಿದಾಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಒಬ್ಬರು ಮಾತ್ರ ಈ ಕೊಠಡಿಯಲ್ಲಿದ್ದರು ಎನ್ನಲಾಗಿದೆ. ಹೃದಯಘಾತದಿಂದ ಮೃತಪಟ್ಟಿರಹುದು ಎಂದು ಶಂಕಿಸಲಾಗಿದೆ. ಎರಡು ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು …

Read More »

ಉಡುಪಿ: ತಲವಾರಿನಿಂದ ಹತ್ಯೆ ಯತ್ನ ಪ್ರಕರಣ – ಆರೋಪಿಗಳ ವಿರುದ್ಧ ಶೀಘ್ರ ಚಾರ್ಜ್ ಶೀಟ್ – ಉಡುಪಿ ಎಸ್‌ಪಿ

ಉಡುಪಿ: ಉಡುಪಿಯಲ್ಲಿ ನಡೆದಿದ್ದ ತಲ್ವಾರ್‌ನಲ್ಲಿ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರನ್ನು ಬಂಧಿಸಿದ್ದು ಅವರ ವಿರುದ್ಧ ಶೀಘ್ರ ಚಾರ್ಜ್‌ಶೀಟ್ ಸಲ್ಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಎಸ್‌ಪಿ ಡಾ.ಅರುಣ್ ಕೆ. ಹೇಳಿದ್ದಾರೆ. ಇದೇ ತಿಂಗಳ ಜೂನ್ 16ರಂದು ಉಡುಪಿಯಲ್ಲಿ ಈ ಘಟನೆ ನಡೆದಿತ್ತು. ಚರಣ್ ಮತ್ತು ಸ್ನೇಹಿತರ ಮೇಲೆ ಹಳೆ ದ್ವೇಷದಿಂದ ಯುವಕರ ಗುಂಪು ಉಡುಪಿಯ ಪುತ್ತೂರು ಎಂಬಲ್ಲಿ ತಲವಾರಿನಿಂದ ಕೊಲೆಯತ್ನ ಮಾಡಿತ್ತು. ಬಳಿಕ ಚರಣ್ ಅವರ ವಾಹನಕ್ಕೂ ದುಷ್ಕರ್ಮಿಗಳ ತಂಡ ಹಾನಿ ಉಂಟು ಮಾಡಿತ್ತು. ಈ ಸಂಬಂಧ ಅಭಿ , …

Read More »

ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲು ಪಾಲು | ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ

ಬೆಂಗಳೂರು:ಲೈಂಗಿಕ ಕಿರುಕುಳ ಹಾಗೂ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣರನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್’ಐಟಿ ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ನ್ಯಾಯಾಲಯ ಪ್ರಜ್ವಲ್ ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ.

Read More »

ನಟ ದರ್ಶನ್‌ ಫಾರ್ಮ್‌ ಹೌಸ್‌ ಮ್ಯಾನೇಜರ್‌ ವಿಷ ಸೇವಿಸಿ ಆತ್ಮಹತ್ಯೆ..!

ಬೆಂಗಳೂರು : ಕಾಣೆಯಾಗಿದ್ದ ನಟ ದರ್ಶನ್‌ ಫಾರ್ಮ್‌ ಹೌಸ್‌ ಮ್ಯಾನೇಜರ್‌ ಶ್ರೀಧರ್‌ ಎಂಬಾತನ ಶವ ಪತ್ತೆಯಾಗಿದ್ದು,‌ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ನಟ ದರ್ಶನ್‌ ಫಾರ್ಮ್‌ ಹೌಸ್‌ ಮ್ಯಾನೇಜರ್‌ ಶ್ರೀಧರ್‌ (35) ವಿಷ ಸೇವಿಸಿ ಏಪ್ರಿಲ್‌ 17 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಯುವ ಮುನ್ನ ಬರೆದಿಟ್ಟಿರುವ ಡೆತ್‌ ನೋಟ್‌ ಕೂಡ ಪತ್ತೆಯಾಗಿದೆ. ಕೀಟನಾಶಕ ಸೇವನೆ ಮಾಡಿ ಶ್ರೀಧರ್‌ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಆತ ಸಾಯುವ ಮುನ್ನ ಬರೆದಿಟ್ಟಿದ್ದು, ಇದೀಗ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ …

Read More »

