ತಾಜಾ ಸುದ್ದಿ

ನಾಪತ್ತೆಯಾಗಿದ್ದ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಪೂಜಾ ಶವವಾಗಿ ಪತ್ತೆ..!!!!

ಶಿವಮೊಗ್ಗ: ಆಗುಂಬೆಯಲ್ಲಿ ನಾಪತ್ತೆ ಆಗಿದ್ದ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ತೀರ್ಥಹಳ್ಳಿ ತಾಲೂಕಿನ ಹಸಿಮನೆ ಗ್ರಾಮದ ಪೂಜಾ AK (24) ಅವರ ಮೃತದೇಹ ಪತ್ತೆಯಾಗಿದೆ.ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಾಲೂರು ಸಮೀಪದ ಅರಣ್ಯ ಪ್ರದೇಶದಲ್ಲಿ ಶವ ಪತ್ತೆಯಾಗಿದ್ದು, ಭೀಕರವಾಗಿ ಕೊಲೆಗೈದು ಅರಣ್ಯ ಪ್ರದೇಶದಲ್ಲಿ ಶವವನ್ನು ಬೀಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಎಸ್​ಕೆಡಿಆರ್​ಡಿಪಿ ಸಂಸ್ಥೆಯಲ್ಲಿ (ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ)ಯಾಗಿ ಪೂಜಾ ಕೆಲಸ ಮಾಡುತ್ತಿದ್ದಳು. ಕಳೆದ ಜೂನ್ 29 ರಂದು ನಾಪತ್ತೆಯಾಗಿದ್ದಳು. ಪ್ರಕರಣ ಸಂಬಂಧ ಆಗುಂಬೆ ಪೊಲೀಸರು ಮಣಿಕಂಠ ಎಂಬಾತನ ವಶಕ್ಕೆ ಪಡೆದುಕೊಂಡಿದ್ದಾರೆ. ವೈಯಕ್ತಿಕ ವಿಚಾರಕ್ಕೆ ಕೊಲೆ …

Read More »

ರುಚಿಕರವಾದ ಮಟನ್​ ಬಿರಿಯಾನಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿ : ಮಟನ್​​ 500 ಗ್ರಾಂ, 2 ಕಪ್​ ಅಕ್ಕಿ, 2 ಲವಂಗ, 2 ದಾಲ್ಚಿನ್ನಿ ಎಲೆ, ಹಸಿ ಮೆಣಸು 5, ಈರುಳ್ಳಿ 2, ಖಾರದಪುರಿ 3 ಚಮಚ, ಗರಂ ಮಸಾಲಾ 1 ಚಮಚ, ಮೊಸರು 2 ಚಮಚ, ಎಣ್ಣೆ 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು ಮಾಡುವ ವಿಧಾನ : ಪ್ರೆಶರ್​ ಕುಕ್ಕರ್​ನಲ್ಲಿ ಸ್ವಲ್ಪ ಎಣ್ಣೆಯನ್ನ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಲವಂಗ ಹಾಗೂ ಪಲಾವ್​ ಎಲೆಯನ್ನ ಹಾಕಿ. ಇದಾದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್​, ಹಸಿ ಮೆಣಸಿನಕಾಯಿ ಹಾಗೂ …

Read More »