ನೃತ್ಯ ಸರಣಿಯಲ್ಲಿ ಅನ್ವಿತ ತಂತ್ರಿ ಮತ್ತು ಅರ್ಪಿತ ತಂತ್ರಿ

ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ ನೃತ್ಯಶಂಕರ ಸರಣಿ 50ರಲ್ಲಿ ಕುಮಾರಿಯರಾದ ಅನ್ವಿತ ತಂತ್ರಿ ಮತ್ತು ಅರ್ಪಿತ ತಂತ್ರಿ ಸಹೋದರಿಯರಿಂದ ಕಿಕ್ಕಿರಿದು ತುಂಬಿದ್ದ ಕೊಡವೂರು ದೇವಳದ ವಸಂತ ಮಂಟಪದಲ್ಲಿ ನೃತ್ಯಾರ್ಪಣೆ ಕಾರ್ಯಕ್ರಮವು ಅಮೋಘ ಅಭಿನಯದ ಮೂಲಕ ಸಂಪನ್ನಗೊಂಡಿತು. ಭರತನಾಟ್ಯದಲ್ಲಿ ಸಮಕಾಲಿನ ನೃತ್ಯದೊಂದಿಗೆ ಸೈ ಎನಿಸಿಕೊಂಡ ಪ್ರಸ್ತುತಿಯು ಪೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ನೃತ್ಯಶಂಕರ ಸರಣಿ ಮೂಲಕ ಹಲವಾರು ಪ್ರತಿಭೆಗಳಿಗೆ ಶ್ರೀದೇವಳದಲ್ಲಿ ವೇದಿಕೆ ಅವಕಾಶ ಮಾಡಿಕೊಟ್ಟ ಸಂಯೋಜಕರ ಕೆಲಸ ಶ್ಲಾಘನೀಯ. ಕೊಡವೂರು ನೃತ್ಯನಿಕೇತನದ ವಿದ್ವಾನ್ ಸುಧೀರ್ ರಾವ್ ಕೊಡವೂರು …

Read More »

ಉಡುಪಿ : ಯುವಕನ ಮೇಲೆ ತಲವಾರು ದಾಳಿ..!

ಉಡುಪಿ : ಪುತ್ತೂರಿನ ಸೆಲೂನಿನಲ್ಲಿ ಕೆಲಸವನ್ನು ಮಾಡಿಕೊಂಡಿದ್ದ ಯುವಕನ ಮೇಲೆ ತಂಡವೊಂದು ತಲವಾರಿನಿಂದ ದಾಳಿ ನಡೆಸಿದ ಘಟನೆ ಉಡುಪಿಯ ಪುತ್ತೂರಿನಲ್ಲಿ ನಡೆದಿದೆ. ಉಡುಪಿಯ ಪುತ್ತೂರು ಗ್ರಾಮದ ಚರಣ್ ಯು ಹಲ್ಲೆಗೊಳಗಾದ ವ್ಯಕ್ತಿ. ಈತನ ಮೇಲಿರುವ ಹಳೇ ದ್ವೇಷದ ಕಾರಣಕ್ಕೆ ಯುವಕನ ಮೇಲೆ ತಂಡವೊಂದು ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದೆ ಎಂದು ವಿಚಾರ ಬೆಳಕಿಗೆ ಬಂದಿದೆ‌ ಚರಣ್ ಸೆಲೂನಿನಲ್ಲಿ ಕೆಲಸ ಮಾಡುತ್ತಿದ್ದಾಗ ಅಭಿ ಕಟಪಾಡಿ ಎಂಬಾತ ಕರೆಮಾಡಿ ಶಬರಿ ಎಂಬುವವನ ಬಗ್ಗೆ ಮಾತನಾಡ ಬೇಕಾಗಿದೆ ಎಂದು ಪುತ್ತೂರಿನ ಚೈನಾ ಟೌನ್ ಬಿರಿಯಾನಿ ಪಾಯಿಂಟ್ ಬಳಿ …

Read More »

ಉಪ್ಪಿನಂಗಡಿ: ಮಹಿಳೆ ಸಾವು- ಕೊಲೆ ಶಂಕೆ

ಉಪ್ಪಿನಂಗಡಿ ಸಮೀಪದ ಇಲ್ಲಿನ ಪೆರ್ನೆ ಬಳಿಯ ಬಿಳಿಯೂರು ದರ್ಹಾಸ್‌ ಎಂಬಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ. ಇಲ್ಲಿನ ನಿವಾಸಿ ಹೇಮಾವತಿ (37) ಮೃತ ಮಹಿಳೆ. ಈಕೆ ತಾಯಿ, ಅಕ್ಕನ ಮಗನೊಂದಿಗೆ ಈ ಮನೆಯಲ್ಲಿದ್ದ ವೇಳೆ ನಿನ್ನೆ ರಾತ್ರಿ ಕೃತ್ಯ ನಡೆದಿದೆ. ಮೊದಲಿಗೆ ಪರಿಸರದಲ್ಲಿ ಹೃದಯಾಘಾತವೆಂಬ ಸುದ್ದಿ ಹರಡಿತ್ತು. ಆದರೆ ಬಳಿಕ ಈ ಬಗ್ಗೆ ಸಂಶಯ ವ್ಯಕ್ತವಾಗಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

Read More »

ಸುಳ್ಯ: ಶಾಲೆಯ ಜಗಲಿಯಲ್ಲಿ ಯುವಕನ ಶವ ಪತ್ತೆ; ಕೊಲೆ ಶಂಕೆ..!