ಉಳ್ಳಾಲ: ಚಿನ್ನಾಭರಣ ಕಳವು ಪ್ರಕರಣ- ಐವರ ಬಂಧನ

ಮಂಗಳೂರು: ಉಳ್ಳಾಲ ಠಾಣೆ ವ್ಯಾಪ್ತಿಯ ಧರ್ಮನಗರದ ಮನೆಯಲ್ಲಿ ನಡೆದ ಚಿನ್ನಾಭರಣ ಕಳವು ಪ್ರಕರಣವನ್ನು ಪೊಲೀಸರು ಬೇಧಿಸಿದ್ದು  ಇಬ್ಬರು ಅಪ್ರಾಪ್ತ ಬಾಲಕರು ಸೇರಿದಂತೆ  ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಸೇರಿದ್ದಾರೆ.  ಇಬ್ಬರು ಅಪ್ರಾಪ್ತರು ಮತ್ತು  ಶ್ರೇಯಸ್ಸ್ ಬೆಳ್ತಂಗಡಿ, ಪೃಥ್ವಿರಾಜ್ ಉರ್ವ ಮತ್ತು ತೌಸೀಫ್ ಬೆಳ್ತಂಗಡಿ  ಬಂಧಿತ ಆರೋಪಿಗಳಾಗಿದ್ದಾರೆ. ಕಳವು ಮಾಡಿದ ಚಿನ್ನಾಭರಣವನ್ನು  ಅಂಗಡಿಗಳಿಗೆ ಮಾರಾಟ ಮಾಡಿರುವು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಳ್ಳಾಲ  ಧರ್ಮನಗರ ನಿವಾಸಿ ಶ್ರೀಧರ್ ಎಂಬವರ ಮನೆಯಲ್ಲಿ ಜೂನ್ 8ರ ಬೆಳಗ್ಗೆ 8 ಗಂಟೆಯಿಂದ ಜೂ.16ರ …

Read More »

ಜುಲೈ.23ರಂದು 2024-25ನೇ ಸಾಲಿನ ‘ಕೇಂದ್ರ ಬಜೆಟ್’ ಮಂಡನೆ

ನವದೆಹಲಿ: 2024-25ನೇ ಸಾಲಿನ ಕೇಂದ್ರ ಬಜೆಟ್ ( Union Budget ) ಜುಲೈ 23 ರಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಜುಲೈ 22 ರಿಂದ ಆಗಸ್ಟ್ 12 ರವರೆಗೆ ನಡೆಯಲಿದೆ. ದಿನಾಂಕವನ್ನು ಪ್ರಕಟಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು, “ಗೌರವಾನ್ವಿತ ರಾಷ್ಟ್ರಪತಿಗಳು, ಭಾರತ ಸರ್ಕಾರದ ಶಿಫಾರಸಿನ ಮೇರೆಗೆ, 2024 ರ ಜುಲೈ 22 ರಿಂದ 2024 ರ ಆಗಸ್ಟ್ 12 ರವರೆಗೆ (ಸಂಸದೀಯ ವ್ಯವಹಾರದ ಅಗತ್ಯಗಳಿಗೆ ಒಳಪಟ್ಟು) 2024 ರ ಬಜೆಟ್ ಅಧಿವೇಶನಕ್ಕಾಗಿ ಸಂಸತ್ತಿನ ಉಭಯ ಸದನಗಳನ್ನು ಕರೆಯುವ ಪ್ರಸ್ತಾಪವನ್ನು ಅನುಮೋದಿಸಿದ್ದಾರೆ” …

Read More »

BREAKING : ಶಿವಮೊಗ್ಗದಲ್ಲಿ ಎರಡು ಕಾರುಗಳ ಮಧ್ಯ ಭೀಕರ ಅಪಘಾತ : ಸ್ಥಳದಲ್ಲೆ 3 ಸಾವು ಮೂವರು ಗಂಭೀರ

ಶಿವಮೊಗ್ಗ : ಇಂದು ಶಿವಮೊಗ್ಗದ ಲಯನ್ ಸಫಾರಿ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಎರಡು ಕಾರುಗಳ ನಡುವೆ ಭೀಕರ ಅಪಘಾತವಾಗಿದ್ದು, ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಮೂವರು ಸಾವನ್ನಪ್ಪಿದ್ದರೆ.ಮೂವರ ಸ್ಥಿತಿ ಗಂಭೀರವಾಗಿದೆ. ಅಪಘಾತದಲ್ಲಿ ಮೂವರು ದಾರುಣವಾಗಿ ಸಾವನಪ್ಪಿದ್ದು ಮೂವರ ಸ್ಥಿತಿ ಗಂಭೀರವಾಗಿದೆ. ಗಯಾಳುಗಳನ್ನು ಶಿವಮೊಗ್ಗದ ಮೆಗನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಶಿವಮೊಗ್ಗದ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ

Read More »