ಸುಳ್ಯ: ಯುವಕನೊಬ್ಬನ ತಲೆಗೆ ಕಲ್ಲು ಹೊತ್ತು ಹಾಕಿ ಕೊಲೆ ಮಾಡಿರುವ ರೀತಿಯಲ್ಲಿ ಶವ ಪತ್ತೆಯಾದ ಘಟನೆ ಸುಳ್ಯ ತಾಲೂಕಿನ ಅಜ್ಞಾವರ ಗ್ರಾಮದ ಕಾಂತಮಂಗಲದಲ್ಲಿ ನಡೆದಿದೆ. ಮೃತ ವ್ಯಕ್ತಿಯ ವಯಸ್ಸು ಸುಮಾರು 25-30 ವರ್ಷ ಎಂದು ಅಂದಾಜಿಸಲಾಗಿದ್ದು ಸುಳ್ಯ ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸುತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಬೆಳ್ಳಾರೆಯಲ್ಲಿಯೂ ಕೂಡ ಇದೇ ರೀತಿ ಮಹಿಳೆಯನ್ನು ಕಲ್ಲು ಹೊತ್ತು ಹಾಕಿ ಕೊಲೆ ಮಾಡಿದ್ದ ಘಟನೆ ನಡೆದಿದ್ದು ಇದಕ್ಕೆ ಸಂಬಂಧಪಟ್ಟ ಆರೋಪಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಇದೀಗ ಮತ್ತೆ ಅದೇ ರೀತಿಯ ಘಟನೆ ನಡೆದಿದ್ದು ಸ್ಥಳೀಯರಲ್ಲಿ …

Read More »

ಮಣಿಪಾಲ: ಗಾಂಜಾ ಸೇವನೆ – ಐವರು ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ

ಮಣಿಪಾಲ: ಗಾಂಜಾ ಸೇವನೆಗೈದ ಐವರು ವಿದ್ಯಾರ್ಥಿಗಳನ್ನು ಹಯಗ್ರೀವ ನಗರ 5 ನೇ ಕ್ರಾಸ್‌ ಬಳಿ ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಣಿಪಾಲದ ವಿದ್ಯಾರ್ಥಿಗಳಾದ ಅಶೀಲ (20), ರೆನಜೋ ಎಸ್‌. ಚಂದ್ರಗಿರಿ(20), ಅಭಿನವ ಸುರೇಶ್(20), ಶ್ರೀಹರಿ(19), ಅಭಿಜಿತ್(20) ಎಂಬವರನ್ನು ವಶಕ್ಕೆ ಪಡೆದ ಪೊಲೀಸರು, ಮಣಿಪಾಲ ಕೆಎಂಸಿ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ಆ ವರದಿಯಲ್ಲಿ ಇವರೆಲ್ಲ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More »

ಪುತ್ತೂರು: ಕಾರುಗಳ ಮಧ್ಯೆ ಭೀಕರ ಅಪಘಾತ – ಇಬ್ಬರು ಮೃತ್ಯು

ಪುತ್ತೂರು: ಕುಂಬ್ರದ ಶೇಖಮಲೆ ಎಂಬಲ್ಲಿ ಆಲ್ಲೋ ಕಾರು ಮತ್ತು ಬೊಲೆರೊ ನಡುವೆ ಪರಸ್ಪರ ಡಿಕ್ಕಿಯಾಗಿದ್ದು ಆಲ್ಲೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ ಮೃತಪಟ್ಟವರು ಮಡಿಕೇರಿ ಮೂಲದ ರವೀಂದ್ರ ಹಾಗೂ ಲೊಕೇಶ್ ಎಂದು ತಿಳಿದುಬಂದಿದೆ. ಮಂಗಳೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಆಲ್ಟ ಕಾರು ಕುಂಬ್ರದ ಶೇಖಮಲೆಯಲ್ಲಿ ಬೈಕಿಗೆ ಮೊದಲು ಡಿಕ್ಕಿ ಆಗಿತ್ತು. ನಂತರ ನಿಯಂತ್ರಣ ತಪ್ಪಿದ ಕಾರು ಪುತ್ತೂರು ಕಡೆಗೆ ಬರುತ್ತಿದ್ದ ಬೊಲೆರೋ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಲ್ಲೋ ಕಾರಿನಲ್ಲಿದ್ದ ಇರ್ವರು ಮೃತಪಟ್ಟಿದ್ದು, ಬೈಕ್‌ ಸವಾರನಿಗೆ ಗಾಯವಾಗಿದೆ …

Read More »

You cannot copy content of this page.