ಮಂಗಳೂರು: ನಕಲಿ ಷೇರ್ ಮಾರ್ಕೆಟ್ ಟ್ರೆಡಿಂಗ್ ನಲ್ಲಿ 74 ಲಕ್ಷ ವಂಚನೆ

ಮಂಗಳೂರು: ನಕಲಿ ಷೇರ್ ಮಾರ್ಕೆಟ್ ಟ್ರೆಡಿಂಗ್ ನಂಬಿ ಮಂಗಳೂರಿನ ವ್ಯಕ್ತಿಯೊಬ್ಬ 74,18,952 ರೂ. ವಂಚನೆಗೊಳಗಾದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರ ಇನ್ಸ್ಟಾಗ್ರಾಂ ನಲ್ಲಿ ಬಂದ ಷೇರು ಟ್ರೆಡಿಂಗ್ ಗೆ ಸಂಬಂಧಿಸಿದ ಲಿಂಕ್ ಕ್ಲಿಕ್ ಮಾಡಿ ಅದರ ಮೂಲಕ ನಕಲಿ ಟ್ರೆಡಿಂಗ್ ಅಕೌಂಟ್ ಕ್ರಿಯೆಟ್ ಮಾಡಿದ್ದಾರೆ. ನಂತರ ದೂರುದಾರರನ್ನು ಗ್ರೂಪ್ ಗೆ ಸೇರಿಸಿಕೊಂಡಿದ್ದಾರೆ. ಈ ಗ್ರೂಪ್‌ನಲ್ಲಿ ಷೇರು ಟ್ರೇಡಿಂಗ್ ಬಗ್ಗೆ ಆನ್ ಲೈನ್ ಮೂಲಕ ತರಬೇತಿಯನ್ನು ನೀಡಿದ್ದಾರೆ. ಎ.25 ರಂದು ಟ್ರೇಡಿಂಗ್ ಖಾತೆಯನ್ನು ತೆರೆಯಲು ವಾಟ್ಸಾಪ್ ಮೂಲಕ ಮೆಸೇಜ್ ಬಂದಿದೆ. ಹೆಚ್ಚಿನ …

Read More »

ಉಡುಪಿ: ಕಾಲೇಜಿನಲ್ಲಿ ಚುನಾವಣಾ ಭಾಷಣ-ಸಂಸದ ಕೋಟ ವಿರುದ್ಧದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ತಡೆ..!

ಉಡುಪಿ:  ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯ ವಿರುದ್ಧದ ಪ್ರಕರಣವೊಂದಕ್ಕೆ ಕರ್ನಾಟಕ ಹೈಕೋರ್ಟ್‌ ತಡೆ ನೀಡಿದೆ. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿನ ಖಾಸಗಿ ಕಾಲೇಜೊಂದರ ಆವರಣದಲ್ಲಿ ಕಾರ್ಯಕ್ರಮ ನಡೆಸಿ “ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಮಕ್ಕಳಿಗೆ ಹಲವು ಉಚಿತ ಯೋಜನೆ ಜಾರಿಗೊಳಿಸುವುದಾಗಿ ಹೇಳಿದ್ದರು. ಈ ಹೇಳಿಕೆ  ಚುನಾವಣಾ ನೀತಿ ಸಂಹಿತೆಗೆ ವಿರುದ್ದ ಎಂದು ಕೋಟ ಶ್ರೀನಿವಾಸ್‌ ಪೂಜಾರಿ ಮತ್ತು ಇತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ದಾಖಲಾಗಿರುವ  ಈ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ …

Read More »

ಕಾರ್ಕಳ: ಜೀಪು ಹಾಗೂ ರಿಕ್ಷಾ ಮುಖಾಮುಖಿ ಡಿಕ್ಕಿ – ಐವರಿಗೆ ಗಾಯ

ಕಾರ್ಕಳ : ಜೀಪು ಹಾಗೂ ರಿಕ್ಷಾ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮವಾಗಿ ರಿಕ್ಷಾದಲ್ಲಿದ್ದ ಐವರು ಗಾಯಗೊಂಡ ಘಟನೆ ಅಜೆಕಾರು ಸಮೀಪದ ಕೈಕಂಬ ಮಥುರಾ ಪಟ್ಲ ಎಂಬಲ್ಲಿ ಸಂಭವಿಸಿದೆ. ಗಾಯಾಳುಗಳನ್ನು ಹರೀಶ್(35)ಲಲಿತಾ(62) ಪ್ರೇಮಾ(58) ಶಾರದಾ(52) ಗೀತಾ(39) ಎಂದು ಗುರುತಿಸಲಾಗಿದೆ. ಅಜೆಕಾರು ವಿಭಾಗದ 108 ಅಂಬುಲೆನ್ಸ್ ಘಟನಾ ಸ್ಥಳಕ್ಕೆ ಅಗಮಿಸಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

Read More »

ಬಂಟ್ವಾಳ: ಮಧ್ಯರಾತ್ರಿ ರಿಕ್ಷಾ ನಿಲ್ಲಿಸಿ ನಾಪತ್ತೆ! ದರ್ಶನ ಪಾತ್ರಿ ನದಿಗೆ ಹಾರಿರುವ ಶಂಕೆ|

ಬಂಟ್ವಾಳ : ಕುಕ್ಕಿಪಾಡಿ ಗ್ರಾಮದ ನಿವಾಸಿ ದರ್ಶನ ಪಾತ್ರಿ ಗಿರೀಶ್ ಎಂಬವರು ಕಾಣೆಯಾಗಿದ್ದಾರೆ ಎಂಬ ದೂರು ಪೂಂಜಲ್‌ಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ತಡರಾತ್ರಿ 2 ಗಂಟೆ ಸುಮಾರಿಗೆ ಬಾಡಿಗೆ ಹೋಗಲು ಇದೆ ಎಂದು ಹೇಳಿ ಮನೆಯಿಂದ ತೆರಳಿದ್ದು, ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಪೊಳಲಿ ಸೇತುವೆ ಮೇಲೆ ರಿಕ್ಷಾ ಒಂದು ಅಡ್ಡವಾಗಿ ನಿಂತಿದ್ದನ್ನು ಗಮನಿಸಿ ಪರಿಶೀಲನೆ ನಡೆಸಿದಾಗ ರಿಕ್ಷಾದಲ್ಲಿ ಯಾರೂ ಇಲ್ಲದೇ ಇರುವುದರಿಂದ ರಿಕ್ಷಾವನ್ನು ಪರಿಶೀಲಿಸಿದ ಪೊಲೀಸರು ಗಿರೀಶನ ಮನೆಗೆ ಮಾಹಿತಿ ತಿಳಿಸಿದ್ದಾರೆ. ಅಡ್ಡೂರು-ಪೊಳಲಿ ಸೇತುವೆಯಿಂದ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ವಾಮದಪದವು …

Read More »

ಬಂಟ್ವಾಳ: ಸ್ನೇಹಿತರ ಜೊತೆ ಮೀನು ಹಿಡಿಯಲು ಹೋದ ವ್ಯಕ್ತಿ ನೀರುಪಾಲು

ಬಂಟ್ವಾಳ: ಸ್ನೇಹಿತರ ಜೊತೆ ನೇತ್ರಾವತಿ ನದಿಗೆ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ನದಿಗೆ ಬಿದ್ದು ನೀರುಪಾಲಾದ ಘಟನೆ ನಿನ್ನೆ ಸಂಜೆ ನಡೆದಿದೆ. ಸುರತ್ಕಲ್ ನಿಂದ ಸರಪಾಡಿ ಸಮೀಪದ ಮಾವಿನ ಕಟ್ಟೆ ಎಂಬಲ್ಲಿಯ ನೆಂಟರ ಮನೆಗೆ ಬಂದ ವ್ಯಕ್ತಿಗಳು ಸೇರಿದಂತೆ ನಾಲ್ಕು ಮಂದಿ ನಿನ್ನೆ ಸಂಜೆ ಗಾಳ ಹಾಕಿ ಮೀನು ಹಿಡಿಯಲು ಅಜಿಲಮೊಗರು ಸಮೀಪದ ಕೂಟೇಲು ಸೇತುವೆಯ ಸಮೀಪದ ಕಿಂಡಿ ಅಣೆಕಟ್ಟು ಬಳಿ ಬಂದಿದ್ದರು. ಮೀನು ಹಿಡಿಯುತ್ತಿರುವ ವೇಳೆ ಮೈಕಲ್ (53) ಎಂಬವರು ಆಯ ತಪ್ಪಿ ನೇತ್ರಾವತಿ ನದಿಗೆ ಬಿದ್ದು ನಾಪತ್ತೆಯಾಗಿದ್ದಾರೆ. ಭಾರೀ ಮಳೆಯಿಂದ ನದಿ …

Read More »

You cannot copy content of this page.